ಮನರಂಜನೆ

‘ಪೊಗರು’ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿ: ಮಂತ್ರಾಲಯ ಶ್ರೀ, ಶೋಭಾ ಕರಂದ್ಲಾಜೆ

‘ಪೊಗರು’ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿ: ಮಂತ್ರಾಲಯ ಶ್ರೀ, ಶೋಭಾ ಕರಂದ್ಲಾಜೆ

ಬೆಂಗಳೂರು, ಫೆ 23: ಸಮುದಾಯವೊಂದಕ್ಕೆ ಅಪಮಾನಿಸುವ ‘ಪೊಗರು’ ಚಿತ್ರದ ದೃಶ್ಯಗಳನ್ನು ಮಂತ್ರಾಲಯದ ರಾಘವೇಂದ್ರ ಮಠದ ಸುಬುಧೇಂದ್ರ ಶ್ರೀಪಾದರು ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ಖಂಡಿಸಿದ್ದು, ಕೂಡಲೇ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ.ದೃಶ್ಯಗಳ ಕುರಿತು ನಿರ್ದೇಶಕ ನಂದಕಿಶೋರ್ ಈಗಾಗಲೇ ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.  ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿರುವ ಕಾರಣ, ಬ್ರಾಹ್ಮಣ ಸಮುದಾಯ ಶಾಂತಿ ಕಾಪಾಡಿಕೊಳ್ಳಬೇಕು ಎಂದೂ ಸಹ ಪತ್ರಿಕಾ ಪ್ರಕಟಣೆಯ ಮೂಲಕ ಶ್ರೀಗಳು ಸಂದೇಶ ರವಾನಿಸಿದ್ದಾರೆ.ಸಂಸದೆ ಶೋಭಾ ಕರಂದ್ಲಾಜೆ, “ಹಿಂದೂ ಸಮುದಾಯದ ಭಾವನೆಗಳ ಜೊತೆ ಆಟವಾಡಬೇಡಿ.  ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕಿದ ಮೇಲಷ್ಟೇ ಚಿತ್ರ ಪ್ರದರ್ಶಿಸಬೇಕು.  ಹಿಂದೂಗಳನ್ನು ಅಪಮಾನಿಸುವುದು ಫ್ಯಾಷನ್ ಆಗಿಬಿಟ್ಟಿದೆ.  ” ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಹೋಮ ಮಾಡುತ್ತಿರುವ ಅರ್ಚಕರ ಹೆಗಲ ಮೇಲೆ ಖಳನಾಯಕ ಕಾಲಿಡುವ ದೃಶ್ಯ, ನಾಯಕರು ಪುರೋಹಿತರನ್ನು ಅಪಹರಿಸುವುದೂ ಸೇರಿದಂತೆ 12ಕ್ಕೂ ಹೆಚ್ಚು ದೃಶ್ಯಗಳಿಗೆ ಕತ್ತರಿ ಹಾಕಬೇಕೆಂಬುದು ಬ್ರಾಹ್ಮಣ ಸಮುದಾಯದ ಆಗ್ರಹವಾಗಿದೆ.

  



ಸುದ್ದಿ ಓದಿ