ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ
ಬಳ್ಳಾರಿ25: ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಮಾಚರ್್ನಿಂದ ಶಾಲಾಮಕ್ಕಳು ಓದುಬರಹದಿಂದ ದೂರವಿದ್ದು,ಅವರನ್ನು ಮತ್ತೇ ಶಾಲೆಯತ್ತ ಅತ್ಯಂತ ಸಂಭ್ರಮದಿಂದ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಬರುವ ಜನೆವರಿ 1ರಂದು ಅತ್ಯಂತ ಸಂಭ್ರಮ ಮತ್ತು ವೈಭವೋಪೇತವಾಗಿ ಶಾಲೆಗಳನ್ನು ಪುನರಾರಂಭಿಸಲು ತೀಮರ್ಾನಿಸಲಾಗಿದೆ.
ಬಳ್ಳಾರಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಶಿಕ್ಷಣ ಸಚಿವ ಸುರೇಶಕುಮಾರ್ ಅಧ್ಯಕ್ಷತೆಯಲ್ಲಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರ ಉಪಸ್ಥಿತಿಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ವಿಡಿಯೋ ಕಾನ್ಪರೆನ್ಸ್ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ಹಾಗೂ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಶಾಲಾ ಪ್ರಾರಂಭೋತ್ಸವ ಮತ್ತು ಅದರ ಮಂಚೆ ಕೈಗೊಳ್ಳಬೇಕಾದ ಸಿದ್ಧತಾ ಕ್ರಮಗಳನ್ನು ಜಿಲ್ಲೆಯ ಸರಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಕಡ್ಡಾಯವಾಗಿ ಅನುಸರಿಸುವಂತೆ ಅವರು ಸೂಚನೆ ನೀಡಿದ್ದಾರೆ.
2021ರ ಜನೆವರಿ 1ರಿಂದ ಶಾಲಾ ಪ್ರಾರಂಭೋತ್ಸವ ಅನುಷ್ಠಾನಗೊಳಿಸಲು ಈಗಾಗಲೇ ಡಿಎಸ್ಇಆರ್ಟಿಯಿಂದ ಬಿಡುಗಡೆಗೊಂಡಿರುವ ಶಾಲಾ ಪ್ರಾರಂಭೋತ್ಸವ ಮಾರ್ಗಸೂಚಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಷ್ಕೃತ ಸುತ್ತೋಲೆ ಅನುಸರಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಲಕರು,ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು,ಸಾರ್ವಜನಿಕರು,ಮಕ್ಕಳು ಪುನಃ ಶಾಲೆಗಳಿಗೆ ತೆರಳಲು ಅವರಲ್ಲಿ ವೈರ್ಯ ಭರವಸೆ ಉತ್ಸಾಹ ಪ್ರೋತ್ಸಾಹಗಳನ್ನು ನೀಡುವುದರ ಮೂಲಕ ಮಕ್ಕಳನ್ನು ಮಾನಸಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
10ನೇ ತರಗತಿಯವರಿಗೆ ಪೂರ್ಣ ಶಾಲೆಗಳು 2021 ಜನೆವರಿ 1ರಿಂದ ಪ್ರಾರಂಭವಾಗಲಿವೆ. ಎಲ್ಲಾ ತರಗತಿಯ ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ;ಸ್ವ ಇಚ್ಚೆಯಿಂದ ಪೋಷಕರ ಒಪ್ಪಿಗೆ ಪತ್ರದ ಮೇರೆಗೆ ಶಾಲೆಗೆ ಹಾಜರಾಗಬಹುದು. ಶಾಲೆಗೆ ಹಾಜರಾಗದ ವಿದ್ಯಾಥರ್ಿಗಳು ಆನ್ಲೈನ್ ಮೂಲಕವೂ ತರಗತಿಗಳನ್ನು ಆಲಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ತಿಳಿಸಿದ್ದಾರೆ.
*ವಿದ್ಯಾಗಮ ಜ.1ರಿಂದ ಪ್ರಾರಂಭ: 6ರಿಂದ 9ನೇ ತರಗತಿ ವಿದ್ಯಾಥರ್ಿಗಳಿಗಾಗಿ ವಿದ್ಯಾಗಮ ಜ.1ರಿಂದ ಪ್ರಾರಂಭವಾಗಲಿವೆ. 01 ರಿಂದ 5ನೇ ತರಗತಿಗೆ ವಿದ್ಯಾಗಮ ಜ.14ರಿಂದ ಪ್ರಾರಂಭವಾಗಲಿವೆ ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.
ಶಿಕ್ಷಕರ ಹಾಗೂ ಸಿಬ್ಬಂದಿಯವರ ಕೋವಿಡ್-19 ಪರೀಕ್ಷೆ ವರದಿ ಕಡ್ಡಾಯ ಮತ್ತು 50 ವಯೋಮಿತಿ ಮೀರಿದ ಶಿಕ್ಷಕರು ಮತ್ತು ಸಿಬ್ಬಂದಿಯವರು ಫೇಶ್ ಶಿಲ್ಡ್ ಧರಿಸಬೇಕು. ಕೋವಿಡ್-19 ಸಂಬಂಧಿಸಿದಂತೆ ಎಲ್ಲಾ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಮುಖ್ಯಗುರುಗಳು, ಸಿ.ಆರ್.ಪಿ, ಬಿ.ಆರ್.ಪಿ, ಇ., ಬಿ.ಆರ್.ಸಿ ಹಾಗೂ ಬಿ.ಇ.ಒ ರವರಿಗೆ ಸೂಚನೆ ನೀಡಲಾಗಿದೆ. ಕೊವಿಡ್-19ಗೆ ಸಂಬಂದಿಸಿದಂತೆ ಇತರೆ ಇಲಾಖೆಗಳಿಗೂ ಸಕರ್ಾರದಿಂದ ಹಾಗೂ ಬಳ್ಳಾರಿ ಜಿಪಂ ಕಡೆಯಿಂದಲೂ ಸಹ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಕ್ಕಳು ಪೋಷಕರು ಆನುಮತಿ ಪತ್ರ ಕಡ್ಡಾಯ/ಶಾಲೆಗೆ ಬರದ ಮಕ್ಕಳು ಆನ್ಲೈನ್ನಲ್ಲಿ ಮುಂದುವರಿಯಬಹುದಾಗಿದೆ.ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಭೌತಿಕ ಅಂತರ ಕಾಪಾಡಬೇಕು ಎಂದು ಅವರು ತಿಳಿಸಿದ್ದಾರೆ.
*ಮಧ್ಯಾಹ್ನ ಬಿಸಿಯೂಟವಿಲ್ಲ;ಊಟ ಮಾಡಲು ಅವಕಾಶವಿಲ್ಲ: ಮಧ್ಯಾಹ್ನದ ಉಪಹಾರ ಯೋಜನೆಯ ಅಡಿ ಬಿಸಿಊಟ ಇರುವುದಿಲ್ಲ ಹಾಗೂ ಆವರಣದಲ್ಲಿ ಊಟಮಾಡಲು ಸಹ ಅವಕಾಶವಿರುವುದಿಲ್ಲ ಎಂದು ಡಿಡಿಪಿಐ ಅವರು ಸ್ಪಷ್ಟಪಡಿಸಿದ್ದಾರೆ.
ಶಾಲೆಗೆ ಹಾಜರಾಗುವ ಎಲ್ಲಾ ಮಕ್ಕಳನ್ನು ಪ್ರತಿದಿನ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ ಮೂಲಕ ಪರೀಕ್ಷಿಸುವುದು. ರೋಗ ಲಕ್ಷಣ ಕಂಡುಬಂದರೆ ಶಾಲೆಗೆ ಹಾಜರಾಗುವಂತಿಲ್ಲ;ಒಂದು ವೇಳೆ ಯಾವುದೇ ರೀತಿಯ ರೋಗಲಕ್ಷಣಗಳು ಇದ್ದಲ್ಲಿ ಪೋಷಕರ ಗಮನಕ್ಕೂ ಹಾಗೂ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತರುವುದು ಕಡ್ಡಾಯ ಎಂದು ಅವರು ವಿವರಿಸಿದ್ದಾರೆ.
ಒಂದು ತಂಡದಲ್ಲಿ ಗರಿಷ್ಠ ವಿದ್ಯಾಥರ್ಿಗಳ ಸಂಖ್ಯೆ 15-20 ಇರಬೇಕು. ಗ್ರಾಮ ಪಂಚಾಯತಿಗಳು/ನಗರ ಸ್ಥಳೀಯ ಸಂಸ್ಥೆಗಳು ಅವರ ವತಿಯಿಂದ ಶಾಲೆಗಳ ಸ್ವಚ್ಚತೆ ಹಾಗೂ ಸ್ಯಾನಿಟೈಜೇಷನ್ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊರಡಿಸಿರುವ ಕೋವಿಡ್-19ರ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಸತಿಶಾಲೆ ಮತ್ತು ವಸತಿ ನಿಲಯಗಳ ಮಕ್ಕಳು,ಶಿಕ್ಷಕರು ಮತ್ತು ಸಿಬ್ಬಂದಿ ಪ್ರವೇಶ ಪಡೆಯುವ ಮುಂಚಿನ 72 ಗಂಟೆಗಳ ಅಂತರದಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿದ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು.
ಶಾಲಾ ಪ್ರಾರಂಭದ ಕುರಿತು ಎಸ್.ಡಿ.ಎಂ.ಸಿ/ ಆಡಳಿತ ಮಂಡಳಿಗಳು/ಸಂಬಂಧಿಸಿದ ಪೋಷಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಕೈಗೊಂಡ ಪೂರ್ವತಯಾರಿಯನ್ನು ಮನವರಿಕೆ ಮಾಡಬೇಕು. ವಿದ್ಯಾಥರ್ಿಗಳು ಕುದಿಸಿ ಆರಿಸಿದ ಶುದ್ಧ ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು ಎಂದು ಅವರು ವಿವರಿಸಿದ್ದಾರೆ.
ಸೋಂಕು ತಗಲದಂತೆ ಮುನ್ನೆಚ್ಚರಿಕಾ ಕ್ರಮಗಳಾಗಿ ಶಾಲಾ ಕಟ್ಟಡದ ಗೋಡ ರೀಲಿಂಕ್ಸ್ ಲಿಫೈ, ಸೈರ್ಕೇಸ್, ವಾಹನಗಳು ಪೀಠೋಪಕರಣಗಳು ಇತ್ಯಾದಿಗಳನ್ನು 1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸುವುದು, ಸೇವಾಸಂಸ್ಥೆಗಳಾದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಸೌಟ್ ಮತ್ತು ಗೈಡ್ ಹಾಗೂ ದಾನಿಗಳ ನೆರವನ್ನು ಪಡೆದು ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಲಭ್ಯತೆಯನ್ನು ಒದಗಿಸುವುದು.
ವಿವಿಧ ಇಲಾಖೆಗಳೊಂದಿಗೆ ಸಮನ್ವಯಸಾಧಿಸಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ಹೆಚ್ಚುವರಿ ಕೊಠಡಿ ಮೀಸಲಿಡಬೇಕು ಎಂದು ಸೂಚಿಸಿರುವ ಅವರು ಎಲ್ಲಾ ಶಾಲೆಗಳ ಶೌಚಾಲಯ, ಕೊಠಡಿಗಳು, ಮೈದಾನ, ಶಾಲಾ ಆವರಣವು ಸ್ವಚ್ಚ ಮಾಡಿಸುವುದು. ಶಾಲೆಗಳನ್ನು ತಳಿರುತೋರಣಗಳಿಂದ ಸಿಂಗರಿಸಿ ಶಾಲಾ ಅಂಗಳದಲ್ಲಿ ರಂಗೋಲಿ ಬಿಡಿಸಿ ಶಾಲಾ ಆವರಣವನ್ನು ಅಂದಗೊಳಿಸಬೇಕು ಎಂದು ತಿಳಿಸಿದ್ದಾರೆ.