ಡಿಸೆಂಬರ ವೇಳೆಗೆ ರಾಜಕೀಯ ಪಾದಾರ್ಪಣೆ: ಶಶಿಧರ ಯಲಿಗಾರ
ಲೋಕದರ್ಶನ ವರದಿ
ಶಿಗ್ಗಾವಿ 25: ತಾಲೂಕಿನಲ್ಲಿ ನಾನು ಇರುವವರೆಗೂ ನೊಂದವರ ಬೆಂದವರ ದಿನತಲಿತರ ಕೂಲಿ ಕಾರ್ಮಿಕ ರ ಆಟೋ ಚಾಲಕರ ಅಡುಗೆ ಸಹಾಯಕರ, ಆಶಾ ಕಾರ್ಯಕರ್ತೆಯರ ಬೆಳಕಾಗಿ ಇರುತ್ತೇನೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ತಾಲೂಕಿನ ಗಂಗೀಭಾವಿ ರೆಸಾರ್ಟನಲ್ಲಿ ಕೆಲಸ ಮಾಡುವ ಶ್ರಮಿಕರಿಗೆ ದೀಪಾವಳಿ ಹಬ್ಬದ ಅಂಗವಾಗಿ ಸನ್ಮಾನ ಮಾಡಿ ಮಾತನಾಡಿದ ಅವರು ದೀಪಾವಳಿ ಶುಭಾಶಯ ಕೋರಿ ನಂತರ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ 2-3 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ ನಂತರ ಡಿಶಂಬರ ವೇಳೆಗೆ ನನ್ನ ರಾಜಕೀಯ ಪಾದಾರ್ಪಣೆ ಬಗ್ಗೆ ಹೇಳುತ್ತೇನೆ ಎಂದರು.
ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಜನರು ರಾಜಕೀಯ ಸೇರ್ಪಡೆಯ ಬಗ್ಗೆ ಪ್ರತಿದಿನ ದೂರವಾಣಿ ಮೂಲಕ ಕೆಲವರು ರೆಸಾರ್ಟಗೆ ಬಂದು ಮತ್ತೆ ಕೆಲವರು ಈಗ ನಿಮಗೆ ಒಳ್ಳೆಯ ಅವಕಾಶ ಏಕೆಂದರೆ ತಾಲೂಕಿನಲ್ಲಿ ನಿಮ್ಮ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಆದ್ದರಿಂದ ನೀವು ದೃಡ ನಿರ್ಧಾರ ಮಾಡಿದರೆ ನಾವು ನಿಮಗೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು. ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ ಕಾರ್ಯಕ್ರಮ ನಿರ್ವಹಿಸಿದರು