ಸಮಾಜದ ಏಳ್ಗೆಗೆ ಮಾಹಿತಿ ಹಕ್ಕು ಸದ್ಭಳಕೆ ಮಾಡಿಕೊಳ್ಳಿ : ಡಿಹೆಚ್ಒ ಜನಾರ್ಧನ್
ಬಳ್ಳಾರಿ 04: ಮಾಹಿತಿ ಹಕ್ಕು ಜ್ಞಾನವನ್ನು ಕೇವಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಪಡೆದುಕೊಂಡರೇ ಸಾಲದು; ಮಾಹಿತಿ ಹಕ್ಕು ವಿಷಯದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಒದಗಿಸಬೇಕು ಮತ್ತು ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ಅವರು ಹೇಳಿದರು.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಶುಕ್ರವಾರರಂದು ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಾಹಿತಿ ಹಕ್ಕು ಕಾಯರ್ಾಗಾರ, ಪ್ರತಿಭಾ ಪುರಸ್ಕಾರ ಹಾಗೂ ಪದನ್ನೋತಿ ಹೊಂದಿದ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಜ್ಞಾನವನ್ನು ಅಧಿಕಾರಿಗಳು, ಸಾರ್ವಜನಿಕರು ತಿಳಿದಿರಬೇಕು. ಸಕರ್ಾರಿ ಅಧಿಕಾರಿಗಳು/ಸಿಬ್ಬಂದಿಗಳು ನೇಮಕ ತದ ನಂತರ ಪದೋನ್ನತಿ ಪಡೆಯಲು ಇಲಾಖೆಯಲ್ಲಿ ನಡೆಯುವ ಪರೀಕ್ಷೆಗಳ ವಿಷಯಗಳ ಮಾಹಿತಿ ಜೊತೆಗೆ ಆರ್ಟಿಐ ವಿಷಯ ಬಗ್ಗೆ ಮಾಹಿತಿ ಪಡೆದಿರಬೇಕು. ಈ ಮಾಹಿತಿ ಹಕ್ಕನ್ನು ಪ್ರಬಲವಾಗಿ ಬಳಸಿಕೊಂಡು ಸಮಾಜದ ಏಳಿಗೆಗೆ ಉಪಯೋಗಿಸಬೇಕು. ಸರಕಾರದ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಸಾರ್ವಜನಿಕರ ಹಕ್ಕು ಎಂದರು.
ಸಮಾಜದಲ್ಲಿ ನಡೆಯುವ ಅವ್ಯವಹಾರಗಳ ತಡೆಗಟ್ಟಲು ಮಾಹಿತಿ ಹಕ್ಕು ಉಪಯೋಗಿಸಕೊಳ್ಳಬೇಕು ಎಂದು ಹೇಳಿದ ಅವರು ನಮಗೆ (ಅಧಿಕಾರಿ/ಸಿಬ್ಬಂದಿ) ಆಗುವ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಮಾಹಿತಿ ಹಕ್ಕನ್ನು ತಿಳಿದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೃಷಿ ಇಲಾಖೆಯ ಜಂಟಿ ನಿದರ್ೆಶಕರಾದ ಶರಣಪ್ಪ ಮುದಗಲ್ ಅವರು ಮಾತನಾಡಿ, ಸಕರ್ಾರಿ ಇಲಾಖೆಗಳಲ್ಲಿ ನೀಡುವ ಸೌಲಭ್ಯ ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಮಾಹಿತಿ ಹಕ್ಕು ಮಹತ್ವವಾಗಿದೆ. ಸಕರ್ಾರದಿಂದ ಸಿಗುವ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಿಸಲು ಅಧಿಕಾರಿಗಳು/ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎ.ಎಂ.ಪಿ ವಾಗೀಶ್ ಅವರು ಮಾಹಿತಿ ಹಕ್ಕು ಕಾಯರ್ಾಗಾರ ಕುರಿತು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಕ್ಷೀಪ್ತ ಮಾಹಿತಿಯನ್ನು ಒದಗಿಸಿದರು.
ಈ ಸಂದರ್ಭದಲ್ಲಿ ಐಐಟಿಗೆ ಆಯ್ಕೆಯಾದ ಜಿಲ್ಲೆಯ ಗೋವಿಂದ ಮತ್ತು ಈರಣ್ಣ ಅವರಿಗೆ ಸನ್ಮಾನಿಸಿ 5 ಸಾವಿರ ರೂ.ಗಳ ಚೆಕ್ನ್ನು ವಿತರಿಸಲಾಯಿತು. ಪದನ್ನೋತಿ ಹೊಂದಿದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಕಾಯರ್ಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿದರ್ೆಶಕರಾದ ರಾಜಪ್ಪ, ಜಿಲ್ಲಾ ಸಮನ್ವಯಧಿಕಾರಿ ಅಹ್ಮದ್ ಪಟೇಲ್ ಸೇರಿದಂತೆ ಅಧಿಕಾರಿಗಳು, ಮೋರಾಜರ್ಿ ದೇಸಾಯಿ ಹಾಗೂ ಇತರೆ ಶಾಲೆಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.