ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಲ್ಲಿ ಪ್ರತಿಭಟನೆ
ತಾಳಿಕೋಟೆ,
ಪಟ್ಟಣದ ಹಡಗಿನಾಳ ರಸ್ತೆಯಲ್ಲಿರುವ ನೂತನ ಡೋಣಿ ಸೇತುವೆ ರಸ್ತೆಯನ್ನು ನೇರವಾಗಿ ಮಾಡಬೇಕು, ಪುರಸಭೆಯಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರ ಮತ್ತು ಮಳಿಗೆಗಳ ಹಗರಣಗಳ ತನಿಖೆ ಕೈಕೊಳ್ಳುವಂತೆ ಆಗ್ರಹಿಸಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಬೆಂಗಳೂರಿನ ಪೌರಾಡಳಿತ ಇಲಾಖೆಯ ನಿದರ್ೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪಟ್ಟಣದಿಂದ ಹಡಗಿನಾಳ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಡೋಣಿ ನದಿ ರಸ್ತೆ ಅವೈಜ್ಞಾನಿಕವಾಗಿ ರಾಜಕೀಯ ಒತ್ತಡದಿಂದ ಅಧಿಕಾರಿಗಳು ಶಾಮಿಲಾಗಿ ರಸ್ತೆಯನ್ನು ಅಂಕು ಡೊಂಕಾಗಿ ನಿರ್ಮಿಸಲಾಗುತ್ತಿದೆ. ಇದನ್ನು ಖಂಡಿಸಿ ಈ ಹಿಂದೆ ಹೋರಾಟ ಸಮಿತಿ ನೇತೃತ್ವದಲ್ಲಿ ಏಪ್ರೀಲ್ 11 ರಿಂದ 22 ರವರೆಗೆ ಧರಣಿ ಸತ್ಯಾಗ್ರಹ ನಂತರ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬೇಡಿಕೆಗಳನ್ನು ಒಂದು ತಿಂಗಳ ಒಳಗಾಗಿ ಈಡೇರಿಸುವ ಲಿಖಿತ ಭರವಸೆಯನ್ನು ನೀಡಿದ್ದರು. ನಂತರ ಯಾವುದೇ ಕ್ರಮ ಕೈಕೊಂಡಿದ್ದಲ್ಲ. ಇದನ್ನು ಖಂಡಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಅಗಸ್ಟ್ 5 ರಂದು ತಾಳಿಕೋಟೆ ಪಟ್ಟಣದಿಂದ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪಾದಯಾತ್ರೆಯನ್ನು ಕೈಕೊಂಡು ಹೋರಾಟವನ್ನು ನಡೆಸಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಸಹ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಸಹ ಯಾವುದೇ ಕ್ರಮ ಕೈಕೊಂಡಿಲ್ಲ. ರಸ್ತೆಯನ್ನು ಮೊದಲಿನಂತೆ ಅಂಕುಡೊಂಕಾಗಿ ಮಾಡುತ್ತಿದ್ದಾರೆ. ಕಾಟಾಚಾರಕ್ಕೆ ಮೋಜಣಿ ಮಾಡಿ ಜನರಿಗೆ ಮೋಸ ಮಾಡಿದ್ದಾರೆ. ಸರಕಾರದ ಆಸ್ತಿಯ ಮೇಲೆ ಪ್ರಭಾವಿ ವ್ಯಕ್ತಿಗಳು ಮಹಡಿಗಳನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ಪ್ರಭಾವಿಗಳ ಕೈಗೊಂಬೆಯಾಗಿ ಅಧಿಕಾರಿಗಳು ವರ್ತನೆ ಮಾಡುತ್ತಿದ್ದಾರೆ. ಪಟ್ಟಣದ ಪುರಸಭೆಯಲ್ಲಿ ಬ್ರಷ್ಠಾಚಾರ ತುಂಬಿ ತುಳುಕುತ್ತಿದೆ. ಅನೇಕ ಸರಕಾರಿ ಆಸ್ತಿಗಳು ಪರಬಾರೆ ಆಗುತ್ತಿದೆ. ಲೇಔಟಗಳು ಅಭಿವೃದ್ದಿ ಆಗದೇ ಪುರಸಭೆ ಆಸ್ತಿಗಳನ್ನು ಮೂಲ ಮಾಲಿಕರಿಗೆ ಮರಳಿ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಸರಕಾರಕ್ಕೆ ಆಸ್ತಿ ತೆರಗಿಎ ನಷ್ಟವಾಗಿದೆ. ಪುರಸಭೆ ಮಳಿಗೆಗಳ 2017 ರಿಂದ ಇಲ್ಲಿವರೆಗೆ ಬಾಡಿಗೆ ಹಣವನ್ನು ಕೋಟ್ಯಾಂತರ ಹಣವನ್ನು ಬಾಕಿ ವಸೂಲಿ ಮಾಡಿರುವದಿಲ್ಲ. ಪುರಸಭೆಯಲ್ಲಿ ಇಷ್ಟೆಲ್ಲಾ ಆದರೂ ಸಹಿತ ಯಾವುದೇ ಕ್ರಮ ಕೈಕೊಂಡಿಲ್ಲ. ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ಈಡೇರಿಸದಿದ್ದರೆ ಜನೇವರಿ 5 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ತಲೆಯ ಮೇಲೆ ಕಲ್ಲುಹೊತ್ತು ಪ್ರತಿಭಟನೆಯನ್ನು ಕೈಕೊಳ್ಳಲಾಗುವದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೋರಾಟ ಸಮಿತಿಯ ಅಧ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾಜರ್ುನ ಪಟ್ಟಣಶೆಟ್ಟಿ, ಶಿವರಾಜ ಗುಂಡಕನಾಳ, ಸುರೇಶ ಹಜೇರಿ, ಸುರೇಶ ಅ ಹಜೇರಿ ಸೇರಿದಂತೆ ಇತರರು ಇದ್ದರು.