ಹಿರಿಯ ಬಾಲಿವುಡ್ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು
ನವದೆಹಲಿ, ಜೂನ್ 6: ಉಸಿರಾಟ ತೊಂದರೆಗಳ ಹಿನ್ನೆಲೆಯಲ್ಲಿ ಖ್ಯಾತ ಹಿರಿಯ ಬಾಲಿವುಡ್ ನಟ ದಿಲೀಪ್ ಕುಮಾರ್ ಭಾನುವಾರ ಬೆಳಿಗ್ಗೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ದಿಲೀಪ್ ಸಾಹೆಬ್ ಅವರು ಹಿಂದೂಜಾ ಆಸ್ಪತ್ರೆಗೆ ಎಂದಿನ ತಪಾಸಣೆಗಾಗಿ ದಾಖಲಾಗಿದ್ದಾರೆ. ಪರೀಕ್ಷೆಗಳು ಮುಂದುವರೆದಿವೆ. ಅವರಿಗೆ ಉಸಿರಾಟದ ಸಮಸ್ಯೆಯಿದೆ. ಡಾ ನಿತಿನ್ ಗೋಖಲೆ ಅವರ ಆರೋಗ್ಯ ಮತ್ತು ಚಿಕಿತ್ಸೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಾಹೆಬ್ ಅವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿ.'’ಎಂದು 98 ವರ್ಷದ ಹಿರಿಯ ನಟನ ಅಧಿಕೃತ ಟ್ವೀಟರ್ ಹ್ಯಾಂಡಲ್ ನಲ್ಲಿ ಹೇಳಲಾಗಿದೆ. ಅನೇಕ ಪುರಸ್ಕಾರಗಳು ಮತ್ತು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ದಿಲೀಪ್ ಕುಮಾರ್ ಅವರು ಹಿಂದೀ ಸಿನಿಮಾರಂಗ ಇತಿಹಾಸದಲ್ಲಿ ಮಹಾ ನಟರಾಗಿದ್ದಾರೆ.