ರಾಣೆಬೆನ್ನೂರ

ರಾಣೆಬೆನ್ನೂರು ವಕೀಲರ ಸಂಘದ ನೂತನ ಅಧ್ಯಕ್ಷ ಪದಾಧಿಕಾರಿಗಳು

ರಾಣೆಬೆನ್ನೂರು ವಕೀಲರ ಸಂಘದ ನೂತನ ಅಧ್ಯಕ್ಷ ಪದಾಧಿಕಾರಿಗಳು

ರಾಣೆಬೆನ್ನೂರು 17:  ಇಲ್ಲೇನ ವಕೀಲರ ಸಂಘದ ಅಧ್ಯಕ್ಷ ಪದಾಧಿಕಾರಿಗಳ ಚುನಾವಣಾ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆದು ಮುಂದಿನ ಎರಡು ವರ್ಷದ  ಅವಧಿಗಾಗಿ ಚುನಾವಣಾ ಪ್ರಕ್ರಿಯೆಯು ಹಿರಿಯ ನ್ಯಾಯವಾದಿ ಆರ್. ಬಿ.ಸೊರಟೂರ್ ಅವರು ನೆರವೇರಿಸಿದರು. ಅಧ್ಯಕ್ಷರಾಗಿ ಬಿ. ಹೆಚ್. ಬುರಡಿಕಟ್ಟಿ, ಉಪಾಧ್ಯಕ್ಷರಾಗಿ ಲಕ್ಷ್ಮಣ್  ಎಫ್. ಕೆಂಗೊಂಡ, ಪ್ರಧಾನ ಕಾರ್ಯದರ್ಶಿ ಯಾಗಿ ಎನ್..ಎಂ. ದೊಂಬರ ಮತ್ತು ಸಹ ಕಾರ್ಯದಶರ್ಿಯಾಗಿ ಉಮೇಶ್ ಎನ್. ಕೋನಬೇವು ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಸಿ. ಎಸ್. ಬುರಡಿಕಟ್ಟಿ, ಎಂ. ಡಿ. ಐರಣಿ, ಎಂ. ಟಿ. ಬೇಲೂರ, ಬಿ.ನಾಗೇಂದ್ರಪ್ಪ, ಪಿ.ಎಸ್. ದೊಡ್ಡ ಗೌಡ್ರ, ಎಸ್.ಎನ್. ಕೂಸಗೂರ, ಎಸ್. ಸಿ. ಮಾಗನೂರ, ಎಸ್. ಎಸ್. ಬಣಕಾರ್,ಮತ್ತು ಸವಿತಾ ಮುಂಡಾಸದ. ಇವರುಗಳು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ  ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಚುನಾವಣಾಧಿಕಾರಿ ಆರ್. ಬಿ.ಸೊರಟೂರ ಅವರು ಪ್ರಮಾಣ ಪತ್ರವನ್ನು ನೀಡಿದರು. ಅಭಿನಂದನೆಗಳು:- ವಕೀಲರ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನಗರ ಮತ್ತು ಜಿಲ್ಲೆಯ ಹಿರಿಯ ಮತ್ತು ಕಿರಿಯ ವಕೀಲರು,ಸಂಘ ಸಂಸ್ಥೆಗಳ ಮುಖಂಡರು, ವರ್ತಕರು ಗಣ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ