ತಾಳಿಕೋಟಿ

ಪಿಯು ಕಾಲೇಜ ಮಂಜೂರು: ಶಾಸಕ ಸೋಮನಗೌಡರಿಗೆ ಅಭಿನಂದನೆ

ಪಿಯು ಕಾಲೇಜ ಮಂಜೂರು: ಶಾಸಕ ಸೋಮನಗೌಡರಿಗೆ ಅಭಿನಂದನೆ

ತಾಳಿಕೋಟಿ: ರಾಜ್ಯದಲ್ಲಿ ಒಟ್ಟು 29 ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನು ಸಕರ್ಾರ ಮಂಜೂರು ಮಾಡಿದ್ದು ಇದರಲ್ಲಿ ದೇ. ಹಿಪ್ಪರಗಿ ಮತಕ್ಷೇತ್ರಕ್ಕೆ 2 ಕಾಲೇಜುಗಳನ್ನು ತಂದಿರುವ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರಿಗೆ ಭಂಟನೂರ ಪಿಕೆಪಿಎಸ್ ಅಧ್ಯಕ್ಷ ಹಾಗೂ ಈ ಭಾಗದ ಪ್ರಭಾವಿ ಬಿಜೆಪಿ ಮುಖಂಡ ಸಂಗನಗೌಡ ಹೆಗರಡ್ಡಿ ಅಭಿನಂದಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಮುಖಂಡ ಸಂಗನಗೌಡ ಹೆಗರಡ್ಡಿ ಅವರು ಈಗಾಗಲೇ ದೇ. ಹಿಪ್ಪರಗಿ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿಸಲು ಸುಮಾರು 3000 ಕೋಟಿಗಳಿಗಿಂತಲೂ ಹೆಚ್ಚು ಅನುದಾನವನ್ನು ತಂದು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿರುವ ಶಾಸಕರು ಎಲ್ಲ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಆರೋಗ್ಯ, ಹಾಗೂ ವಿಶೇಷವಾಗಿ ಈ ಭಾಗದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಇದೀಗ ಕ್ಷೇತ್ರಕ್ಕೆ ಎರಡು ಸರ್ಕಾರಿ  ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಕೊಂಡಿದ್ದಾರೆ. ಇದರಲ್ಲಿ ಬ. ಸಾಲವಾಡಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪೀರಾಪೂರ ಗ್ರಾಮದಲ್ಲಿ ಒಂದು ಕಾಲೇಜು ಮಂಜೂರಾಗಿದ್ದು ಅತೀವ ಹರ್ಷ ತಂದಿದೆ ಇದರಿಂದ ಈ ಭಾಗದ ಸಮೀಪದ ಎಲ್ಲ ಗ್ರಾಮಗಳ ಬಡ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದರು 

ಸುದ್ದಿ ಓದಿ