ಕಂಪ್ಲಿ

ಮಾದಿಗರ ರಕ್ಷಣಾ ವೇದಿಕೆ ಮುದ್ದಾಪುರ ಗ್ರಾಮ ಘಟಕ ಅಧ್ಯಕ್ಷರಾಗಿ ರಾಮಚಂದ್ರ

ಮಾದಿಗರ ರಕ್ಷಣಾ ವೇದಿಕೆ ಮುದ್ದಾಪುರ ಗ್ರಾಮ ಘಟಕ ಅಧ್ಯಕ್ಷರಾಗಿ ರಾಮಚಂದ್ರ


ಕಂಪ್ಲಿ. 04.:  ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಶಂಕರಸಿಂಗ್ ಕ್ಯಾಂಪಿನಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಸಭೆ ಮಂಗಳವಾರ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾಗಿ ಧನಂಜಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆ ಬಲ ಪಡಿಸಲು ಮುಂದಾಗಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಬಡ ಜನರಹಿತದೃಷ್ಠಿಯಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದ್ದು, ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿಲು ಮುಂದಾಗಬೇಕು ಎಂದರು ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮುದ್ದಾಪುರ ಗ್ರಾಮ ಘಟಕ ಅಧ್ಯಕ್ಷರಾಗಿ ರಾಮಚಂದ್ರ ಗೌರವ ಅಧ್ಯಕ್ಷರಾಗಿ ಮರಿಯ ಹೆಚ್ ಮಲ್ಲಯ್ಯ ಬಿ ಚಂದ್ರ ಉಪಾಧ್ಯಕ್ಷರಾಗಿ ಸಿಕ್ಲಿಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ ಕುಮಾರಸ್ವಾಮಿ ಖಜಾಂಚಿಯಾಗಿ ಬಿ ಅಣ್ಣಪ್ಪಸ್ವಾಮಿ ಮತ್ತು ಹೆಚ್ ಯಶ್ವಂತ ಸಂಘಟನಾ ಕಾರ್ಯದರ್ಶಿಯಾಗಿ ಕಜ್ಜಿ ಮಹೇಶ ಯು ರೇಣುಕರಾಜ ಎಂ ಸಿದ್ದಪ್ಪ ರುದ್ರಿ ದಮ್ಮೂರಿ ಶಿವು ಸೇರಿದಂತೆ ಅನೇಕ ಸದಸ್ಯರಾಗಿ ಆಯ್ಕೆಗೊಂಡರು. ಈಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ನೀಲಪ್ಪ ಪೇಂಟರ್ ಸೇರಿ. ಅನೇಕರಿದ್ದರು                        


ಸುದ್ದಿ ಓದಿ