ತಾಳಿಕೋಟಿ

ಟಿಪ್ಪು ಸುಲ್ತಾನರ ತ್ಯಾಗ ಸ್ಮರಣೀಯ: ರಾಮಲಿಂಗಯ್ಯ ಶ್ರೀಗಳು

ಟಿಪ್ಪು ಸುಲ್ತಾನರ ತ್ಯಾಗ ಸ್ಮರಣೀಯ: ರಾಮಲಿಂಗಯ್ಯ ಶ್ರೀಗಳು

ತಾಳಿಕೋಟಿ: ದೇಶದ ರಕ್ಷಣೆಗಾಗಿ ಬ್ರಿಟೀಷರೊಂದಿಗೆ ರಾಜಿ ಮಾಡಿಕೊಳ್ಳದೆ ತನ್ನ ಹೆತ್ತ ಮಕ್ಕಳನ್ನೆ ಅಡುವು ಇಟ್ಟು ಹೋರಾಡಿದ ವೀರ ಅರಸ ಟಿಪ್ಪು ಸುಲ್ತಾನರ ತ್ಯಾಗ ಸ್ಮರಣೀಯವಾಗಿದೆ ಎಂದು ಚಬನೂರ ಹಿರೇಮಠದ ಜ್ಯೋತಿಷ್ಯರತ್ನ ಪ.ಪೂ. ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಚಬನೂರ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಕ್ರಾಂತಿ ಸೇನೆ ವತಿಯಿಂದ ಟಿಪ್ಪು ಸುಲ್ತಾನ ಜಯಂತಿ ಅಂಗವಾಗಿ ಸರ್ವ ಧರ್ಮಿಯರಿಗಾಗಿ ಹಮ್ಮಿಕೊಂಡ ಸೌಹಾರ್ದ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 

ಟಿಪ್ಪು ಸುಲ್ತಾನರನ್ನು ಒಂದು ಕೋಮಿಗೆ ಸೀಮಿತಗೊಳಿಸಬಾರದು. ಅವರು ಎಲ್ಲ ಜನಾಂಗಗಳಿಗೂ ಸೇರಿದ ವ್ಯಕ್ತಿ. ಅವರ ದೇಶಪ್ರೇಮ ಹಾಗೂ ತ್ಯಾಗ ಬಲಿದಾನಗಳು ಇಂದಿನ ಯುವಕರಿಗೆ ಮಾದರಿಯಾಗಿವೆ ಎಂದರು.

ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಟಿಪ್ಪು ಸುಲ್ತಾನರ ಕೊಡುಗೆಗಳು ನಾಡಿಗೆ ಅಪಾರವಾಗಿವೆ. ಅವರ ಆಡಳಿತಾವಧಿಯಲ್ಲಿ ವಿಜ್ಞಾನ, ಕೃಷಿ, ಹಾಗೂ ವ್ಯಾಪಾರದಲ್ಲಿ ನಾಡು ಸಂಪತ್ಭರಿತವಾಗಿತ್ತು. ಅವರ ಬದುಕಿನ ಅಧ್ಯಯನ ಪ್ರಾಂಜಲ ಮನಸ್ಸಿನಿಂದ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ವೇ.ಮೂ. ವೀರಪ್ಪಯ್ಯ ಹಿರೇಮಠ, ಗಣ್ಯರಾದ ಮಲ್ಲನಗೌಡ ಬಿರಾದಾರ, ಮಹಾಂತಗೌಡ ಪಾಟೀಲ, ಕಮೀಟಿ ಅಧ್ಯಕ್ಷ ನಜೀರ ಮುಲ್ಲಾ, ಮಂಜುನಾಥ ಕವಡಿಮಟ್ಟಿ, ಮಶಾಕಸಾಬ, ಎಸ್.ಜಿ. ಕುಲಕರ್ಣಿ , ದಾವಲಸಾಬ ಮುಲ್ಲಾ, ಆದಿಲ್ಸಾಬ ಇದ್ದರು 

ಸುದ್ದಿ ಓದಿ