ಮುಂದಗೋಡ

ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ: ವಾಸುಕಿ ಸಾಂಜಿ

ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ: ವಾಸುಕಿ ಸಾಂಜಿ

ಲೋಕದರ್ಶನ ವರದಿ 

ಮುಂಡಗೋಡ:ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಹುಬ್ಬಳ್ಳಿಯ ರೋಟರಿ ಅಧಿಕಾರಿ ವಾಸುಕಿ ಸಾಂಜಿ ಹೇಳಿದರು.

ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಟ್ರಿನಿಟಿ ಹಾಲ್ನಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಇಲ್ಲಿನ ರೋಟರಿ ಕ್ಲಬ್ನ 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಪೋಲಿಯೋ ನಿರ್ಮೂಲನೆ,ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಕೆ, ನವಜಾತ ಶಿಶುಗಳ ತೀವ್ರ ನಿಘಾ ಘಟಕ ಸ್ಥಾಪನೆ ಹೀಗೆ ಮುಂತಾದ ಆರೋಗ್ಯ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಯಿಂದ ನಡೆಸಲಾಗಿದೆ ಎಂದರು. ಹುಬ್ಬಳ್ಳಿಯ ರೋಟರಿ ಉಪಪ್ರಾಂತಪಾಲ ಅಶೋಕ ಪಾಟೀಲ ಮಾತನಾಡಿದರು. ನೂತನ ಅಧ್ಯಕ್ಷ ಬೈಜು ವಿ.ಜೆ. ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ತಾಲೂಕಿನಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿಶೇಷವಾಗಿ ಹ್ಯಾಪಿ ಸ್ಕೂಲ್, ಹ್ಯಾಂಡ್ ವಾಷ್ ಪ್ರೊಜೆಕ್ಟ್, ವಿದ್ಯಾರ್ಥಿಗಳಿಗೆ ಕಿಟ್, ಮುಂತಾದವುಗಳನ್ನು ನೀಡಲು ಯೋಚನೆ ರೂಪಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಬೈಜು ವಿ.ಜೆ., ಕಾರ್ಯದಶರ್ಿಯಾಗಿ ಸುರೇಶ ಮಂಜಾಳಕರ, ಖಜಾಂಚಿಯಾಗಿ ಕಲ್ಮೇಶ ಟೋಪೋಜಿ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಡಾ.ಪಿ.ಪಿ.ಛಬ್ಬಿ, ಆರ್.ಎಸ್.ಸಜ್ಜನಶೆಟ್ಟರ, ದೀಪಕ ಮಹಾಲೆ, ಪ್ರಶಾಂತ ಬಾಡಕರ, ಕೆ.ಎನ್.ಹೆಗಡೆ, ನಟರಾಜ ಕಾತೂರ, ಸತೀಶ ಕುಡೇಕರ್, ಚೇತನ ಕಲಾಲ, ಮಹೇಶ ಹೆಗಡೆ, ಹನುಮಂತ ಅಂದಾನಪ್ಪನವರ, ನಾರಾಯಣ ದೈವಜ್ಞ, ಸಂತೋಷ ಕುಡೇಕರ್ ಮಲ್ಲಿಕಾರ್ಜುನ ನರೇಗಲ್ಲ, ಮನೋಜಕುಮಾರ ಎಮ್. ಹಾಗೂ ಮುಂತಾದವರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಶಾಜಿ ಥಾಮಸ್ ಸ್ವಾಗತಿಸಿದರು. 2021-22ನೇ ಸಾಲಿನ ಕಾರ್ಯಕ್ರಮಗಳ ವೀಡಿಯೋ ದೃಶ್ಯಗಳ ವಿವರಣೆಯನ್ನು ಎಸ್.ಕೆ.ಬೋರಕರ ನೀಡಿದರು. ಜಗದೀಶ ಕಾನಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದಶರ್ಿ ಸುರೇಶ ಮಂಜಾಳಕರ ವಂದಿಸಿದರು 

ಸುದ್ದಿ ಓದಿ