ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್ಗೆ ಮನವಿ
ಮುದ್ದೇಬಿಹಾಳ: ಗುಣಾತ್ಮಕ ಮತ್ತು ಸ್ಪರ್ಧಾತ್ಮಕ ಶಿಕ್ಷಣಕ್ಕೆ ದೇಶದಲ್ಲಿಯ ಮಾದರಿಯರ ಪದವಿ ಪೂರ್ವಾ ಶಿಕ್ಷಣ ಇಲಾಖೆಯ ಆಸ್ಮಿಯನ್ನು ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ಪದವಿ ಪರ್ವ ಶಿಕ್ಷಣ ಇಲಾಖೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ಬೋಧಕೇತರರ ಸಂಘದ ವತಿಯಿಂದ ಗುರುವಾರ ತಹಶೀಲ್ದಾರ ಬಲರಾಮ ಕಟ್ಟಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸುಪ್ರಸಿದ್ಧ ಕೋಠಾರಿ ಆಯೋಗದ ಶಿಫಾರಸ್ಸಿನಂತೆ +2 ಹಂತವನ್ನು ರಾಜ್ಯದಲ್ಲಿ ಅಳಏ ಏಲಗಿ ಪಿ.ಮಲ್ಲಿಕಾಜರ್ುನಪ್ಪನವರ ನೇತೃತ್ವದ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ 1971ರ ಜನವರಿಯಲ್ಲಿ ಸರದಿ ಪೂರ್ವ ಶಿಕ್ಷಣ ಮಂಡಳಿಯು ಅಸ್ತಿತ್ವಕ್ಕೆ ಬಂದಿತು. ಮುಂದೆ, ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್.ಬಂಗಾರಪ್ಪರವರ ಹಾಗೂ ಶಿಕ್ಷಣ ಸಚಿವರಾಗಿದ್ದ ಸನ್ಮಾನ್ಯ ವೀರಪ್ಪ ಮೊಯ್ಲಿ ಅವರ ದೂರದೃಷ್ಟಿ ಹಾಗೂ ಬದ್ಧತೆಯ ಫಲವಾಗಿ ಜೂನ್, 1992 ರಂದು ಸ್ವತಂತ್ರ ಪದವಿ ಪೂರ್ದ ಶಿಕ್ಷಣ (ಪಪೂಶಿ) ಇಲಾಖೆ ರೂಪುಗೊಂಡಿತು. ಹೀಗೆ ರೂಪುಗೊಂಡ ಪಪೂಶಿ ಇಲಾಖೆಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಹಂತಗಳ ನಡುವೆ ಒಂದು ಸೇತುವಾಗಿ ಗುಣಾತ್ಮಕ ಹಾಗೂ ಸ್ಪಧರ್ಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಮೂಲಕ ರಾಷ್ಟ್ರದಲ್ಲಿಯೇ ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದ್ದು, ಹೊರ ರಾಜ್ಯಗಳ ಶಿಕ್ಷಣ ತಜ್ಞರು ಆಗಮಿಸಿ, ನಮ್ಮ ಪಪೂಶಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ಹೋಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಮ್ಮ ಸಿ.ಇ.ಟಿ.ಗಳಲ್ಲಿ ಯಶಸ್ಸನ್ನು ಸಾಧಿಸಿದವರು ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಉನ್ನತ ಸ್ಥಾನಗಳನ್ನಲಂಕರಿಸಿ, ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ತನ್ನದೇಯಾದ ಶೈಕ್ಷಣಿಕ ಮೌಲ್ಯ ಮತ್ತು ಅಸ್ಮಿತೆಯನ್ನು ಹೊಂದಿರುವ ಪಪೂಶಿ ಇಲಾಖೆಯನ್ನು ಹಂತ ಹಂತವಾಗಿ ಕೊಲ್ಲುವ ಪ್ರಯತ್ನಗಳು ನಡೆಯುತ್ತಿರುವುದು ದುರಾದೃಷ್ಟಕರ, ಎಲ್ಲಾ ವರ್ಗದ ಬಡ ಮಕ್ಕಳಿಗೂ ಗುಣಾತ್ಮಕ ಮತ್ತು ಮೌಲಿಕ ಶಿಕ್ಷಣ ದೊರಕುವಂತಾಗಲಿ ಎಂಬ ಸಮಾಜವಾದಿ ಧುರೀಣ ಬಂಗಾರಪ್ಪನವರ ಆಶಯದ ಫಲವಾಗಿ ರೂಪುಗೊಂಡಿದ್ದ ಪಸೂತಿ ಇಲಾಖೆಯೇ ಇಂದು ಮರಣ ಶಯ್ಯೆಯಲ್ಲಿದೆ. ಬಂಗಾರಪ್ಪನವರ ಸುಪುತ್ರ ಸನ್ಮಾನ್ಯ ಶ್ರೀಮಧು ಬಂಗಾರಪ್ಪನವರೇ ಇಲಾಖೆಯ ಸಚಿವರಾಗಿದ್ದೂ ಕೂಡ ಇಲಾಖೆಯ ಶವಪೆಟ್ಟಿಗೆಗೆ ಮೊಳೆ ಹೊಡೆಯುತ್ತಿರುವುದು ವಿಷಾಧಕರ ವಿಷಯವಾಯಾಗಿದೆ
ಕಾರಣ ಈ ಮೊದಲಿದ್ದ ಪಪೂತಿ ಇಲಾಖೆಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಎಂದು ಹೆಸರು ಬದಲಿಸಲಾಗಿದೆ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿಯು ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ ಕೈಬಿಟ್ಟು ಪದವಿ ಪೂರ್ವ ಶಿಕ್ಷಣ ಇಲಾಖೆ ಎಂಬ ಹೆಸರನ್ನೇ ಹಿಂದಿನಂತೆ ಯಥಾಸ್ಥಿತಿಯಲ್ಲಿಯೇ ಇರಿಸಬೇಕು.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ ವಿಭಾಗವನ್ನು ಹಿಂತೆಗೆದು ಪುನಃ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿತಪ್ಪಿರುವ ಸಮನ್ವಯವನ್ನು ಮರುಸ್ಥಾಪಿಸಬೇಕು. ಅಲ್ಲದೆ, ಕುಸಿಯುತ್ತಿರುವ ಪರೀಕ್ಷಾ ಮೌಲ್ಯ ಪಾವಿತ್ರತೆಯನ್ನು ಎತ್ತಿಹಿಡಿಬೇಕು.
ಪ್ರತಿ ಜಿಲ್ಲಾ ಹಂತಗಳಲ್ಲಿ ಪಪೂಶಿ ಇಲಾಖೆಯ ಮೇಲುಸ್ತುವಾರಿ ನಡೆಸುವ ಸಂಬಂಧ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಇವರಿಗೆ ವಹಿಸಲು ಸರ್ಕಾರದ ಅಧೀನ ಕಾರ್ಯದರ್ಶಿಗಳು ಅ.18 ರಂದು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಇದರಿಂದ ಸರಾಗವಾಗಿ ನಡೆಯುತ್ತಿರುವ ಇಲಾಖೆಯ ಚಟುವಟಿಕೆಗಳು ಸಂಕೀರ್ಣಗೊಂಡು, ಏಳಂಬನೀತಿಗೆ ಕಾರಣವಾಗಬಹುದು.
ಸರ್ಕಾರವು ಯಾವುದೇ ಶಿಕ್ಷಕರ ಸಂಘಟನೆಗಳ ಜೊತೆಗಾಗಲಿ, ಶಿಕ್ಷಣ ತಜ್ಞರ ಜೊತೆಗಾಗಲಿ ಸಾಧಕ-ಬಾಧಕಗಳ ಕುರಿತು ಚರ್ಚೆಸಮಾಲೋಚನೆಗಳನ್ನು ನಡೆಸದೇ ಏಕಾಏಕಿ ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಸಿಯುವುದು ಮಾತ್ರವಕಲ್ಲದೇ ಓದಿನ ಬಗಗೆ ತಾತ್ಸಾರ ಬೆಳೆಸುತ್ತದೆ ಪ್ರತಿಭಾನ್ವೀತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈಪದ್ದತಿಯಿಂದ ನೈಜ ಮೌಲ್ಯ ಮಾಪನ ಸಾಧ್ಯವಾಗುವುದಿಲ್ಲ, ಈ ವಿಧಾನ ದಿಂದ ಪ್ರಮಾಣಾತ್ಮಕ ಫಲಿತಾಂಶ ದೊರಕುತ್ತದಯೇ ವಿನಃ ಗುಣಾತ್ಮಕ ಫಲಿತಾಂಶವಲ್ಲ ಉಪನ್ಯಾಸಕರು ಶೈಕ್ಷಣಿಕ ವರ್ಷರಾಂಭದ ಕೆಲವು ತಿಂಗಳು ನೂತನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದನ್ನು ಬಿಟ್ಟು ಹಳೆ ವಿದ್ಯಾರ್ಥಿಗಳು ಪರೀಕ್ಷೇ ಮತ್ತು ಮೌಲ್ಯ ಮಾಪನ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ ಅಷ್ಟೇ ಅಲ್ಲದೇ ಸಂಪೂರ್ಣ ಬೇಸಿಗೆ ರಜೆಯನ್ನು ಉಪನ್ಯಾಸಕರು ಕಳೆದುಕೊಳ್ಳಬೇಕಾಗುತ್ತದೆ ಆದ್ದರಿಂದ ಪಪೂಶಿ ಇಲಾಖೆಯನ್ನು ರಜೆ ರಹೀತ ಇಲಾಖೆಯನ್ನಾಗಿ ಘೋಷಿಸಿ ಇತರ ಸವಲತ್ತುಗಳನ್ನು ನೀಡಬೇಕು ಎಂದು ಮನವಿ ಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಎಂಜಿವಿಸಿ ಕಾಲೇಜಿನ ಪ್ರಿನ್ಸಿಪಾಲ್, ರಕ್ಕಸಗಿ ಕಾಲೇಜಿನ ರಮೇಶ ಲಮಾಣಿ, ನಾಲತವಾಡ ವೀರೇಶ್ವರ ಪಿಯು ಕಾಲೇಜಿ ಪ್ರಿನ್ಸಿಪಾಲ ಎಸ್. ಐ.ಮಳಖೇಡ, ಮುದ್ದೇಬಿಹಾಳ ಸರಕಾರಿ ಪಿಯು ಕಾಲೇಜಿನ ಪ್ರಿನಸಿಪಾಲ್, ಎಸ್ ಎಸ್ ಅಂಗಡಿ, ಬಸರಕೋಡ ಸರಕಾರಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸಂಗಮೇಶ ಕಮತರ, ಎಸ್ ಎಸ್ ಪಿಯು ಕಾಲೇಜಿನ ಮುಖ್ಯಸ್ಥ ರವಿ ನಾಯಕ, ಎಂಜಿ ಎಂ ಕೆ ಕಾಲೇಜಿನ ಸುರೇಶ ಹರನಾಳ, ಜ್ಞಾನ ಭಾರತಿ ಪಿಯು ಕಾಲೇಜಿನ ಅರುಣ ಹುನಗುಂದ, ಆಕ್ಸಫರ್ಡ ಪಿಯು ಕಾಲೇಜಿನ ರೇವಣ ಸಿದ್ದಪ್ಪ ಚಲವಾದಿ, ಅಭ್ಯುದಯ ಪಿಯು ಕಾಲೇಜಿ ಬಿ.ಜಿ ಬಿರಾದಾರ ಸೇರಿದಂತೆ ಹಲವರು ಇದ್ದರು.