ತಾಳಿಕೋಟಿ

ಸಮುದಾಯದ ಆಸ್ತಿಗಳನ್ನು ವಕ್ಫ್ನಲ್ಲಿ ನೋಂದಾಯಿಸಿ: ಖಾಜಿ

ಸಮುದಾಯದ ಆಸ್ತಿಗಳನ್ನು ವಕ್ಫ್ನಲ್ಲಿ ನೋಂದಾಯಿಸಿ: ಖಾಜಿ

ತಾಳಿಕೋಟಿ 14: ಮುಸ್ಲಿಂ ಸಮಾಜದ ಆಸ್ತಿಗಳನ್ನು ವಕ್ಫ್ ಸಮಿತಿಯಲ್ಲಿ ನೋಂದಾಯಿಸದೆ ಇರುವದರಿದರಿಂದ ಎಷ್ಟೋ ಆಸ್ತಿಗಳು ಬೇರೆಯವರ ಪಾಲಾಗಿದೆ. ಇದರಿಂದ ಸಮುದಾಯಕ್ಕೆ ಭಾರಿ ನಷ್ಟವಾಗಿದೆ ಎಂದು ಜಿಲ್ಲಾ ವಕ್ಫ್ ಉಪಾಧ್ಯಕ್ಷ ಸೈಯದ ಶಕೀಲಅಹ್ಮದ್ ಖಾಜಿ ತಿಳಿಸಿದರು.

ತಾಳಿಕೋಟಿ ಪಟ್ಟಣದ ಈದ್ಗಾ ಶಾದಿ ಮಹಲ್ನಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ವಿಜಯಪುರ ಹಾಗೂ ಈದ್ಗಾ ಶಾದಿ ಮಹಲ್ ಶಾಪಿಂಗ ಕಾಂಪ್ಲೆಕ್ಸ್ ಕಮೀಟಿ ತಾಳಿಕೋಟಿ ಇವರ ಸಹಯೋಗದಲ್ಲಿ ಆಯೋಜಿಸಿದ 'ವಕ್ಫ್ ಆಸ್ತಿಗಳ ಸಂರಕ್ಷಣೆ ಜಾಗೃತಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿರವ ಮುಸ್ಲೀಂ ಸಮಾಜದ ಬಾಂಧವರು ವಕ್ಫ್ ಸಮಿತಿಯ ಸರಿಯಾದ ಪರಿಚಯ ಇಲ್ಲದ ಕಾರಣ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ವಕ್ಫ್ ಕುರಿತು ಸರಿಯಾದ ಮಾಹಿತಿ ನೀಡುವುದೇ ಈ ಸಮಾವೇಶದ ಉದ್ದೇಶವಾಗಿದೆ ಎಂದರು.

ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಉಸ್ಮಾನ ಪಟೇಲ ಮಾತನಾಡಿ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ವ್ಯಾಪ್ತಿಗೆ ಒಳಪಡುವ ಸುಮಾರು 1.65 ಲಕ್ಷ ಎಕರೆ ಜಮೀನು ಇದೆ ಆದರೆ ಈಗ ವಕ್ಫ್ ಬಳಿ ಇರುವುದು ಕೇವಲ 25 ಸಾವಿರ ಮಾತ್ರ. ಯಾವ ರೀತಿಯಾಗಿ ವಕ್ಫ್ ಆಸ್ತಿಗಳು ಹಾಳಾಗುತ್ತಿವೆ ಎಂದು ಮುಸ್ಲಿಂ ಸಮಾಜ ಇಂದು ಗಂಭೀರವಾಗಿ ಚಿಂತಿಸುವ ಅಗತ್ಯ ಇದೆ.

ಜಿಲ್ಲೆಯಲ್ಲಿ ವಕ್ಫ್ ಸಮಿತಿ 1965 ರಲ್ಲಿಯೇ ಅಸ್ತಿತ್ವಕ್ಕೆ ಬಂದಿದೆಯಾದರೂ ಹಿಂದಿನ ಅವಧಿಯಲ್ಲಿ ಸಾಕಷ್ಟು ಕೆಲಸ ಆಗದಿರುವುದು ನೋವಿನ ಸಂಗತಿ. ನನ್ನ ಅವಧಿ ಇರುವವರೆಗೂ ನಾನು ವಕ್ಫ್ ಆಸ್ತಿಗಳನ್ನು ರಕ್ಷಿಸುವದರ ಜೊತೆಗೆ ಗ್ರಾಮೀಣ ಭಾಗದ ಜನರ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಈದ್ಗಾ ಕಮೀಟಿ ಉಪಾಧ್ಯಕ್ಷ ಅಬ್ದುಲ್ರಜಾಕ ಮನಗೂಳಿ ಹಿರಿಯ ಮುಖಂಡ ಮಾಗಿ ಮಾತನಾಡಿದರು. ಈದ್ಗಾ ಕಮೀಟಿ ಅಧ್ಯಕ್ಷ ಖಾಜಾಹುಸೇನ ಡೋಣಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ರಹೆಮಾನ ಎಕೀನ, ವಕ್ಪ್ ಸಮಿತಿ ಉಪಾಧ್ಯಕ್ಷ ಖ್ವಾಜಾ ಬಂದೇನವಾಜ ಸಾಂಗಲೀಕರ್, ಸದಸ್ಯರಾದ ಅಕ್ಬರ್ ನಾಯಕ, ಅಲ್ಲಾಭಕ್ಷ ಉಕ್ಕಲಿ, ಮೌಲಾನಾ ಇಸ್ಹಾಕ್ಸಾಕ ಉಮ್ರಿ, ಅಂಜುಮನ್ ಇಸ್ಲಾಂ ಕಮೀಟಿ ಮುದ್ದೇಬಿಹಾಳ ಅಧ್ಯಕ್ಷ ಎ.ಎ.ನಾಯ್ಕೋಡಿ ಮುಂತಾದವರು 

ಉಪಸ್ಥಿತರಿದ್ದರು.

ಈದ್ಗಾ ಕಮೀಟಿ ಕಾರ್ಯದಶರ್ಿ ಎ.ಡಿ.ಎಕೀನ ಸ್ವಾಗತಿಸಿದರು. ಅಬ್ದುಲಗನಿ ಮಕಾನದಾರ ನಿರೂಪಿಸಿ ವಂದಿಸಿದರು. 

ಸುದ್ದಿ ಓದಿ