ಮನರಂಜನೆ

ಮಗಳ ಆರತಕ್ಷತೆಗೆ ಬನ್ನಿ. . . : ಮುಖ್ಯಮಂತ್ರಿಗೆ ನಟ ರಮೇಶ್ ಅರವಿಂದ್ ಆಹ್ವಾನ

ಮಗಳ ಆರತಕ್ಷತೆಗೆ ಬನ್ನಿ. . . : ಮುಖ್ಯಮಂತ್ರಿಗೆ ನಟ ರಮೇಶ್ ಅರವಿಂದ್ ಆಹ್ವಾನ

ಬೆಂಗಳೂರು, ಜ 05: ಖ್ಯಾತ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಕಳೆದ ಡಿಸೆಂಬರ್ 28 ರಂದು ಎರಡು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿತ್ತು.ಜನವರಿ ಎರಡನೇ ವಾರದಲ್ಲಿ ನಿಹಾರಿಕ - ಅಕ್ಷಯ್ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರೋದ್ಯಮ, ರಾಜಕೀಯ ಸೇರಿದಂತೆ ನಾನಾ ವಿಭಾಗದ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ರಮೇಶ್ ಅರವಿಂದ್ ಇತ್ತೀಚೆಗೆ ಆರತಕ್ಷತೆ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.ಕೊರೋನಾ ಹಿನ್ನೆಲೆಯಲ್ಲಿ ನಟ ರಮೇಶ್ ಅರವಿಂದ್ ಮಗಳ ಮದುವೆಯನ್ನು ಕಡಿಮೆ ಜನರ ಉಪಸ್ಥಿತಿಯೊಂದಿಗೆ ಅತ್ಯಂತ ಸರಳವಾಗಿ ನೆರವೇರಿಸಿದ್ದರು.

  


ಸುದ್ದಿ ಓದಿ