ದೇಶದಲ್ಲಿ 58ಕ್ಕೇರಿದ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು
ನವದೆಹಲಿ, ಜ 5 :ದೇಶದಲ್ಲಿ ಬ್ರಿಟನ್ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಂಗಳವಾರ ಪ್ರಕರಣಗಳ ಸಂಖ್ಯೆ 58 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಂದೇ ದಿನದಲ್ಲಿ 20 ಮಂದಿಗೆ ಸೋಂಕು ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆ 38 ರಿಂದ 58 ಕ್ಕೆ ಏರಿದೆ. ಬಾಧಿತರೆಲ್ಲರನ್ನೂ ಆಯಾ ರಾಜ್ಯಗಳಲ್ಲಿ ಐಸೋಲೇಷನ್ ನಲ್ಲಿಸಲಾಗಿದೆ ಎಂದು ಎಂದು ಸಚಿವಾಲಯ ತಿಳಿಸಿದೆ. ಆದರೆ, ಈವರೆಗೆ ಬ್ರಿಟನ್ ನಿಂದ ಹಿಂದಿರುಗಿದವರು ಹಾಗೂ ಅವರ ಪ್ರಾಥಮಿಕ ಸಂಪರ್ಕಹೊಂದಿದವರಿಗೆ ಮಾತ್ರ ಹೊಸ ರೀತಿಯ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಇತ್ತೀಚೆಗೆ ಬ್ರಿಟನ್ ನಲ್ಲಿ ಹೊಸ ರೀತಿಯ ಕೊರೊನಾ ಪ್ರಕರಣ ಬೆಳಕಿಗೆ ಬಂದನಂತರ ಭಾರತ ಸರ್ಕಾರ ತೀವ್ರ ಜಾಗೃತೆ ವಹಿಸಿದೆ. ಆ ದೇಶದಿಂದ ಬರುವ ವಿಮಾನಗಳನ್ನು ರದ್ದುಪಡಿಸಲಾಗಿದೆ. ಅಲ್ಲಿಂದ ಆಗಮಿಸುವ ಪ್ರಯಾಣಿಕರನ್ನು ಗುರುತಿಸಿ ಆರ್ ಟಿ ಪಿಸಿ ಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪಾಸಿಟಿವ್ ಆದ ವ್ಯಕ್ತಿಗಳೊಂದಿಗಿನ ಸಹ ಪ್ರಯಾಣಿಕರು, ಕುಟುಂಬ ಸದಸ್ಯರನ್ನು ಗುರುತಿಸಿ ಅವರನ್ನು ಪರೀಕ್ಷೆ ನಡೆಸಲಾಗುತ್ತಿದೆಎಂದು ಸಚಿವಾಲಯ ಹೇಳಿದೆ.