ಆರ್ ಆರ್ ಆರ್ ಸಿನಿಮಾ: ಫಸ್ಟ್ ಲುಕ್ ಹಂಚಿಕೊಂಡ ಆಲಿಯಾ ಭಟ್
ಮುಂಬೈ, ಮಾರ್ಚ್ 16 :ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್.ಆರ್.ಆರ್’ ಮೂಲಕ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದ್ದು, ಅವರು ಚಿತ್ರದಲ್ಲಿ ಸೀತಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಮೊದಲ ಬಾರಿಗೆ ಒಟ್ಟಿಗೆ ತೆರೆಯ ಮೇಲೆ ಬರುತ್ತಿದ್ದಾರೆ. ಈ ದೊಡ್ಡ ಬಜೆಟ್ ಚಿತ್ರ 20 ನೇ ಶತಮಾನದ ಆರಂಭದಲ್ಲಿ ಬರುವ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಜೀವನಾಧಾರಿತವಾಗಿದೆ. ಕುಮ್ರಾಮ್ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಪಾತ್ರಗಳನ್ನು ಕ್ರಮವಾಗಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ನಿರ್ವಹಿಸಿದ್ದಾರೆ.
ನಟಿ ಅಲಿಯಾ ಭಟ್ ಅವರ 28ನೇ ವರ್ಷದ ಜನ್ಮದಿನವಾದ ಮಾರ್ಚ್ 15ರಂದು ಆರ್ ಆರ್ ಆರ್ ತಯಾರಕರು ಚಿತ್ರದ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡದ್ದಾರೆ. ಪೋಸ್ಟರ್’ನಲ್ಲಿ ಆಲಿಯಾ ಸಾಂಪ್ರದಾಯಿಕ ಹಸಿರು ರೇಷ್ಮೆ ಸೀರೆ ಮತ್ತು ಕೆಂಪು ಕುಪ್ಪಸ ತೊಟ್ಟು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಬಟ್ಟೆ, ಬಿಂದಿ, ಸರಳ ಆಭರಣಗಳು ನೋಡಿದರೆ ಚಿತ್ರದಲ್ಲಿ ಆಲಿಯಾ ಪಾತ್ರದ ಬಗ್ಗೆ ಕುತೂಹಲ ಮೂಡುತ್ತದೆ. ತೆರೆಯ ಮೇಲೆ ಆಲಿಯಾ ಬಹಳ ಕಡಿಮೆ ಸಮಯ ಕಾಣಿಸಿಕೊಳ್ಳುವ ನಿರೀಕ್ಷೆಯಿದ್ದರೂ ವರದಿಗಳ ಪ್ರಕಾರ, ಅವರ ಪಾತ್ರವು ಬಲವಾದ ಪರಿಣಾಮವನ್ನು ಬೀರುತ್ತದೆ. ಆಲಿಯಾ ಡ್ರೆಸ್ಸಿಂಗ್ನಿಂದ ಹಿಡಿದು ಕೇಶ ವಿನ್ಯಾಸದವರೆಗೆ ಎಲ್ಲವೂ ಪರಿಪೂರ್ಣವಾಗಿದೆ. ಆಲಿಯಾ ಕಣ್ಣುಗಳಲ್ಲಿ ರಾಮರಾಜುಗಾಗಿ ಸೀತೆಯ ಕಾಯುವಿಕೆಯನ್ನು ತೋರಿಸುತ್ತದೆ. ಭಾನುವಾರ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೇವಾಲಯದಲ್ಲಿ ರಾಮನ ವಿಗ್ರಹದ ಮುಂಭಾಗದಲ್ಲಿರುವ ಕುಳಿತಿದ್ದ ಫೋಟೋ ಹಂಚಿಕೊಂಡಿದ್ದರು. ಅವರ ಜನ್ಮದಿನದ ಪ್ರಯುಕ್ತವಾಗಿ ಆಲಿಯಾ ಸಂಪೂರ್ಣ ನೋಟ ರಿವೀಲ್ ಮಾಡಲಾಗಿದೆ. ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿರುವ ಆರ್ಆರ್ಆರ್ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವ್ಗನ್, ಶ್ರಿಯಾ ಸರನ್, ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ನಟಿಸಿದ್ದಾರೆ. ಇವರೊಂದಿಗೆ, ಅಲಿಸನ್ ಡೂಡಿ, ಒಲಿವಿಯಾ ಮೋರಿಸ್ ಮತ್ತು ರೇ ಸ್ಟೀವನ್ಸನ್ ಸೇರಿದಂತೆ ವಿದೇಶಿ ನಟ ನಟಿಯರು ಸಹ ಈ ಚಿತ್ರದಲ್ಲಿದ್ದಾರೆ. ಆರ್ಆರ್ಆರ್ ಇದೇ ವರ್ಷ ಅಕ್ಟೋಬರ್ 13 ರಂದು ಬಿಡುಗಡೆಗೆ ಸಿದ್ಧವಾಗಿದೆ.