ಮನರಂಜನೆ

ಮಹಾಶಿವರಾತ್ರಿಯಂದು "ರಾಬರ್ಟ್" ರಂಜನೆ : ದರ್ಶನ್ ಅಭಿಮಾನಿಗಳಿಗೆ ಜಾಗರಣೆ ಶುರು

ಮಹಾಶಿವರಾತ್ರಿಯಂದು "ರಾಬರ್ಟ್" ರಂಜನೆ : ದರ್ಶನ್ ಅಭಿಮಾನಿಗಳಿಗೆ ಜಾಗರಣೆ ಶುರು

ಬೆಂಗಳೂರು, ಮಾರ್ಚ್ 09: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ "ರಾಬರ್ಟ್" ಚಿತ್ರ ಮಹಾಶಿವರಾತ್ರಿಯ ಶುಭದಿನದಂದು ಬಿಡುಗಡೆಯಾಗುತ್ತಿದ್ದು, ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈ ಕ್ಷಣದಿಂದಲೇ ಜಾಗರಣೆ ಶುರುವಾಗಿದೆ. ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿರುವ ‘ರಾಬರ್ಟ್’ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ, ವಿ.ಹರಿಕೃಷ್ಣ ಹಿನ್ನೆಲೆ ಸಂಗೀತವಿದೆ.ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ರಾಮ್ - ಲಕ್ಷ್ಮಣ್, ಅನ್ಬು - ಅರಿವು, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಸಂತೋಷ್ ಅವರ ನೃತ್ಯ ನಿರ್ದೇಶನವಿರುವ "ರಾಬರ್ಟ್" ಚಿತ್ರಕ್ಕೆ ರಾಜಶೇಖರ್ ಹಾಗೂ ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ.ದರ್ಶನ್ ಸೋಮಶೇಖರ್ ಹಾಗೂ ಚಿರಾಗ್ ಆರ್ ಗೌಡ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. 

ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್, ಸೋನಾಲ್ ಮಾಂಟೆರೊ, ಜಾನ್ಸನ್ ಡಿಸೋಜ, ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ರವಿಕಿಶನ್, ರವಿಶಂಕರ್, ಅಶೋಕ್, ಅವಿನಾಶ್, ದಿಲೀಪ್ ಶೆಟ್ಟಿ, ರವಿಚೇತನ್, ಶ್ರೀಧರ್  ರಾವ್, ಹರ್ಷ, ಸುಚೀಂದ್ರ ಪ್ರಸಾದ್, ಚಂದು ಗೌಡ, ಈಟಿವಿ ಶ್ರೀಧರ್, ಯೂಟರ್ನ್ ಕೃಷ್ಣ, ತೇಜಸ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

  


ಸುದ್ದಿ ಓದಿ