ಪ್ರಾಥಮಿಕ ಶಾಲೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ಲೋಕದರ್ಶನ ವರದಿ,
ಜಮಖಂಡಿ2: ತಾಲೂಕಿನ ಜಂಬಗಿ ಬಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಗಡಿನ ಶೆಡ್ನಲ್ಲಿ ವಿದ್ಯಾಭ್ಯಾಸ ನಡೆಯುತ್ತಿದ್ದು. ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಸಿಪಿಐ ಬಸವರಾಜ ಅವಟಿ ಮತ್ತು ಸಿಬ್ಬಂದಿಗಳು ಸೇರಿ ಜಂಬಗಿ ಬಿಕೆ ಶಾಲೆಗೆ ತೆರಳಿ ತಗಡಿನ ಶೆಡ್ನಲ್ಲಿ ಪಾಠಬೋಧನೆ ಮಾಡುತ್ತಿರುವದು, ಶೌಚಾಲಯ ಸೇರಿದಂತೆ ಇನ್ನೂಳಿದ ಕೊಠಡಿಗಳನ್ನು ಪರಿಶೀಲನೆ ಮಾಡಿದರು.
ಕೂಡಲೇ ತಗಡಿನ ಶೆಡ್ನಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೇರೆಡೆ ಸ್ಥಳಾಂತರ ಮಾಡಲು ಆದೇಶ ಮಾಡಬೇಕು, ಕುಡಿಯುವ ನೀರು, ಶೌಚಾಲಯದ ಬಗ್ಗೆ ಗಮನಹರಿಸಬೇಕು ಎಂದು ಬಿಇಓ ಅಶೋಕ ಬಸಣ್ಣವರ ಅವರಿಗೆ ಸೂಚಿಸಿದರು.
ಶಾಲಾ ಶಿಕ್ಷಕರು, ಗ್ರಾಮಸ್ಥರು ಇದ್ದರು.