ಬಳ್ಳಾರಿ

ಸಿಂಹಾವಲೋಕನ' ಕಾರ್ಯಕ್ರಮ: ರಾಷ್ಟ್ರೀಯ ನಾಟಕೋತ್ಸವ

ಸಿಂಹಾವಲೋಕನ' ಕಾರ್ಯಕ್ರಮ: ರಾಷ್ಟ್ರೀಯ ನಾಟಕೋತ್ಸವ

ಸಾಣೇಹಳ್ಳಿ, ನವೆಂಬರ್ 9; `ರಾಷ್ಟ್ರೀಯ ನಾಟಕೋತ್ಸವ'ದ ನಿಮಿತ್ತ ಇಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ `ಸಿಂಹಾವಲೋಕನ' ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ವರ್ಷ ನಾಟಕೋತ್ಸವ ಪ್ರಾರಂಭವಾಗುವ ಮೂರ್ನಾಲ್ಕು ದಿನಗಳ ಮುಂಚೆ ಗಂಟಲಿನ ತೊಂದರೆಯಾಗಿ ಮಾತನಾಡುವುದೇ ಕಷ್ಟವಾಗಿತ್ತು. ವೈದ್ಯರ ಸೂಚನೆಯ ಮೇರೆಗೆ ಬೆಳಗಿನ ವಾಕ್ ಕೂಡ ನಿಲ್ಲಿದ್ದೇವೆ. ಗಂಟಲಿಗೆ ವಿಶ್ರಾಂತಿ ಕೊಡಬೇಕೆಂದು ಹೇಳಿದ್ದರೂ ಜನ ನಿತ್ಯವೂ ಬರುತ್ತಿದ್ದರಿಂದ ವಿಶ್ರಾಂತಿ ನೀಡಲಾಗಲಿಲ್ಲ.  ಈ ಬಾರಿ ಎಲ್ಲೆಲ್ಲಿಯೂ ನಾವು ಅಡ್ಡಾಡಿ ಕೆಲಸ ಕಾರ್ಯಗಳನ್ನು ನೋಡಲಿಲ್ಲ. ಆದರೂ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ವಿದ್ಯಾಥರ್ಿಗಳು, ನೌಕರರು, ಗ್ರಾಮಸ್ಥರು, ಕಾರ್ಯಕರ್ತರು ಮಾಡಿದ್ದಾರೆ. ಅವರು ಅಭಿನಂದನೆಗೆ ಅರ್ಹರು. ಮೊದಲ ದಿನ ಮಳೆ ಬಂದದ್ದರಿಂದ ಸ್ವಲ್ಪ ಮಟ್ಟಿನ ತೊಂದರೆಯಾಯಿತು. ನಂತರ ಕಾರ್ಯಕ್ರಮಗಳನ್ನು ಒಳಾಂಗಣದಲ್ಲಿ ಆಥವ ಬಯಲು ರಂಗಮಂದಿರದಲ್ಲೋ? ಎಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲವಿತ್ತು. ಆದರೆ ನಂತರ ಮಳೆ ಬರದೇ ಇದ್ದುದು ಸುದೈವ. ಮೊದಲ ದಿನ ಮಳೆಯ ಕಾರಣ ಯಡಿಯೂರಪ್ಪನವರೇ ಮೊದಲು ಮಾತನಾಡಿದರೂ ಕೊನೆಯವರೆಗೂ ಇದ್ದರು. ಉಪನ್ಯಾಸಕರ ಉಪನ್ಯಾಸಗಳೆಲ್ಲವೂ ಸಮರ್ಥ ರೀತಿಯಿಂದ ಇದ್ದವು. ಎಷ್ಟೇ ಚೆನ್ನಾಗಿ ಮಾತನಾಡಿದರೂ ಸಮಯದ ಮಿತಿ ಎಲ್ಲರಿಗೂ ಅನ್ವಯಿಸುವುದು. ಇದು ಮುಖ್ಯಮಂತ್ರಿಗಳೂ ಅನ್ವಯಿಸುವುದು ಎನ್ನುವುದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದುದು ಸಂತೋಷ ನೀಡಿದೆ. ಇಷ್ಟು ವರ್ಷಗಳಿಗಿಂತ ಹೆಚ್ಚು ಜನ ಈ ವರ್ಷ ಬಂದಿದ್ದಾರೆ. ಆಥರ್ಿಕವಾಗಿಯೂ ಹೆಚ್ಚಿನ ಸಹಾಯ ಮಾಡಿದ್ದಾರೆ. ಅದರಂತೆ ಖಚರ್ೂ ಹೆಚ್ಚಾಗಿದೆ. ಪ್ರತಿದಿನವೂ ಲಾಡು, ಕೊಬ್ಬರಿ ಮಿಠಾಯಿ, ರೆವೆಉಂಡೆ, ಮೈಸೂರುಪಾಕು, ಜಾಮೂನು ಮೊದಲಾದ ಸಿಹಿ ಪದಾರ್ಥಗಳನ್ನು ನೀಡಲಾಗಿದೆ. ಇದನ್ನೆಲ್ಲ ಸಾರ್ವಜನಿಕ ದಾಸೋಹಿಗಳೇ ನಿರ್ವಹಿಸಿದ್ದಾರೆ. ದಾಸೋಹ ಬಡಿಸಲು ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಸ್ಪಧರ್ೆಯೇ ಇತ್ತು. ಒಂದು ಕಾರ್ಯ ಯಶಸ್ವಿಯಾಗಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ; ಸಂಘಟನೆಯಿಂದ ಮಾತ್ರ ಸಾಧ್ಯ. ನಮ್ಮ ಭಾವನಗೆಳನ್ನು ಅರ್ಥಮಾಡಿಕೊಂಡು ಅದರಂತೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅದರಲ್ಲಿ ಮಕ್ಕಳು, ನೌಕರರು ವಿಶೇಷವಾಗಿ ಗ್ರಾಮಸ್ಥರ ಕೊಡುಗೆ ಅಪಾರವಾದುದು. ಅವರಿಗೆ ವಿಶೇಷ ಅಭಿನಂದನೆಗಳು. ಸಂಗೀತ ಕಲಾವಿದರಾದ ಸಿದ್ಧರಾಮ, ಜ್ಯೋತಿ, ದಾಕ್ಷಾಯಣಿ, ನಾಗರಾಜ್ ಮತ್ತು ತಬಲ ನುಡಿಸಿದ ಶರಣ್ ಜೋಡಿ ಅಪರೂಪದ ಜೋಡಿ. ಈ ಬಾರಿ ಸಮು ಸಂದರ್ಭಕ್ಕೆ ತಕ್ಕಂತೆ ಕೆಲ ಹೊಸ ಹಾಡುಗಳನ್ನು ರಚಿಸಿ ಹಾಡಿದ್ದಾರೆ. ಮಕ್ಕಳ ಕಾರ್ಯಕ್ರಮದ ನಿರೂಪಣೆಯಲ್ಲಿ ನಮಗ್ಯಾವ ದೋಷಗಳೂ ಕಾಣಲಿಲ್ಲ. ಅನೇಕ ಇಕ್ಕಟ್ಟು ಬಿಕ್ಕಟ್ಟುಗಳು ಇದ್ದಾಗ್ಯೂ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದಕ್ಕಾಗಿ ವಿಶೇಷ ಅಭಿನಂದನೆಗಳು. ನಿನ್ನೆ ಮುಖ್ಯಮಂತ್ರಿಗಳು ನಮ್ಮ ಕಲಾಸಂಘದ ಚಟುವಟಿಕೆಗಳಿಗೆ ಎರಡು ಕೋಟಿ ಹಣ ಮಂಜೂರಾದ ಅದೇಶ ಪ್ರತಿಯನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಇದು ನಮಗೆ ಆಶ್ಚರ್ಯ ತಂದಿದೆ.  ತರೀಕೆರೆಯಲ್ಲಿನ ಅಕ್ಕನಾಗಮ್ಮನ ಸಮಾಧಿ ಸ್ಥಳದ ಅಭಿವೃದ್ಧಿಗೆ ಹತ್ತು ಕೋಟಿ, ದಾವಣಗೆರೆಯಲ್ಲಿ ನಿಮರ್ಿಸಲಾಗುವ ರಂಗಮಂದಿರಕ್ಕೆ ಐದು ಕೋಟಿ ಹಣ ಮಂಜೂರು ಮಾಡಿರುವುದು ಸಂತೋಷ ತಂದಿದೆ. ನಮ್ಮ ಇಲ್ಲಿನ ಸಾಧನೆಗಳನ್ನು ಚಿತ್ರಸಂಪುಟ ರೂಪದಲ್ಲಿ ಮಾಡಿ ಪ್ರದಶರ್ಿಸುವ ಕೆಲಸವನ್ನು ಬಿ ಎಸ್ ಶಿವಕುಮಾರ್ ಮಾಡಿರುವುದು ಎಲ್ಲರ ಶ್ಲಾಘನೆಗೆ ಕಾರಣವಾಗಿದೆ ಎಂದರು. 

ಅತಿಥಿಗಳಾಗಿದ್ದ ಗುಲ್ಬಗರ್ಾದ ಸುನಿಲ್ ಹುಡುಗಿ, ರಂಗಕಮರ್ಿ: ಕಳೆದ ಇಪ್ಪತ್ತು ವರ್ಷಗಳಿಂದ ನಾನು ಸಾಣೇಹಳ್ಳಿಯ ಸಂಪರ್ಕದಲ್ಲಿದ್ದೇನೆ. ಮಕ್ಕಳೇ ನಾಟಕೋತ್ಸವವನ್ನು ನಡೆಸುತ್ತಿರುವುದು ಜಗತ್ತಿನಲ್ಲಿಯೇ ಇದೇ ಮೊದಲು. ಇದರಿಂದ ಅವರಲ್ಲಿ ಸಂಘಟನಾತ್ಮಕ ಗುಣಗಳು ಬರುವವು. ರಂಗಶಿಕ್ಷಣ ಈ ಮೂಲಕ ಮಕ್ಕಳಿಗೆ ಸಿಗುತ್ತಿದೆ. ನಾಟಕ ನೊಡುವ, ಸಂಘಟಿಸುವ, ಕೆಲಸ ಕಾರ್ಯಗಳನ್ನು ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಲ್ಲಿನ ಮಕ್ಕಳೂ ರಂಗ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ವ್ಯಕ್ತಿತ್ವವನ್ನು ಎತ್ತರಿಸಿಕೊಳ್ಳಬಹುದು. ಸಾಣೇಹಳ್ಳಿ ಮಠ ಎಂದರೆ ಸಮಯಪಾಲನೆಯ ಮಠ ಎಂದು ಹೆಸರುವಾಸಿಯಾಗಿದೆ. ಪ್ರತಿವರ್ಷ ಹೊಸಬರು ಬರುತ್ತಿದ್ದಾರೆ. ನಾಟಕಗಳನ್ನು ನೋಡುವವರಿಗೆ ಮತ್ತು ಮಾಡುವವರಿಗೂ ಸಂಸ್ಕೃತಿ ಬೇಕು. ನಾಟಕ ತೋರಿಸುವುದಷ್ಟೇ ಮುಖ್ಯ ಅಲ್ಲ; ನೋಡುವವರಿಗೂ ಸಂಸ್ಕೃತಿಯನ್ನು ಕಲಿಸಬೇಕು. ಅಂತರಾಷ್ಟ್ರೀಯ ನಾಟಕೋತ್ಸವ ಇಲ್ಲಿ ನಡೆಯಬೇಕು ಎಂದರು.  

ಅತಿಥಿಗಳಾಗಿದ್ದ ಬೀದರ್ನ ಸಿದ್ಧಪ್ಪ ಮೂಲಗೆ, ಪತ್ರಕರ್ತ: ನಾನು ನಾಟಕೋತ್ಸವದ ಕೊನೆಯ ದಿನ ಮಾತ್ರ ಬಂದಿದ್ದೆ. ಇದುವರೆಗೂ ನಾನು ಯಾವ ನಾಟಕೋತ್ಸವಕ್ಕೂ ಬಂದಿಲ್ಲ. ನಾನು ನನ್ನ ಜೀವನದಲ್ಲಿ ನೋಡಿದ ಮೊದಲ ನಾಟಕ `ಬಿಜ್ಜಳ ನ್ಯಾಯ'. ನಾಟಕದ ಬಗ್ಗೆ ನನಗೆ ಉದಾಸೀನವಿತ್ತು. ಆದರೆ ನಾಟಕ ನೋಡಿದ ಮೇಲೆ ನನ್ನ ಮನಃ ಪರಿವರ್ತನೆಯಾಗಿದೆ. ಮಕ್ಕಳು ಎಲ್ಲ ಕಡೆಯೂ ಇದ್ದು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಾಟಕಗಳ ಮೂಲಕ ಬಸವ ಸಂದೇಶ ಸಾರುತ್ತಿರುವ ಕೆಲಸ ಅದ್ಭುತವಾದುದು. ನಾಟಕೋತ್ಸವಕ್ಕೆ ಇನ್ನಷ್ಟು ಬಸವ ತತ್ವದ ಟಚ್ ನೀಡಬೇಕಾಗಿದೆ. ಲಿಂಗಾಯತ ಧರ್ಮ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಬೇಕಾಗಿತ್ತು. 

ವಿ ಬಿ ಚಳಗೇರಿ, ಪ್ರಭಾರಿ ಮುಖ್ಯಶಿಕ್ಷಕ: ನಾಟಕೋತ್ಸವದ ಮೂಲಕ ಸ್ವರ್ಗವನ್ನೇ ಧರೆಗಿಳಿಸಿ ಪೂಜ್ಯರಿಗೆ ನಮೋನಮೋ. ನಾಟಕೋತ್ಸವ ಯಶಸ್ಸಿಗೆ ಸಂಘಟಕರು, ಶಿಕ್ಷಕರು, ಕಾರ್ಯಕರ್ತರು, ಗ್ರಾಮಸ್ಥರು, ಮಕ್ಕಳು ಕಾರಣರು. ಶ್ರದ್ಧೆ, ನಿಷ್ಠೆಯಿಂದ ಎಲ್ಲರೂ ಕಾರ್ಯ ಮಾಡಿದ್ದಾರೆ. ವಿಚಾರ ಸಂಕಿರಣಗಳು, ಚಿಂತಕರ ಮಾತುಗಳು ಮೌಲ್ಯಯುತವಾದವು. ಅವುಗಳನ್ನು ಮಕ್ಕಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಆಗಿರುವ ಲೋಪದೋಷಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವೆವು ಎಂದರು.

ಶಿವಕುಮಾರ್ ಬಿ ಎಸ್, ಮುಖ್ಯೋಪಾಧ್ಯಾಯ: ನಾಟಕೋತ್ಸವ ಯಶಸ್ವಿಯಾಗಿ ನಡೆದಿದೆ ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಈ ಯಶಸ್ಸಿಗೆ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು, ಕಾರ್ಯಕರ್ತರು ಕಾರಣಕರ್ತರು. ಇವುಗಳೆಲ್ಲದರ ಹಿಂದಿನ ಪೂಜ್ಯರ ಶ್ರಮ ಅಪಾರವಾದುದು. ಸಾಮಾಜಿಕ ಜಾಲತಾಣಗಳಲ್ಲೂ ನಾಟಕೋತ್ಸವಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಯೂಟೂ ಸಾಕಷ್ಟಿದೆ. ಇಲ್ಲಿ ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ನೋಡಿದವರಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲಿ ನೋಡಿದವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು ನಿರೂಪಣೆ ಚೆನ್ನಾಗಿ ಮಾಡಿದರು. ಆದರೆ ಸ್ವಾಗತ ಮಾಡಿದ ದೊಡ್ಡವರ ಲೋಪಗಳು ಹೆಚ್ಚಾಗಿದ್ದವು. ಇಲ್ಲಿನ ಶಾಲೆಯ ಮಕ್ಕಳ ನೃತ್ಯರೂಪಕಗಳು ಬೇರೆ ನೃತ್ಯರೂಪಕಗಳಿಗಿಂತ ಚೆನ್ನಾಗಿದ್ದವು. ಮಲ್ಲಗಂಭ ನಮ್ಮ ಶಾಲೆಗೆ ಹೊಸತು. ಅದನ್ನು ಯಶಸ್ವಿಯಾಗಿ ಪ್ರದಶರ್ಿಸಿದುದು ಸಂತೋಷ ನೀಡಿದೆ. ನಮ್ಮ ಮಕ್ಕಳು ಯಾವುದನ್ನು ನೀಡಿದರೂ ಮಾಡುವರು. ಮಲ್ಲಗಂಭವನ್ನು ಹೊರಗೆ ಪ್ರದಶರ್ಿಸಲು ಅನೇಕ ಜನ ಬೇಡಿಕೆ ಇಟ್ಟಿರುವುದೇ ಇದಕ್ಕೆ ಸಾಕ್ಷಿ. 

ವೆಂಕಟೇಶ್, ಬೆಂಗಳೂರು: ರಾಷ್ಟ್ರೀಯ ನಾಟಕೋತ್ಸವ ನಮ್ಮೆಲ್ಲರ ಪುಣ್ಯ. ಅವಕಾಶ ಮಾಡಿಕೊಟ್ಟ ಪೂಜ್ಯರಿಗೆ ವಂದನೆಗಳು. ನನ್ನಂತೆ ಸಾವಿರಾರು ಜನ ಈ ನಾಟಕೋತ್ಸವದಲ್ಲಿ ಭಾಗವಹಿಸಿದ್ದಾರೆ. ಅವರಿಂದಲೂ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಒಟ್ಟಾರೆಯಾಗಿ 50 ರಿಂದ 60 ಸಾವಿರ ಜನ ನಾಟಕೋತ್ಸವದಲ್ಲಿ ಭಾಗವಹಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಬಂದು ಹೋಗುವ ಪರಿಪಾಠವನ್ನು ಎಲ್ಲ ಅತಿಥಿಗಳೂ ಪಾಲಿಸಿದ್ದಾರೆ. ಸಮಯವೆಂದರೆ ಗುರುಗಳು ಎನ್ನುವ ಭಾವನೆ ನಮ್ಮದಾಗಿದೆ. ಶಿವಸಂಚಾರದ ಮೂಲಕ ಕಳೆದ 26 ವರ್ಷದಿಂದ ಪೂಜ್ಯರ ಪಟ್ಟ ಶ್ರಮ ಸಾರ್ಥಕವಾಗಿದೆ. ಸಾಂಸ್ಕೃತಿಕ ವಿಶ್ವವಿದ್ಯಾಲಯ ಮಾಡಬೇಕೆಂದು ಜನರೇ ಮಾತನಾಡಿ ಮುಖ್ಯಮಂತ್ರಿಗಳ ಗಮನಕ್ಕೆ ಸ್ವಯಂಪ್ರೇರಿತರಾಗಿ ತಂದಿರುವುದು ಇಲ್ಲಿನ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾದೆ. ಮಕ್ಕಳನ್ನು ನಿರೂಪಣಾ ಕೆಲಸಕ್ಕೆ ತೊಡಗಿಸಿರುವುದು ಶ್ಲಾಘನೀಯ. ಇಂಥ ಅನೇಕ ಒಳ್ಳೊಳ್ಳೆಯ ಸಂದೇಶಗಳನ್ನು ನಾವು ಕಲಿತಿದ್ದೇವೆ. ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು. 

ಚಂದ್ರಶೇಖರ್, ತಿಮ್ಮಾಪುರ: ಇದೇ ಮೊದಲಬಾರಿಗೆ 2 ರಿಂದ 8 ನೆಯ ತಾರೀಖಿನವರೆಗೆ ಇಲ್ಲಿಯೇ ಇದ್ದು ನಾಟಕೋತ್ಸವವನ್ನು ಸವಿದಿದ್ದೇನೆ. ಇಲ್ಲಿನ ಮಕ್ಕಳು ಸಂಸ್ಕಾರ, ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ನನ್ನ ತಂದೆ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದರು. ನನಗೂ ಈ ಸಂಸ್ಕಾರ ಬಂದಿದೆ.  ಇದರ ಹಿಂದಿನ ಪೂಜ್ಯರ ಶ್ರಮ ಸಾರ್ಥಕವಾಗಿದೆ. 

ಜಯಪ್ಪ ಅಧ್ಯಾಪಕರು: ಕಾರ್ಯಕ್ರಮ ನಿರ್ವಹಣೆ ನನಗೆ ವಹಿಸಿದ್ದ ಕೆಲಸ. ಈ ಕೆಲಸದಲ್ಲಿ ಸ್ವಲ್ಪಮಟ್ಟಿನ ದೋಷಗಳಾಗಿವೆ. ತಡವಾಗಿ ಬಂದ ಅತಿಥಿಗಳನ್ನು ಸ್ವಾಗತಿಸುವುದು, ಪರಿಚಯಸಿವುದು ವಿದ್ಯಾಥರ್ಿಗಳಿಗೆ ಕಷ್ಟ. ವೇದಿಕೆಯ ಎಡಭಾಗದಲ್ಲಿ ಸಾಕಷ್ಟು ಜನ ತುಂಬಿ ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುವುದು. ಕಡಿಮೆ ಜನ ಇದ್ದಷ್ಟೂ ಒಳ್ಳೆಯದು. 

ಸಿದ್ಧರಾಮ ಕೇಸಾಪುರ, ಸಂಗೀತಗಾರ: ಒಟ್ಟಾರೆ ನಾಟಕಗಳು, ಉಪನ್ಯಾಸಕರು, ಚಿಂತಕರು ಎಲ್ಲರೂ ಚೆನ್ನಾಗಿ ನಡೆಸಿಕೊಟ್ಟರು. ಈವರ್ಷ ಸಂಗೀತಕ್ಕೆ ಧ್ವನಿಯ ವ್ಯವಸ್ಥೆ ಅಷ್ಟು ಸರಿಯಾಗಿ ಆಗಿರಲಿಲ್ಲ. ಇನ್ಡೋರ್ ಆಡಿಟೋರಿಯಂನಲ್ಲಿ ನಾಟಕ ನಡೆಯುವಾಗ ತುಂಬ ಮಕ್ಕಳು ಮಾತನಾಡುತ್ತರೆ. ಇದು ಆಗಬಾರದು. 

ಸೋಮಶೇಖರ್, ಅಧ್ಯಾಪಕ: ನನ್ನ ಜವಾಬ್ದಾರಿ ಹೊಸ ಗೆಸ್ಟ್ಹೌಸ್ ನೋಡಿಕೊಳ್ಳುವುದು. ಕೊನೆಯ ದಿನ ಸಿ ಎಂ, ಶಾಮನೂರು ಶಿವಶಂಕರಪ್ಪನವರ ಜೊತೆ ನೂರಾರು ಜನ ಬಂದದ್ದರಿಂದ ಅತಿಥಿಗಳಿಗೆ ಆತಿಥ್ಯ ನೀಡುವಲ್ಲಿ ಸ್ವಲ್ಪ ತೊಂದರೆಯಾಗಿದೆ. 

ಹೊನ್ನೇಶಪ್ಪ, ಮುಖ್ಯೋಪಾಧ್ಯಾಯ: ಅತಿಥಿಗಳ ಸ್ವಾಗತದ ಕಾರ್ಯ ನನ್ನದಾಗಿತ್ತು. ಅತಿಥಿಗಳಿಗೆ ಪೂರ್ವನಿಗದಿಯಂತೆ ಫೋನ್ ಮಾಡಿ, ಅವರು ಬರುವ ಸಮಯ ತಿಳಿದುಕೊಂಡು ಅವರನ್ನು ಸ್ವಾಗತಿಸಿ ಉಪಚಾರ ಮಾಡುವ ಕೆಲಸ ತೃಪ್ತಿದಾಯಕವಾಗಿ ಮಡಿದ್ದೇನೆ. ಆದರೆ ಅತಿಥಿಗಳಿಗಿಂತ ಮುಂಚಿತವಾಗಿ ಅನ್ಯರು ಬರುವರು. ಅವರನ್ನು ನಿರ್ವಹಿಸುವುದು ಬಹಳ ಕಷ್ಟದ ಕೆಲಸ. ಸ್ಥಳೀಯ ಪಂಚಾಯಿತಿ ಸದಸ್ಯರು, ಪಿಡಿಓ ಮೊದಲಾದವರು ಸ್ವಚ್ಛತೆಯ ಕಾರ್ಯ ಮಾಡಿದ್ದಾರೆ. ಎಲ್ಲ ಕೆಲಸ ಕಾರ್ಯಗಳಲ್ಲಿ ಮಕ್ಕಳು ಮತ್ತು ಯುವಕರ ಸ್ಪಂದನೆಯಿಂದಾಗಿ ಕಾರ್ಯಕ್ರಮಗಳು ಯಶಸ್ವಿಯಾಗಿದೆ. 

ಸುಧಾ, ಅಧ್ಯಾಪಕಿ: ಬೆಳಗ್ಗಿನ ಚಿಂತನಾ ಕಾರ್ಯಕ್ರಮದಲ್ಲಿ ಚಿಂತಕರು ನಿಗದಿತ ಸಮಯಕ್ಕಿಂತ ಹೆಚ್ಚಾಗಿ ಬಳಸಿಕೊಂಡಿದ್ದರಿಂದ ಮುಂದಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗುವುದು. ಸಂಜೆ ಕಾರ್ಯಕ್ರಮದ ಚಿಂತಕರಿಗೆ ಸಮಯ ಬಹಳ ಕಡಿಮೆಯಾಗುತ್ತಿತ್ತು. ಅಷ್ಟು ನೃತ್ಯರೂಪಕಗಳಲ್ಲಿ ನಮ್ಮ ಶಾಲೆಯ ಮಕ್ಕಳ ನೃತ್ಯರೂಪಕಗಳೇ ಚೆನ್ನಾಗಿದ್ದವು. ಊಟದ ವ್ಯವಸ್ಥೆ ಚೆನ್ನಾಗಿತ್ತು. ಎಲ್ಲ ಕೆಲಸಗಳಿಗೆ ನೆರವಾಗುವ ಮಕ್ಕಳಿಗೆ ಎಷ್ಟು  ಅಭಿನಂದನೆ ಹೇಳಿದರೂ ಸಾಲದು.    

ಕಾವ್ಯ, ಅಧ್ಯಾಪಕಿ; ಧನಾತ್ಮಕ ಅಂಶಗಳ ಜೊತೆ ಋಣಾತ್ಮಕ ವಿಷಯಗಳು ಬರುವುದು ಸಹಜ. ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ನಮ್ಮ ಶಾಲೆಯ ವಿದ್ಯಾಥರ್ಿಯೊಬ್ಬನ ತಮ್ಮ ವಿಕಾಲಾಂಗ. ಅಂಥವನನ್ನು ನಾಟಕೋತ್ಸವ ನೋಡಲು ಬೆಂಗಳೂರಿನಿಂದ ಕರೆದುಕೊಂಡು ಬಂದಿರುವುದು ನಾಟಕೋತ್ಸವದ ಯಶಸ್ಸಿಗೆ ಸಾಕ್ಷಿಯಗಿತ್ತು. ಮಲ್ಲಗಂಭ ತುಂಬ ಚೆನ್ನಾಗಿತ್ತು. ಕಾರ್ಯಕತರ್ೆಯಾಗಿ ನಾನು ವಿಶ್ವಾರಾಧ್ಯ ಸತ್ಯಂಪೇಟೆಯವರಿಗೆ ಚೀಟಿ ಕೊಟ್ಟಿದ್ದೆ. ಆದರೆ ನನ್ನ ಬಳಿ ಬಳಿ ಬಂದು ಚೀಟಿ ಕೊಡಬಾರದಿತ್ತು ಎಂದರು. ಅದು ಪೂಜ್ಯರು ನೀಡಿದ ಸೂಚನೆಯಾಗಿತ್ತು. 

ಶಿವಾನಿ, ವಿದ್ಯಾರ್ಥಿನಿ: ನಿರೂಪಕಳಾಗಿ ಕೆಲಸ ಮಾಡಿದ್ದೇನೆ. ಗಡಿಬಿಡಿ, ಒತ್ತಡ ಸಹಿಸಿಕೊಂಡು ನಿರೂಪಣೆ ಮಾಡುವುದು ಅಷ್ಟು ಸುಲಭ ಅಲ್ಲ ಎಂದು ತಿಳಿಯಿತು. 

ಬಿ ಎಸ್ ಪ್ರಭು, ಶಿಕ್ಷಕ: ಅತಿಥಿ ಸತ್ಕಾರದ ಕಾರ್ಯ ನನ್ನದು. ಸಾರ್ವಜನಿಕರು ಅತಿಥಿಗಳ ಜೊತೆ ಬರುವುದರಿಂದ ಆತಿಥ್ಯ ಮಾಡಲು ತೊಂದರೆಯಾಗುತ್ತಿತ್ತು. ಮೌಲ್ಯಗಳು ಸಂಸ್ಕಾರವನ್ನು ಬೆಳೆಸುತ್ತವೆ ಎನ್ನುವುದಕ್ಕೆ ನಾಟಕೋತ್ಸವ ಸಾಕ್ಷಿಯಾಗಿತ್ತು. ಶಿವಸಂಚಾರದ ಕಲಾವಿದರು ಹೇಳುವ ವಚನಗಳನ್ನು, ಪೂಜ್ಯರು, ಅತಿಥಿಗಳ ಮಾತುಗಳನ್ನು ಮನನ ಮಾಡಿಕೊಳ್ಳುವ ಕೆಲಸ ಅಗಬೇಕು. 

ನಾಗವೇಣಿ, ವಿದ್ಯಾರ್ಥಿನಿ: ಹೆಡ್ಡಾಯಣ ನಾಟಕದಲ್ಲಿ ಅಜ್ಜಿಯ ಪಾತ್ರವಹಿಸಿದ್ದು ತುಂಬ ಖುಷಿಯಾಯಿತು. ನನ್ನ ತಾಯಿ ಬಂದು ಆ ನಾಟಕ ನೋಡಿದ್ದು ಇನ್ನೂ ಖುಷಿಯಾಯಿತು. ನಮ್ಮ ಅಮ್ಮನ ಕಷ್ಟ ನೋಡಿ ನನಗೆ ವ್ಯಥೆಯಾಗಿದೆ. 

ವಿದ್ಯಾರ್ಥಿ: ನಾಟಕಗಳನ್ನು ನೋಡಿದ ವಿದ್ಯಾಥರ್ಿಗಳು ಕೇವಲ ಚಪ್ಪಾಳೆ ತಟ್ಟದೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.

ಶಾಲಾ ಕಾಲೇಜುಗಳ ನೌಕರರು ಪೂಜ್ಯರಿಗೆ ಭಕ್ತಿಸಮರ್ಪಣೆ ಮಾಡಿದರು. ಸಿಂಹಾವಲೋಕನಕ್ಕೂ ಮುನ್ನ ಧ್ಯಾನ, ಮೌನ, ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನೆಗಳು ನಡೆದವು. ಶಿವಸಂಚಾರದ ಸಿದ್ದರಾಮ ಕೇಸಾಪುರ, ಕೆ ಜ್ಯೋತಿ ಮತ್ತು ಹೆಚ್ ಎಸ್ ನಾಗರಾಜ್ ಪ್ರಾರ್ಥನಾ ಕಾರ್ಯ ನಡೆಸಿಕೊಟ್ಟರು. ಶಾಲಾ-ಕಾಲೇಜಿನ ವಿದ್ಯಾಥರ್ಿಗಳು, ನೌಕರರು, ಗ್ರಾಮಸ್ಥರು ಭಾಗವಹಿಸಿದ್ದರು. ವಿದ್ಯಾಥರ್ಿನಿ ಶಿವಾನಿ ಕಾರ್ಯಕ್ರಮ ನಡೆಸಿಕೊಟ್ಟರು. 

 

ಸುದ್ದಿ ಓದಿ