ಬಳ್ಳಾರಿ

ಯಕ್ಷಗಾನಕ್ಕಿದ್ದ ಪ್ರೋತ್ಸಾಹ ಬಯಲಾಟಕ್ಕಿಲ್ಲ: ಬಸವರಾಜ್

ಯಕ್ಷಗಾನಕ್ಕಿದ್ದ ಪ್ರೋತ್ಸಾಹ ಬಯಲಾಟಕ್ಕಿಲ್ಲ: ಬಸವರಾಜ್

ಲೋಕದರ್ಶನ ವರದಿ

ಬಳ್ಳಾರಿ 26: ಬಯಲಾಟಕ್ಕೆ ಬಳ್ಳಾರಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಆದರೆ, ಯಕ್ಷಗಾನಕ್ಕೆ ದೊರೆತಂತಹ ಪ್ರೋತ್ಸಾಹ ಬಯಲಾಟಕ್ಕೆ ದೊರೆಯುತ್ತಿಲ್ಲ ಎಂದು ಇತಿಹಾಸ ಸಂಶೋಧಕರಾದ ಟಿಹೆಚ್ಎಂ ಬಸವರಾಜ್ ಹೇಳಿದರು. 

ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಯೋಜನೆ ಅಡಿಯಲ್ಲಿ ಈಶ್ವರಸ್ವಾಮಿ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಬಿ. ಲಕ್ಷ್ಮೀನಾರಾಯಣ ಮತ್ತು ಕಲಾತಂಡದಿಂದ ನಡೆದ ವೀರಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಯಲಾಟ ಅಕಾಡೆಮಿ ಬಳ್ಳಾರಿಯಲ್ಲಿರಬೇಕು. ಬಯಲಾಟ ಸುಲಭದ ಕಲೆ ಅಲ್ಲ. ಅದು ಗಂಡುಮೆಟ್ಟಿನ ಕಲೆ. ಬಯಲಾಟದಲ್ಲಿ ಭಕ್ತಿ ಪ್ರಧಾನ, ಸಾಮಾಜಿಕ ಕಳಕಳಿ ಅಡಗಿದೆ. ಮನುಷ್ಯನಲ್ಲಿರುವಂತಹ ಚಿಂತೆಯನ್ನು ದೂರ ಮಾಡುವ ಶಕ್ತಿ ಬಯಲಾಟದಲ್ಲಿದೆ. ಈ ನಿಟ್ಟಿನಲ್ಲಿ ಬಯಲಾಟವನ್ನು ನೋಡುವುದರ ಮೂಲಕ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಈ ಹಿನ್ನೆಲೆಯಲ್ಲಿ ಬಯಲಾಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಲಾವಿದರಿಗೆ ಮಾಸಾಶನ ಹೆಚ್ಚಿಸಬೇಕು. ಕಲಾವಿದರಿಗೆ ಕನಿಷ್ಠ 20*30 ನಿವೇಶನ ನೀಡಬೇಕು ಎಂದು ಹೇಳಿದರು. ಅಭಿನಯ ಕಲಾಕೇಂದ್ರದ ಸಂಸ್ಥಾಪಕ ಕೆ.ಜಗದೀಶ್, ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ, ಕನರ್ಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್. ಚಿಕ್ಕಗಾದಿಲಿಂಗಪ್ಪ ಮಾತನಾಡಿದರು. 

ಪಾಲಿಕೆ ಸದಸ್ಯ ಕೆ. ಹನುಮಂತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿರಿವಾರ ಕಲಾವಿದ ಹಂಪಚಿ್ಯುನವರ ಶೇಖ, ಸಿರಿವಾರ ಗ್ರಾಪಂ ಮಾಜಿ ಅಧ್ಯಕ್ಷ ಲಿಂಗಪ್ಪ, ಕಲಾವಾದ್ಯ ರತ್ನ ಬಿರುದು ಪುರಸ್ಕೃತರಾದ ವೈ. ರಂಗಾರೆಡ್ಡಿ, ರಂಗಭೂಮಿ ಕಲಾವಿದೆ ಸುಜಾತಮ್ಮ, ಮೂಲೆಮನೆ ರುದ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಂಗ ಕಲಾವಿದ ಬಿ.ಲಕ್ಷ್ಮೀನಾರಾಯಣ ಪ್ರಾರ್ಥನಾ ಗೀತೆ ಹಾಡಿದರು. ಮುದ್ದಟನೂರು ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವೈ. ರಂಗಾರೆಡ್ಡಿ ಅವರ ನಿರ್ದೇಶನದಲ್ಲಿ ನಡೆದ ಬಯಲಾಟದಲ್ಲಿ ಬಾಲಕಷ್ಣ ಪಾತ್ರದಲ್ಲಿ ಸಿಂಧಿಗೇರಿಯ ಕೆ,ವರುಣ, ಧರ್ಮರಾಯ ಪಾತ್ರದಲ್ಲಿ ಕೊರಲಗುಂದಿಯ ಗಣೇಶ್ ಗೌಡ, ಭೀಮನ ಪಾತ್ರದಲ್ಲಿ ಸಿಂಧಿಗೇರಿಯ ವೈ. ಮಹೇಶ್, ಅಭಿಮನ್ಯು ಪಾತ್ರದಲ್ಲಿ ಸಿಂಧಿಗೇರಿಯ ಆದಿಮನೆ ಶ್ರೀಧರ್, ಸುಭದ್ರ ಪಾತ್ರದಲ್ಲಿ ಬಳ್ಳಾರಿಯ ಅಂಬುಜಮ್ಮ ಜೀವತುಂಬಿದರು 

ಸುದ್ದಿ ಓದಿ