ಗ್ರಾಪಂ ಚುನಾವಣೆ ಶಾಂತಿಯುತವಾಗಿ ನಡೆಸಲು ಸೂಕ್ತ ಕ್ರಮ
ಲೋಕದರ್ಶನವರದಿ
ಕಂಪ್ಲಿ 17 :ಕೋವಿಡ್-19 ಹಿನ್ನಲೆಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮಪಂಚಾಯಿತಿ ಚುನಾವಣೆಗಳು ಶಾಂತಿಯುತವಾಗಿ ನಡೆಸಲು ಸೂಕ್ತ ಕ್ರಮ ಕೈಗೊಂಡಿದೆ ಎಂದು ಹೊಸಪೇಟೆ ಎಸಿ ಸಿದ್ಧರಾಮೇಶ್ವರ ಹೇಳಿದರು. ಗುರುವಾರ ಇಲ್ಲಿನ ಎಸ್ಜಿವಿಎಸ್ಎಸ್ ಬಾಲಕಿಯರ ಸಕರ್ಾರಿ ಪಿಯೂ ಕಾಲೇಜಿನಲ್ಲಿ ಚುನಾವಣಾಧಿಕಾರಿಗಳಾದ ಪಿ.ಆರ್.ಓ. ಎ.ಪಿ.ಆರ್.ಓ ತರಬೇತಿಯಲ್ಲಿ ಮಾತನಾಡಿ, ಪಿ.ಆರ್.ಓ. ಎ.ಪಿ.ಆರ್.ಓಗಳಿಗೆ ತರಬೇತಿ ನಡೆಯುತ್ತಲಿದೆ ಕಂಪ್ಲಿ ತಾಲೂಕುನಲ್ಲಿ ಹತ್ತು ಗ್ರಾಮಪಂಚಾಯಿತಿಗಳಿವೆ ಅದರಲ್ಲಿ74ಕ್ಷೇತ್ರಗಳಿವೆ .ಒಟ್ಟು 212ಸ್ಥಾನಗಳಲ್ಲಿ ಉಳಿದ 184ಸ್ಥಾನಗಳಿಗೆ ಚುನಾವಣೆ ನಡೆಯಲಿದೆ 437ಸ್ಪಧರ್ಾಳುಗಳು ಕಣದಲ್ಲಿದ್ದಾರೆ. 100 ಮತಗಟ್ಟಿಗಳಿವೆ ಸೂಕ್ಷ್ಮ35 ಅತಿ ಸೂಕ್ಷ್ಮ21 ಸಾಮಾನ್ಯ44 ಒಟ್ಟು ಮತದಾರರು 65 ಸಾವಿರ 615 ಜನ ಗಂಡು.32 ಸಾವಿರದ 406 ಹೆಣ್ಣು 33ಸಾವಿರ 206 ಮತದಾರರಿದ್ದಾರೆ.
ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಚುನಾವಣೆಯಲ್ಲಿ ಎಲ್ಲಾ ನೀತಿ ನಿಯಮಗಳನ್ನು ತಪ್ಪದೆ ಪಾಲಿಸುವುದರ ಜೊತೆಗೆ ಯಾವುದೇ ಆಹಿತಕರ ಘಟನೆಗಳಿಗೆೆ ಚುನಾವಣೆ ಅಧಿಕಾರಿಗಳು ಅವಕಾಶ ನೀಡಬಾರದು. ಮತದಾರರು ಯಾವುದೇ ಹಣದ ಆಮೀಷಕ್ಕೆ ಒಳಗಾಗದೆ ಮುಕ್ಕವಾಗಿಮತದಾನ ಮಾಡಬೇಕು ಎಂದರು ತಹಸೀಲ್ದಾರ್ ಗೌಸಿಯಾಬೇಗಂ, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಪ್ರಾಥಮಿಕ ಆರೋಗ್ಯ ಇಲಾಖೆಯ ಹಿರಿಯಸಹಾಯಕರಾದ ಎಸ್.ಆರ್.ಪ್ರಭಾಕರ, ಆರೋಗ್ಯ ಸಹಾಯಕರಾದ ಚನ್ನಬಸವರಾಜ, , ಆಶಾ ಕಾರ್ಯಕತರ್ೆಯರು ಸ್ಯಾನಿಟೈಜರ್ ಮತ್ತು ಉಷ್ಣತೆ ತಪಾಸಿಸಿದರು. ತಹಸೀಲ್ದಾರ್ ಗೌಸಿಯಾಬೇಗಂ, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಉಪಸ್ಥಿತರಿದ್ದರು. ಚುನಾವಣಾ ವೀಕ್ಷಕ ಸುರೇಶ್ಕುಮಾರ್ ಭೇಟಿ ನೀಡಿದ್ದರು. ತಾಲೂಕಿನ ಹತ್ತು ಗ್ರಾಪಂ.ಗಳ 220 ಅಧ್ಯಕ್ಷ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು