ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಗುರಿಯಾಗಲಿ....
ಶ್ರೇಷ್ಠ ಶಿಕ್ಷಣ ತಜ್ಞರಾದಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳಿರುವಂತೆ, ನಾನು ಒಬ್ಬ ಶಿಕ್ಷಕ, ಶಿಕ್ಷಣವೇ ನನ್ನಧರ್ಮ, ಮಕ್ಕಳೇ ನನ್ನದೇವರು, ಶಾಲೆಯೇ ನನ್ನದೇವಾಲಯ, ಬೋಧನೆಯೇ ನನ್ನ ಪೂಜೆ ಮತ್ತು ಮಕ್ಕಳ ಸಾಧನೆಯೇ ನನಗೆ ಮಹಾಪ್ರಸಾದವೆಂದು ಅರಿತರೆ ಶಿಕ್ಷಣ ಮತ್ತು ಶಿಕ್ಷಕನ ಗುರಿಈಡೇರಿದಂತೆ ಎಂದು ಹೇಳಿದ್ದಾರೆ. ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯಲ್ಲಿರುವಅಂಧಕಾರವೆಂಬ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವೆಂಬ ಜ್ಞಾನದ ದೀವಿಗೆಯನ್ನು ಬೆಳಗುವಂತೆ ಮಾಡುವ ಸಾಧನವಾಗಿದೆ. ಸ್ವಾಮಿ ವಿವೇಕಾನಂದರು ಶಿಕ್ಷಣವೆಂದರೆ ಅದು ಕೇವಲ ಓದು-ಬರಹಕ್ಕೆ ಮಾತ್ರ ಸಿಮೀತವಾಗಬಾರದು. ಪ್ರತಿ ಮಗು ಕಲಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡುತನ್ನಲ್ಲಿರುವ ವಿಶಿಷ್ಟವಾದ ಕಲೆ, ಪ್ರತಿಭೆ, ಜ್ಞಾನ, ಕೌಶಲ್ಯ, ನೈಪುಣ್ಯತೆ, ಕ್ರಿಯಾಶೀಲತೆ, ಸೃಜನಶೀಲತೆಯಂತಹ ವಿಶೇಷವಾದ ಮತ್ತುಗುಣಾತ್ಮಕವಾದ ಶಿಕ್ಷಣವನ್ನು ಪಡೆಯುವಂತಿರಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಶಿಕ್ಷಣವೆಂದರೆ ಕೇವಲ ಪಠ್ಯಕ್ರಮದ ಪ್ರಕಾರ ದೊರೆಯುವ ವಿಷಯಜ್ಞಾನ ಮಾತ್ರವಲ್ಲ. ಅದು ವಿದ್ಯಾಥರ್ಿಗೆ ವಿಷಯ ಜ್ಞಾನದ ಜತೆಗೆ ವ್ಯವಹಾರಿಕಜ್ಞಾನ, ಸಾಮಾನ್ಯ ಅರಿವು-ತಿಳುವಳಿಕೆ, ಸರಿ-ತಪ್ಪನ್ನು ವಿವೇಚಿಸುವ, ವಿಮಶರ್ಿಸುವ ಹಾಗೂ ಬದುಕಿಗೆ ಅಗತ್ಯವಾಗಿರುವ ಪ್ರಾಯೋಗಿಕ ಜ್ಞಾನವನ್ನು ಪಡೆದು ಆ ವಿದ್ಯಾಥರ್ಿಯುತನ್ನ ಭಾವೀಜೀವನವನ್ನು ಯಾವುದೇ ಸ್ವಯಂ ಉದ್ಯೋಗಕೈಕೊಂಡು ಸ್ವಾವಲಂಬನೆಯನ್ನು ಸಾಧಿಸುವಂತಹ ಶಿಕ್ಷಣ ಇಂದು ನಮಗೆ ಬೇಕಾಗಿದೆ. ಅಂದಾಗ ಮಾತ್ರ ಶಿಕ್ಷಣದ ಮಹತ್ತರವಾದ ಉದ್ದೇಶವು ಈಡೇರಿಕೆಯಾಗಿ ಪಡೆದ ಶಿಕ್ಷಣದಿಂದ ಬದುಕುವಕಲೆಯನ್ನು ಮೇಳೈಸಿಕೊಂಡು ಸ್ವಾವಲಂಬಿ ಜೀವಿಯಾಗಿ ಬದುಕಲು ಸಾಧ್ಯ.
ಶಿಕ್ಷಕರು ಪ್ರತಿ ಮಕ್ಕಳ ಅಥವಾ ವಿದ್ಯಾಥರ್ಿಗಳಲ್ಲಿರುವ ಆಸಕ್ತಿ, ಅಭಿರುಚಿ, ಮನೋಭಿಲಾಷೆ, ಹಂಬಲ, ತುಡಿತ, ಕಲಿಯಬೇಕೆಂಬ ಮನಸ್ಸನ್ನು ಗುರುತಿಸಿ ಅವರ ಕಲಿಕಾ ಮಟ್ಟಕ್ಕೆಅನುಗುಣವಾಗಿ ಬೋಧಿಸಬೇಕು. ಕಲಿಕೆ ಎಂದರೆಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆಂಬ ತವಕ, ಹಂಬಲ ಮತ್ತು ಉತ್ಕಟ ಅಪೇಕ್ಷೆ. ನಾವು ನೀಡುವ ಶಿಕ್ಷಣವು ಮಕ್ಕಳಿಗೆ ಮಾನಸಿಕ ಒತ್ತಡ ಅಥವಾ ಹೊರೆಯಾಗುವಂತಿರಬಾರದು. ಅದುಅವರಲ್ಲಿರುವ ಆಸಕ್ತಿ, ಪ್ರತಿಭೆ ಮತ್ತು ಅಭಿರುಚಿಗೆ ತಕ್ಕಂತೆ ಕಲಿಯುವಂತಾಗಬೇಕು. ತಂದೆ-ತಾಯಿ, ಪೋಷಕರುತಮ್ಮ ಮಕ್ಕಳಲ್ಲಿರುವ ಕಲಿಕಾಸಕ್ತಿ ಗುರುತಿಸಿ, ಅಧ್ಯಯನದ ಒಲವು ಮತು ಅಪೇಕ್ಷಿತವಾದ ಶಿಕ್ಷಣವನ್ನೇ ಕೊಡಿಸಬೇಕು. ಉದಾ-ಚಿತ್ರಕಲೆ, ಸಂಗೀತ, ನೃತ್ಯ, ಕಲೆ, ವಾಣಿಜ್ಯ ಮತ್ತು ವಿಜ್ಞಾನ, ಇಂಜನಿಯರಿಂಗ್, ವೈದ್ಯಕೀಯ ಹೀಗೆ ಯಾವ ವಿಷಯಗಳಲ್ಲಿ ಅವರಿಗೆ ಓದುವ ಆಸಕ್ತಿಯಿದೆಯೋ ಎನ್ನುವುದನ್ನು ಅಥರ್ೈಸಿಕೊಂಡು ಕಲಿಕೆಗೆ ಪ್ರೇರಣೆ, ಪ್ರೋತ್ಸಾಹ ಮತ್ತು ಉತ್ತೇಜನ ನೀಡಬೇಕು. ಅಂದಾಗ ಮಾತ್ರ ಅವರು ಪಡೆದ ಶಿಕ್ಷಣದಲ್ಲಿ ನಿರೀಕ್ಷೀತ ಫಲಿತಾಂಶ ಪಡೆಯಲು ಸಾಧಯವಾಗುತ್ತದೆ. ಆದ್ದರಿಂದ ಶಿಕ್ಷಣವು ಮಕ್ಕಳ ಕಲಿಕೆಗೊಂದು ಪ್ರೇರಣೆಯಾಗಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.
ವ್ಯಕ್ತಿತ್ವ ವೆಂದರೆ ಒಬ್ಬ ವ್ಯಕ್ತಿಯಲ್ಲಿ ಇರುವ ಸ್ವಚ್ಛವಾದ ಹೃದಯದ ಭಾವನೆಗಳು, ಏಕಾಗ್ರತೆ, ಒಳ್ಳೆಯ ಆಲೋಚನೆ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಸನ್ನಡತೆ, ಸದ್ಗುಣ, ಸಚ್ಚಾರಿತ್ರ್ಯ, ಉನ್ನತವಾದ ಮೌಲ್ಯಗಳು, ಇತರರನ್ನು ಗೌರವಿಸುವ ಗುಣ, ಸ್ವ-ಅರಿವು-ತಿಳುವಳಿಕೆ, ಕಾರ್ಯ ನಿಷ್ಠೆ, ಪರಿಶ್ರಮ ವಹಿಸಿ ದುಡಿಯುವ ಪ್ರವೃತ್ತಿ ಇವೆಲ್ಲವುಗಳ ಸಂಮಿಶ್ರಣವೇ ವ್ಯಕ್ತಿತ್ವವೆನ್ನಬಹುದು. ನಾವು ಎಷ್ಟು ಓದಿದ್ದೇವೆ, ಯಾವ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದೇವೆಎಂಬುದು ಮುಖ್ಯವಲ್ಲ. ನಿಜವಾದ ಶಿಕ್ಷಣವೆಂದರೆ ಬೇರೆಯವರೊಂದಿಗೆ ನಮ್ಮ ಮಾತು, ಸಂಸ್ಕಾರ ಮತ್ತು ನಡುವಳಿಕೆಗಳೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ.
ಇಂದಿನ ಶಿಕ್ಷಣವು ಕೇವಲ ಓದು-ಬರಹ, ಅಕ್ಷರಜ್ಞಾನ, ಜಾಣ್ಮೆ, ಬುದ್ಧಿವಂತಿಕೆ, ಪ್ರತಿಭೆ, ಅಂಕ ಮತ್ತು ಪದವಿ ನೀಡುವದಕ್ಕೆ ಮಾತ್ರ ಸಿಮೀತವಾಗಿದೆ ಎಂದರೆತಪ್ಪಾಗಲಿಕ್ಕಿಲ್ಲ, ಅದು ಮಕ್ಕಳ-ವಿದ್ಯಾಥರ್ಿಗಳಿಗೆ ಜ್ಞಾನಧಾರೆಯೆರೆಯುವದರಜೊತೆಗೆ ಶಿಸ್ಸು, ಸಂಯಮ, ಸಂಸ್ಕೃತಿ-ಸಂಸ್ಕಾರ, ನೈತಿಕತೆ, ಮೌಲ್ಯಗಳು, ಮಾನವೀಯ ಸಂಬಂಧಗಳು, ರಾಷ್ಟ್ರಪ್ರೇಮ, ಭಾವೈಕ್ಯತೆ, ಸೌಹಾರ್ಧತೆ, ಪರಸ್ಪರ ಸಹಕಾರ, ನಾಯಕತ್ವ ಗುಣಗಳನ್ನು ಒಡಮೂಡಿಸುವಂತಿರಬೇಕು. ವ್ಯಕ್ತಿಯ ಪರಿಪೂರ್ಣತೆಗೆ ಬೇಕಾದ ಎಲ್ಲ ಜೀವನ ಮೌಲ್ಯ, ಬದುಕುವ ಕಲೆ, ಜನರೊಂದಿಗೆ ಕೂಡಿ-ಬೆರೆತು ಜೀವನ ನಿರ್ವಹಣೆ ಮಾಡುವ ಗುಣಗಳನ್ನು ಅಳವಡಿಸಿಕೊಳ್ಳುವಂತಾಗಬೇಕು. ಇಂದು ಕೆಲವು ವಿದ್ಯಾಥರ್ಿಗಳು ಪರೀಕ್ಷೆಯಲ್ಲಿಕಡಿಮೆ ಅಂಕ ಬಂದಿತೆಂದು, ತಂದೆ-ತಾಯಿ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಜರುಗುತ್ತಿರುವದು ವಿಷಾದನೀಯ ಸಂಗತಿ. ಅದಕ್ಕಾಗಿ ಶಿಕ್ಷಕರು ವಿದ್ಯಾಥರ್ಿಗಳ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಕ್ರಮ, ಮಕ್ಕಳಲ್ಲಿ ದೃಢವಾದ ಮನಸ್ಸು, ಒತ್ತಡ ನಿರ್ವಹಣೆ, ಉದ್ವೇಗ ತಡೆಯುವದು, ಸಮಯ ನಿರ್ವಹಣೆ ಮತ್ತು ಸಮಸ್ಯಗಳು ಬಂದಾಗ ಅದಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಸಂದರ್ಭ ಬಂದರೆ ಆಪ್ತ ಸಮಾಲೋಚನೆ ಮಾಡಿಅವರ ಮನದಲ್ಲಿನ ನಕಾರಾತ್ಮಕ ಮತ್ತು ನಿಷೇಧಾತ್ಮಕ ಭಾವವನ್ನು ಹೊಡೆದೋಡಿಸಬೇಕು.
ಕೊನೆಯ ನುಡಿ: ಸ್ವಾಮಿ ವಿವೇಕಾನಂದರು ವೈಚಾರಿಕ, ನೈತಿಕ ಸಾಮಥ್ರ್ಯದಿಂದ ಇಡೀಜತ್ತನ್ನೇಗೆಲ್ಲಬಹುದು ಮತ್ತು ಪರಂಪರೆ, ಸಂಸ್ಕೃತಿ-ಸಂಸ್ಕಾರದ ಅರಿವಿನೊಂದಿಗೆ ಸಚ್ಚ್ಯಾರಿತ್ರ್ಯವನ್ನು ಅಳವಡಿಸಿಕೊಂಡಾಗ ಶಿಕ್ಷಣದ ಉದ್ದೇಶಿತ ಗುರಿಯನ್ನು ಪ್ರಾಮಾಣಿಕವಾಗಿ ಸಾಧಿಸಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಶಿಕ್ಷಕರು ಸ್ವತಃ ಆದರ್ಶಪ್ರಾಯ ಮತ್ತು ಮಾದರಿಯಾಗಿ ಮಕ್ಕಳ ಮನಸ್ಸಿನ ಪ್ರಭಾವ ಬೀರುತ್ತಾ ಪಠ್ಯದಜೊತೆಗೆ ಸಾಂದಭರ್ೋಚಿತವಾಗಿ ಸತ್ಯ, ನ್ಯಾಯ, ನಿಷ್ಠೆ, ಪ್ರಾಮಾಣಿಕತೆ, ಕಾರ್ಯತತ್ಪರತೆ, ಮಾನವೀಯ ಮೌಲ್ಯಗಳು, ಸಂಬಂಧಗಳು, ದೇಶಪ್ರೇಮ, ಸಚ್ಚಾರಿತ್ರ್ಯ, ಸಮರ್ಪಣಾ ಮನೋಭಾವದಂತಹ ಗುಣಗಳನ್ನು ಧಾರಣೆ ಮಾಡಿಸಬೇಕು. ಅಂದಾಗ ಮಾತ್ರ ಶಿಕ್ಷಣದಿಂದ ವಿದ್ಯಾಥರ್ಿಗಳ ವ್ಯಕ್ತಿತ್ವ ವಿಕಸನಗೊಂಡು ಶಿಕ್ಷಣದ ಗುರಿ ಈಡೇರಿಕೆ ಮತ್ತು ಶಿಕ್ಷಕನ ಕಾರ್ಯವು ಪರಿಪೂರ್ಣವಾಗುವದರಲ್ಲಿ ಯಾವುದೇ ಸಂಶಯವಿಲ್ಲ.
- ಮಲ್ಲಪ್ಪ ಖೊದ್ನಾಪೂರ