ಜನಪರ ಆಡಳಿತ ಕಾಂಗ್ರೆಸ್ದಿಂದ ಮಾತ್ರ ಸಾಧ್ಯ: ಕಳ್ಳಿಮನಿ
ತಾಳಿಕೋಟಿ: ಕಾಂಗ್ರೆಸ್ ಪಕ್ಷ ಬಡವರ ದೀನ ದಲಿತರ ಸಮಾಜದಲ್ಲಿರುವ ದುರ್ಬಲ ವರ್ಗದ ಜನರ ಪರವಾಗಿ ಹಾಗೂ ಸದಾ ಅವರ ಹಿತಕ್ಕೊಸ್ಕರ ಕೆಲಸ ಮಾಡುವ ಪಕ್ಷವಾಗಿದೆ. ಕೇವಲ ಕಾಪರ್ೋರೆಟರ್ಗಳ ಹಿತಕ್ಕಾಗಿ ಕೆಲಸ ಮಾಡುವ ಬಿಜೆಪಿಯಿಂದ ಬಡವರ ಏಳಿಗೆ ಅಸಾಧ್ಯ ಎಂದು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ದೇ. ಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುಜಾತಾ ಕಳ್ಳಿಮನಿ ಹೇಳಿದರು.
ದೇ.ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಇಟಗಿ ಗ್ರಾಮದಲ್ಲಿ ಬಿಜೆಪಿ ದುರಾಡಳಿತದ ವೈಫಲ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಹಾಗೂ ಕಾಂಗ್ರೆಸ್ ಆಡಳಿತದಲ್ಲಾದ ಉತ್ತಮ ಕಾರ್ಯಗಳನ್ನು ತಿಳಿಸಲು ಪಕ್ಷದ ವತಿಯಿಂದ ಹಮ್ಮಿಕೊಂಡ ಜನ ಸಂಪರ್ಕ ಸಭೆ ಯಲ್ಲಿ ಅವರು ಮಾತನಾಡಿದರು.
ಇನ್ನೋರ್ವ ಟಿಕೆಟ್ ಆಕಾಕ್ಷಿ ಗೌರಮ್ಮ ಮುತ್ತತ್ತಿ ಅವರು ಮಾತನಾಡಿ ಬಿಜೆಪಿ ರಾಜ್ಯದ ಜನತೆ ಕಂಡ ಅತಿ ಭ್ರಷ್ಟ ಸರಕಾರ, ಜನಪರ ಕಾಳಜಿ ಇಲ್ಲದ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಈ ಕೆಟ್ಟ ಸರಕಾರವನ್ನು ಕಿತ್ತೊಗೆಯುವ ಕೆಲಸ ನೀವು ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ ಕೇವಲ ಜಾತಿ-ಧರ್ಮಗಳಂಥಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆ ಕಡೆಗೆ ಒಯ್ದು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಆದರೆ ಜನರಿಗೆ ಅವರ ಈ ಕುತಂತ್ರ ಗೊತ್ತಾಗಿದ್ದು ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಜನರ ವಿಶ್ವಾಸವನ್ನು ಕಳೆದುಕೊಂಡಿವೆ. ಜನ ಸಾಮಾನ್ಯರು ಮೀತಿ ಮೀರಿದ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಾರೆ ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ಹೇಳುತ್ತಾರೆ ಹೊರತು ಜನರ ಮನಸ್ಸಿನ ಮಾತು ಹೇಳು ಇವರು ಅಧಿಕಾರದಲ್ಲಿರಲು ಲಾಯಕ್ ಇಲ್ಲ ಎಂದು ಹೇಳಿದರು.
ಹೂ.ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಮುಖಂಡರಾದ ಶ್ರೀಶೈಲ ಹೆಬ್ಬಾಳ, ಚನ್ನಬಸಪ್ಪ ಪಾಟೀಲ, ಗುರಸಂಗಪ್ಪ ಚಟ್ಟೇರ, ಗ್ರಾಪಂ ಸದಸ್ಯ ಲಕ್ಷ್ಮಣ ಮಾಗಿ, ವಿಕೆ ಮಸೂತಿ, ಆರ್.ಬಿ. ಗೌಡರ, ಆನಂದ ಜೈನಾಪೂರ ಇದ್ದರು