ಗಂಗಾಪುರ ಸಿದ್ದಾರೂಢ ಆಶ್ರಮ ಮಠದಲ್ಲಿ ವಚನ ಹೂರಣ ಗ್ರಂಥ ಬಿಡುಗಡೆ
ರಾಣೆಬೆನ್ನೂರು 20: ತಾಲೂಕಿನ ಸುಕ್ಷೇತ್ರ ಜಗದ್ಗುರು ಸಿದ್ದಾರೋಡ ಆಶ್ರಮದ ಗಂಗಾಪುರ ಗ್ರಾಮದಲ್ಲಿ ಡಿ. 23ರಂದು ಶುಕ್ರವಾರ ಮುಂಜಾನೆ 10 ಗಂಟೆಗೆ ಕೃಷ್ಣ ಯಾದವಾನಂದ ಮಹಾಸ್ವಾಮಿಗಳವರು ರಚಿಸಿದ " ವಚನ ಹೂರಣ" ಗ್ರಂಥ ಬಿಡುಗಡೆ- ಹಾಗೂ ಸಾಧಕ ಕೆ. ಸಿ. ನಾಗರಜ್ಜಿ, ನಿವೃತ್ತ ಸೈನಿಕ ದಹನುಮಂತಗೌಡ ಚನ್ನಾಪುರ, ರವಿ ಯಾರಬಾಳ ಅವರ ಅಭಿನಂದನಾ ಸನ್ಮಾನ ನಡೆಯಲಿದೆ. ಜಿಲ್ಲಾ ಯಾದವ ಸಮಾಜದ ಗೌರವಾಧ್ಯಕ್ಷ ಬಿ. ಡಿ.ಚಿಕ್ಕಳ್ಳವರ ಹೇಳಿದರು. ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಡಾ .ಮದ್ದಾನಸ್ವಾಮಿ ಯರಬಾಳ ಅವರು ಪುಸ್ತಕ ಪರಿಚಯಿಸುವರು. ಹಿರಿಯೂರು ಶಾಸಕಿ ಪೂಣರ್ಿಮಾ ಶ್ರೀನಿವಾಸ್ ಅವರು, ಉದ್ಘಾಟಿಸುವರು. ಕೃಷ್ಣ ಯಾದವಾನಂದ ಸ್ವಾಮೀಜಿ, ಮರುಳ ಶಂಕರ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಶಾಂತ ಭಿಷ್ಮ ಸ್ವಾಮೀಜಿ, ಮೈಲಾರದ ಗುರು ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ಅವರುಗಳು ದಿವ್ಯ ಸಾನಿಧ್ಯ ವಹಿಸುವರು.
ಶಾಸಕ ಅರುಣ್ ಕುಮಾರ್ ಪೂಜಾರ್ ಅವರು ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಗ್ರಂಥ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸಭಾಧ್ಯಕ್ಷ ಕೆ. ಬಿ.ಕೋಳಿವಾಡ, ವಿಧಾನಪರಿಷತ್ ಸದಸ್ಯ ಆರ್ ಶಂಕರ್, ಡಿ ಬಿ ಶ್ರೀನಿವಾಸ್, ಎಕನಾಥ ಬಾನುವಳ್ಳಿ,ದರ್ಮರಾಜ ಕುಪ್ಪೆಲೂರ ಸೋಮಲಿಂಗಪ್ಪ ಹಲವಾಗಲ್,ಸಿ.ಎಂ ತಠಗೊಂಡರ, ಭರ್ಮಪ್ಪ ಉರ್ಮಿ ಸೂಮಪ್ಪ ಚಿಕ್ಕಳ್ಳ ವರ, ಚಂದ್ರಕಲಾ ನಂದ್ಯಾಲ್, ವಿದ್ಯಾ ದುರ್ಗದ, ಕವಿತಾ ಕೆಲೋರ,ಮಂಜಪ್ಪ ಹರಿಜನ ಸೇರಿದಂತೆ ಮತ್ತಿತರ ಗಣ್ಯರು ಸಮಾಜದ ಮುಖಂಡರು ಪಾಲ್ಗೊಳ್ಳುವರು. ನಂತರ ಡಾ. ಕೆ. ಸಿ. ನಾಗರಜ್ಜಿ ಮತ್ತು ತಂಡದವರಿಂದ ಜನಪದ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಗಂಗಾಧರ ಗಂಗ ನವರ, ಡಾ: ಸೋಮಪ್ಪ ಚಿಕ್ಕಳ್ಳವರ, ಕುಬೇರ ಗಂಗಣ್ಣನವರ್, ಮಂಜುನಾಥ್ ಸಿದ್ದಪ್ಪಳ್ಳವರ, ಸೋಮಪ್ಪ ಚಿಕ್ಕಳ್ನವರ್, ಗದಿಗೆಪ್ಪ ಚಿಕ್ಕಳ್ಳವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .