ಜಮಖಂಡಿ

ಬಡ ವಿದ್ಯಾರ್ಥಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ

ಬಡ ವಿದ್ಯಾರ್ಥಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ: 17: ನಗರದ ಸರಕಾರಿ ಮಾದರಿ ಪ್ರಾಥಮಿಕ ನಂಬರ್ 1 ಶಾಲೆಯಲ್ಲಿ ಎನ್.ಆರ್.ಕುಲಕರ್ಣಿ  ಹಾಗೂ ಶಾರದಾ ಸೇವಾ ಸಮಿತಿ ಸಾವಳಗಿ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಿತು.

ಶಾಲೆಯ ವಿದ್ಯಾರ್ಥಿಗಳಾದ ಭಾಗ್ಯವಂತಿ ಹಾದಿಮನಿ 6ನೇ ತರಗತಿ ಮತ್ತು ಸಾವಿತ್ರಿ ತುಳಸಿಗೇರಿ 3ನೇ ತರಗತಿ ಇಬ್ಬರು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಶಾಲೆಯಲ್ಲಿ ಕಲಿಯುವವರಿಗೆ ಅವರ ವಿದ್ಯಾಭ್ಯಾಸದ ಖರ್ಚನ್ನು ಬರಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು. ಅವಶ್ಯಕ ವಸ್ತುಗಳಾದ ಚಾಪೆ, ಕಂಪಾಸ್, ಪೆನ್ನು, ಬಕೆಟ್, ಮಗ್, ಸಾಬೂನ್, ಸ್ಕೂಲ್ಬ್ಯಾಗ್  ಇತ್ಯಾದಿ ವಸ್ತುಗಳನ್ನು  ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡ ವಿದ್ಯಾಥರ್ಿಗಳಿಗೆ  ವಿತರಣೆ ಮಾಡಿದರು.

ಪ್ರಭಾರಿ ಕ್ಷೇತ್ರ ಸಮನ್ವಯಾ ಅಧಿಕಾರಿ ರಮೇಶ್ ಅವಟಿ ಮಾತನಾಡಿ, ಬಡ ಮತ್ತು ಜಾಣ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಶಿಕ್ಷಣದ ಎಲ್ಲ ಖರ್ಚನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯಭವತರಾಗಿರುವ ಎನ್, ಆರ್, ಕುಲಕರ್ಣಿ ಮುಖ್ಯ ಗುರುಗಳ ಸೇವಾ ಭಾವನೆಯನ್ನು ಮೆಚ್ಚುವಂತದ್ದಾಗಿದೆ. ಇಂತಹ ಮಕ್ಕಳ ಏಳಿಗೆಗಾಗಿ ಸಮಾಜದ ಸಂಘ ಸಂಸ್ಥೆಗಳು ಮುಂದೆ ಬರಬೇಕು ಇದರಿಂದ ಪ್ರತಿಭಾವಂತ ಬಡ ಮಕ್ಕಳಿಗೆ ದಾರಿದೀಪವಾದಂತೆ ಆಗುತ್ತದೆ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಬಸಣ್ಣವರ ಪ್ರತಿಭಾವಂತ ಮಾತನಾಡಿ, ಬಡಮಕ್ಕಳ ಸಹಾಯಕ್ಕೆ ಶಿಕ್ಷಕರು ಮತ್ತು ಸಮಾಜ ನಿಂತಲ್ಲಿ ಪ್ರತಿಭಾವಂತ ಮಕ್ಕಳ ಕೊಡುಗೆ ದೇಶಕ್ಕೆ ಹೆಚ್ಚಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ  ಎನ್.ಆರ್.ಕುಲಕರ್ಣಿ ಕೊಡುಗೆ ಅಮೋಘವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಶಿಕ್ಷಕ ಜಕಾತಿ, ನಾವಿ, ಮನಹಳ್ಳಿ, ಮೋಕಾಸಿ, ಆಲಗೂರ, ಚಿಮ್ಮಡ, ಅಮಟೂರ ಮೆಚ್ಚುಗೆ ಮತ್ತು ಬೆಂಬಲವನ್ನ ನೀಡಿದರು.


ಸುದ್ದಿ ಓದಿ