ರೇವತಿ ಗುಂಡಣ್ಣವರ ರಾಜ್ಯಕ್ಕೆ ತೃತೀಯ ಸ್ಥಾನ
ಲೋಕದರ್ಶನ ವರದಿ
ಶಿಗ್ಗಾವಿ 20: 2021-22ನೇ ಸಾಲಿನ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಶಿವಪೂರದ ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆಯ ಕು. ರೇವತಿ ಗುಂಡಣ್ಣವರ ವಿದ್ಯಾಥರ್ಿಯು 625 ಕ್ಕೆ 623 ಅಂಕಗಳನ್ನ ಪಡೆಯುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಗುಂಪಿನಲ್ಲಿ ಬರುವ ಮೂಲಕ ತಾಲೂಕಿಗೆ ಕೀತರ್ಿ ತಂದಿದ್ದಾಳೆ.
ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು ಪರೀಕ್ಷೆಗೆ ಹಾಜರಾದ 48 ವಿದ್ಯಾಥರ್ಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
39 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್, 09 ವಿದ್ಯಾಥರ್ಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶಾಲೆಯ ಫಲಿತಾಂಶವು ಪ್ರತಿಶತ 100 ಆಗಿದೆ.
ಪ್ರಥಮ ಸ್ಥಾನವನ್ನು ಕು. ರೇವತಿ ಗುಂಡಣ್ಣವರ ವಿದ್ಯಾಥರ್ಿಯು 625 ಕ್ಕೆ 623 ಅಂಕ (99.72), ದ್ವೀತಿಯ ಸ್ಥಾನವನ್ನ ಕು. ಸರಳಾ ರಾಮನಗೌಡ್ರ 625 ಕ್ಕೆ 616 ಅಂಕ (98.56), ತೃತಿಯ ಸ್ಥಾನವನ್ನ ಕು. ನಿಶ್ಚಿತಾ ಮಲಕಣ್ಣವರ 625 ಕ್ಕೆ 615 ಅಂಕ (98.40) ಪಡೆದು ವಸತಿ ಶಾಲೆಗೆ ಕೀತರ್ಿ ತಂದಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾಥರ್ಿಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಜಗದೀಶ ಹೆಬ್ಬಳ್ಳಿ, ಪ್ರಾಂಶುಪಾಲರಾದ ಸುಮಂಗಲಾ ದುರ್ಗದ, ಹಿರಿಯ ಶಿಕ್ಷಕರಾದ ಪರಶುರಾಮ ಹಿರೂಲಾಲ್, ಸಹ ಶಿಕ್ಷಕರಾದ ಮಲ್ಲನಗೌಡ ಪಾಟೀಲ, ಮನ್ಸೂರ ಅಲಿ, ಜ್ಯೋತಿ ಕಾಂಬಳೆ, ವಿದ್ಯಾ ಅರಳಿಕಟ್ಟಿ, ಯಲ್ಲವ್ವ ದಾಸರ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ