ಶಿಗ್ಗಾವಿ ಪಟ್ಟಣವನ್ನು ಸ್ವಚ್ಚ, ಸುಂದರ ಪಟ್ಟಣ ಮಾಡಲು ಸಾರ್ವಜನಿಕರು ಸಹಕರಿಸಿ: ಅಧ್ಯಕ್ಷೆ ರೂಪಾ
ಲೋಕದರ್ಶನ ವರದಿ
ಶಿಗ್ಗಾವಿ 02: ಸಾರ್ವಜನಿಕರಿಗೆ ಮನೆಯ ಸ್ವಚ್ಚತೆ ಮತ್ತು ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಮುಖಾಂತರ ಶಿಗ್ಗಾವಿ ಪಟ್ಟಣವನ್ನು ಸ್ವಚ್ಚ ಹಾಗೂ ಸುಂದರ ಪಟ್ಟಣ ಮಾಡಲು ಪಣತೊಟ್ಟಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀಜಿ ಜಯಂತಿ ಅಂಗವಾಗಿ ಸ್ವಚ್ಚತೆಗಾಗಿ ಸಂಯುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಆದರ್ಶಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅಲ್ಲದೇ ಸ್ವಚ್ಚತೆಯಲ್ಲಿ ಸಾರ್ವಜನಿಕರ ಪಾತ್ರ ಬಹಳ ಮಹತ್ವದ್ದಾಗಿದ್ದು ಸ್ವಚ್ಚತೆಯ ವಿಷಯ ಬಂದಾಗ ಅವರು ಇವರು ಎನ್ನದೇ ಎಲ್ಲರೂ ಪುರಸಭೆ ಜೊತೆಗೆ ಸ್ಪಂದಿಸಿದಾಗ ಕಸದ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಲು ಯೋಜನೆ ರೂಪಿಸಬಹುದು ಎಂದರು.
ಮುಖ್ಯಾಧಿಕಾರಿ ಜಗದೀಶ ವೈ.ಕೆ ಮಾತನಾಡಿ ಗಾಂದೀಜಿಯವರ ಕನಸ್ಸು ಸ್ವಚ್ಚ ಭಾರತ ಮೇರಾ ಭಾರತ ಆಗಿತ್ತು ಆ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರು ಅಕ್ಟೋಬರ 2 2013 ರಂದು ಸ್ವಚ್ಚ ಭಾರತ ಮಹಾತ್ವಕಾಂಕ್ಷಿ ಯೋಜನೆಗೆ ಚಾಲನೆ ನೀಡಿ ಸ್ವಚ್ಚತೆಗೆ ಆದ್ಯತೆ ನೀಡಿ ಸಾರ್ವಜನಿಕರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವದ್ದಾಗಿದ್ದು ಆ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಪಟ್ಟಣದ 50 ಮಕ್ಕಳು ಭಾಗವಹಿಸಿದ್ದಾರೆ ಎಂದರು.
ಪುರಸಭೆ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ ನಮ್ಮ ಸೇವೆಗೆ ನಿಮ್ಮ ಸಹಕಾರ ಮುಖ್ಯ ಆದ್ದರಿಂದ ಬರಿ ಸ್ವಚ್ಚತೆ ವಿಷಯವಾಗಿ ಪುರಸಭೆ ಸದಸ್ಯರನ್ನು, ಪೌರಕಾಮರ್ಿಕರನ್ನು ದೋಷಿಸದೇ ಸಾರ್ವಜನಿಕರ ಜವಾಬ್ದಾರಿ ಬಹಳ ಪ್ರಾಮುಖ್ಯತೆ ಪಡೆದಿದೆ ಏಕೆಂದರೆ ಪಟ್ಟಣದ ಜನಸಂಖೈ 35 ಸಾವಿರಿದ್ದು ಪಟ್ಟಣಕ್ಕೆ ಬಂದು ಹೋಗುವರ ಸಂಖೈ 10 ಸಾವಿರಿದ್ದು 45 ಸಾವಿರ ಜನಸಂಖೈಯ ಕಸ ನಿರ್ವಹಣೆ ಹಾಗೂ ವಿಲೇವಾರಿ ಮಾಡಲು ಪುರಸಭೆಯಲ್ಲಿ 50 ಪೌರಕಾರ್ಮಿಕ ರಿದ್ದು ಕಷ್ಟದಾಯಕವಾಗಿದೆ ಆದ್ದರಿಂದ ನಾಗರೀಕರ ಜವಾಬ್ದಾರಿ ಹೆಚ್ಚಿದೆ ಎಂದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕ ಶಾಂತಪ್ಪ ದೊಡ್ಡಮನಿ, ವಿದ್ಯಾರ್ಥಿನಿ ಸಂದ್ಯಾ ಕುಲಕರ್ಣಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷರು, ಸರ್ವಸದಸ್ಯರು ಸೇರಿದಂತೆ ಪೌರಕಾರ್ಮಿಕ ತಾಲೂಕ ಅಧ್ಯಕ್ಷ ವಿ.ಎಸ್.ಪಾಟೀಲ, ಶಿಕ್ಷಣ ಇಲಾಖೆಯ ಎಸ್.ಹೆಚ್.ರಟ್ಟಿಹಳ್ಳಿ, ಶಾಂತಪ್ಪ ದೊಡ್ಡಮನಿ ಪೌರಕಾರ್ಮಿಕ ರು, ಸಿಬ್ಬಂದಿವರ್ಗದವರು, ಪಟ್ಟಣದ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು. ಸಮುದಾಯ ಸಂಘಟನೆ ಅಧಿಕಾರಿ ಶೈಲಜಾ ಪಾಟೀಲ ಸ್ವಾಗತಿಸಿದರು, ಮುಖ್ಯಾಧಿಕಾರಿ ಜಗದೀಶ ವೈ.ಕೆ ಕಾರ್ಯಕ್ರಮ ನಿರ್ವಹಿಸಿದರು