ಮನರಂಜನೆ

ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನ : ಲತಾ ಮಂಗೇಶ್ಕರ್ ಸಂತಾಪ

ಸಂಗೀತ   ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನ  : ಲತಾ ಮಂಗೇಶ್ಕರ್ ಸಂತಾಪ

ಮುಂಬೈ  ಮೇ 22: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನಕ್ಕೆ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ   ಬಾಲಿವುಡ್ ನ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್  ಮಾಡಿರುವ ಲತಾ ಮಂಗೇಶ್ಕರ್, 'ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ಅವರು ನಿಧನರಾಗಿದ್ದಾರೆ ಎಂದು ತಿಳಿಯಿತು. ಈ    ಸುದ್ದಿ ಕೇಳಿ ನನಗೆ ತುಂಬಾ ತೀವ್ರ ನೋವಾಯಿತು. ಅವರು ಮಹಾನ್ ವ್ಯಕ್ತಿ. ನಾನು ಅವರು ನಿರ್ದೇಶನದ ಅನೇಕ ಹಾಡುಗಳನ್ನು ಹಾಡಿದ್ದೇನೆ, ತುಂಬಾ ಜನಪ್ರಿಯತೆ ತಂದುಕೊಟ್ಟಿದೆ' ಎಂದು ಹೇಳಿದ್ದಾರೆ. ರಾಮ್ ಲಕ್ಷ್ಮಣ್ ನಿರ್ದೇಶನದ ಸಂಗೀತದಲ್ಲಿ ಲತಾ ಮಂಗೇಶ್ಕರ್ 'ಮಾಯೆ ನಿ ಮಾಯೆ.' .'ದೀದಿ ತೇರಾ ದೇವರ್ ದಿವಾನಾ' 'ಕಬೂತಾರ್ ಜಾ   ಜಾ ಜಾ..ಸೇರಿದಂತೆ ಇನ್ನು ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನಟ ಸಲ್ಮಾನ್ ಖಾನ್, “ನನ್ನ ಯಶಸ್ವಿ ಚಿತ್ರಗಳಾದ ಮೈನೆ ಪ್ಯಾರ್ ಕಿಯಾ, ಪತ್ತರ್ ಕೆ ಫೂಲ್, ಹಮ್ ಸಾಥ್ ಸಾಥ್ ಹೈ, ಹಮ್ ಆಪ್ಕೆ ಹೈನ್ ಕೌನ್ ಅವರ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನದಿಂದ ತೀವ್ರ ದುಃಖವಾಗಿದೆ.  ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖಿತ ಕುಟುಂಬಕ್ಕೆ ಸಂತಾಪ, ”ಎಂದು ಟ್ವೀಟ್ ಮಾಡಿದ್ದಾರೆ.

         


ಸುದ್ದಿ ಓದಿ