ಸಂಗೀತ ಕ್ಷೇತ್ರವನ್ನು ಬೆಳಸಬೇಕಾಗಿದೆ: ಶಿವಕುಮಾರಿ
ವಿಜಯನಗರ (ಹೊಸಪೇಟೆ) 03: ಸಂಗೀತ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಸಂಗೀತ ಕ್ಷೇತ್ರವನ್ನು ಬೆಳಸಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಿರಿಯ ಕಲಾವಿದೆ ಬಿ. ಶಿವಕುಮಾರಿ ಹೇಳಿದರು.
ಇಲ್ಲಿಗೆ ಸಮೀಪದ ಜಿ. ನಾಗಲಾಪುರ ಗ್ರಾಮದ ಈಶ್ವರ ದೇವಸ್ಥನದ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ ಸೃಜನ ಶೈಕ್ಷಣಿಕ ಸಾಮಾಜಿಕ ಸಂಸ್ಕೃತಿಕ ಮಹಿಳಾ ಗ್ರಾಮಿಣಾಭಿವೃದ್ದಿ ಸೇವಾ ಸಂಸ್ಥೆ ಬಳ್ಳಾರಿ ಇವರ ಸಹಯೋಗದೊಂದಿಗೆ ಸಾಮಾನ್ಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಕಲಾವಿದ ಎಸ್. ಶ್ಯಾವಳಿಗೆಪ್ಪ ಅವರು ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ನಾನಾ ಸಂಘ-ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಇದರಿಂದ ಕಲಾವಿದರಿಗೆ ಆಥರ್ಿಕ ನೆವರು ದೊರೆಯುತ್ತಿರುವುದು ಸಂತಷದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಿರಿಯ ಕಲಾವಿದೆ ಪಿ. ಪದ್ಮಾವತಿ ಮುಖ್ಯಅತಿಥಿಗಳಾಗಿ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಮುಖಂಡರಾದ ಕೆ. ವಪ್ಪತ್ಯಪ್ಪ, ಎಚ್. ಬೋರಪ್ಪ, ವಿ. ಮುದ್ದಣ್ಣ, ಭರಮಪ್ಪ, ಬಿ. ಸೋಮಪ್ಪ, ಎನ್. ಮಂಜುನಾಥ, ನಾಗರಾಜ, ರಾಜಗೋಪಲ ರೆಡ್ಡಿ, ಎಚ್. ಎಮ್. ನಾಗಯ್ಯ, ಎಸ್. ಮಂಜುನಾಥ, ಬಿ. ಮುಕ್ಕಣ್ಣ ಅಚಾರಿ, ಡಿ. ಕಣ್ಣಿವಪ್ಪ, ಹನುಮಂತಪ್ಪ, ಜಿ. ರೇವಣ ಸಿದ್ದಪ್ಪ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಕಲಾವಿದ ಎಸ್. ಶ್ಯಾವಳಿಗೆಪ್ಪ ಅವರು ಸುಮಗ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎನ್. ಎಮ್. ರುದ್ರಯ್ಯಸ್ವಾಮಿ ತಬಲಾ ಸಾತ್ ನೀಡಿದರು. ಜಿ. ಹುಲುಗಪ್ಪ ಅವರು ಹಾರ್ಮೋನಿಯಂ ಸಾಥ್ ನೀಡಿದರು.