"ಒಂದು ಗಂಟೆಯ ಕಥೆ" ಈ ವಾರ ತೆರೆಗೆ
ಬೆಂಗಳೂರು, ಮಾರ್ಚ್ 16 :ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ಅವರು ನಿರ್ಮಿಸಿರುವ "ಒಂದು ಗಂಟೆಯ ಕಥೆ" ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ದುಶ್ಯಂತ್ ಹಾಗೂ ಶ್ವೇತ ದಾಕೋಜು ಈ ಚಿತ್ರದ ಸಹ ನಿರ್ಮಾಪಕರು. ದ್ವಾರ್ಕಿ ರಾಘವ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಡೆನಿಸ್ ವಲ್ಲಭನ್ ಸಂಗೀತ ನೀಡಿದ್ದಾರೆ. ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಗಣೇಶ್ ಮಲ್ಲಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ. ಅಜಯ್ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಶನಾಯ ಕಾಟ್ವೆ. ಸ್ವಾತಿ ಶರ್ಮ,ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್, ನಾಗೇಂದ್ರ ಶಾ, ಚಂದ್ರಕಲ, ರೆಮೊ, ಮೇಫ ಜಕಾತಿ, ಜಯದೇವ್, ಸುಜಯ್, ಸೋಮು, ಎಂ. ಎನ್. ಲಕ್ಷ್ಮೀದೇವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.