ಶಿಗ್ಗಾವ್

ನಿರಂತರ ಅಧ್ಯಯನ ಮೂಲಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಿ: ಯಲಿಗಾರ

ನಿರಂತರ ಅಧ್ಯಯನ ಮೂಲಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಿ: ಯಲಿಗಾರ

ಲೋಕದರ್ಶನ ವರದಿ 

ಶಿಗ್ಗಾವಿ20: ವಿಭಿನ್ನ ಆಲೋಚನೆ, ಪ್ರಾಮಾಣಿಕ ಪ್ರಯತ್ನ ಹಾಗೂ ನಿರಂತರಅಧ್ಯಯನ ಮೂಲಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯಅಧ್ಯಕ್ಷ ಶಶಿಧರ ಯಲಿಗಾರಅಭಿಪ್ರಾಯ ಪಟ್ಟರು.

ತಾಲೂಕಿನಮುಗಳಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದಅವರು, ಮನುಷ್ಯ ತನಗಿಷ್ಟವಾದ ಸಂಪತ್ತನ್ನು ಗಳಿಸಬಹುದು. ಆದರೆ ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೂ ಹಂಚುವ ಮನೋಭಾವ ಇರಬೇಕು. ಬದುಕು ನಶ್ವರ.ನಾವು ಮಾಡಿದ ಕಾರ್ಯ ಶಾಶ್ವತ.ಈ ಹಿನ್ನೆಲೆಯಲ್ಲಿ ನಮ್ಮದುಡಿಮೆಯ ಪಾಲಿನಲ್ಲಿ ಶೈಕ್ಷಣಿಕ ಕಾಳಜಿ ಕಾರ್ಯ ಕೈಗೊಂಡಿರುವುದು ತೃಪ್ತಿ ತಂದಿದೆ ಎಂದರು.

  ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ ಮಾತನಾಡಿ, ಶ್ರಮದ ಪಾಲಿನಲ್ಲಿ ನಮ್ಮೂರಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿರುವ ಶಶಿಧರ ಯಲಿಗಾರಅವರ ನಡೆಅಭಿಮಾನದ ಸಂಗತಿಎಂದರು.

ಮುಖ್ಯ ಶಿಕ್ಷಕ ಬಿ.ಬಿ. ಕಟ್ಟಿಮನಿ, ನ್ಯಾಯವಾದಿ ಸುರೇಶ ಅರಳಿಕಟ್ಟಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿಮಹಾದೇವಪ್ಪ ಕಾಮನಹಳ್ಳಿ, ಹವಳೆಪ್ಪ ಪೂಜಾರ, ನಿಂಗಪ್ಪ ಸಕ್ರಿ, ರಮೇಶ ಅರಳಿಕಟ್ಟಿ, ಮಹಾದೇವಪ್ಪ ತಳವಾರ,  ಶಂಭುಲಿಂಗ ಪೂಜಾರ, ಹನುಮಂತಪ್ಪ ಬೆಂಗೇರಿ, ಕವಿತಾ ಭದ್ರಶೆಟ್ಟಿ ಉಪಸ್ಥಿತರಿದ್ದರು.ಈಶ್ವರ ಕಾಲವಾಡ ನಿರೂಪಿಸಿದರು 

ಸುದ್ದಿ ಓದಿ