ಮಳೆಗಾಗಿ ಪ್ರಾರ್ಥಿ ಸಿ ಕತ್ತೆಗಳ ಮದುವೆ
ಲೋಕದರ್ಶನ ವರದಿ,
ಜಮಖಂಡಿ 28: ನಗರದ ಕುಂಬಾರ ಕರೆಯ ಬಳಿ ದ್ಯಾಮವ್ವ ದೇವಿ, ದುಗರ್ಾದೇವಿ ದೇವಾಸ್ಥಾನ ಆವರಣದಲ್ಲಿ ಯುವಕರು, ಹಿರಿಯರು ಸೇರಿಕೊಂಡು ಮಳೆಗಾಗಿ ಪ್ರಾರ್ಥಿಸಿ. ವಿಧಿ ವಿಧಾನಗಳೊಂದಿಗೆ ಕತ್ತೆಗಳ ಮದುವೆಯನ್ನು ನೇರವೆರಿಸಿದರು.
ಹೊಯೋ.ಹೊಯೋ.ಮಳೆರಾಯ.ಬೇಗನೆ ಬಾರೋ ಮಳೆರಾಯ ಎಂದು ಮನುಷ್ಯ ಕುಲಕ್ಕೆ, ಪ್ರಾಣಿ ಪಕ್ಷಿಗಳ ಸಂಕುಲಕ್ಕೆ, ಗಿಡಮರಗಳಿಗೆ ನೀರು ಉನಿಸೋ ಮಳೆರಾಯ ಎಂದು ಜನತೆ ಮಳೆರಾಯಣಿಗೆ ಪ್ರಾರ್ಥಿನಿಸಿಕೊಂಡರು.
ಗಂಡು ಕತ್ತೆಗೆ ಶಾಲು, ಟೊಪಿಗೆ, ಟಾವಲ್ ತೊಡಿಸಿ. ಮದುವೆ ಬಾಸಿಂಗ್ ಸರ ಹಾಗೂ ಕೊರಳಿಗೆ ಹೂವಿನ ಮಾಲೆಯನ್ನು ಹಾಕಲಾಯಿತು. ಹೆಣ್ಣು ಕತ್ತೆಗೆ ತೆಲೆಯ ಭಾಗಕ್ಕೆ ಮದುವೆಯ ಬಾಸಿಂಗ್ ಸರವನ್ನು ಕಟ್ಟಿ. ಸುಂದರವಾದ ಸೀರೆಯನ್ನು ತೊಡಿಸಿ. ಕೊರಳಿಗೆ ಹೂ ಮಾಲೆಯನ್ನು ಹಾಕಿ. ಮಾಂಗಲ್ಯ ಧಾರಣೆ ಮಾಡಲಾಯಿತು. ಅಲ್ಲಯೇ ನೆರದಿದ್ದ ಜನರು ಅಕ್ಷತೆಯನ್ನು ಹಾಕಿ. ಕತ್ತೆಗಳ ಮದುವೆಯನ್ನ್ದುದ್ದೂರಿಯಾಗಿ ನೇರವೆರಿಸಿದರು. ಮಾಂಗಲ್ಯ ಧಾರಣಿ ಮಾಡುವ ಸಮಯದಲ್ಲಿ ಬೇಂಡ್ ಬಾಜಾದವರು ತಮ್ಮ ವಾಧ್ಯವನ್ನು ಬಾರಿಸುತ್ತಿದಂತೆ ಕತ್ತೆಗಳು ಹೆದರಿ ಓಡುವ ಪರಿಸ್ಥಿತಿ ಉಂಟಾಯಿತು. ಕತ್ತೆಗಳ ಮಾಲಿಕ ಅವುಗಳನ್ನು ಹಿಡಿದು ಮದುವೆ ಮಾಡಿಸಿದರು.
ಮಳೆಯು ಬಾರದೆ ಇರುವ ಕಾರಣದಿಂದ ಪೂರ್ವಜರ ಕಾಲದಿಂದಲೂ ಬಂದಂತಹ ವಾಡಿಕೆಯು ಕತ್ತೆಗಳ ಮದುವೆ ಮಾಡಿದರೆ ಮಳೆಯು ಬರುತ್ತದೆ ಎಂಬ ನಂಬಿಕೆಯಿಂದ ಕತ್ತೆಗಳ ಮದುವೆಯನ್ನು ಮಾಡಲಾಗಿದೆ ಎಂದು ಪ್ರದೀಪ ಮೆಟ್ಟಗುಡ ತಿಳಿಸಿದರು.
ಶಿವಪ್ಪ ಸವನೂರ, ಸದಾಶಿವ ಮಾನೆ, ರಘು ಲಗಳಿ, ಗಂಗಾಧರ ತಲಬಕ್ಕನ್ನವರ, ಸಂತೋಷ ಗೆಣ್ಣೂರ, ಪ್ರದೀಪ ಲಾಡ, ಕಲ್ಮೇಶ ಚಿಗರಿ, ವರುಣ ಗಾಡಿವಡ್ಡರ, ನಂದೇಪ್ಪ ತಳವಾರ, ವಿನೋದ ಬಿರಾದರ, ಪರಸು ಚಿಗರಿ, ಶ್ರೀಶೈಲ ದೆಬಡಿ, ಇಸುಬ ಶೇಖ ಸೇರಿದಂತೆ ಅನೇಕರು ಇದ್ದರು.