ಮನಸ್ಸಿನ ಒತ್ತಡಗಳಿಗೆ ಸಂಗೀತವೇ ಔಷಧಿ: ಡಾ. ಸುಬ್ಬಣ್ಣ ರೈ
ಬಳ್ಳಾರಿ 10: ಸಂಗೀತಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತವನ್ನು ಆಹ್ಲಾದಿಸುತ್ತಾರೋ ಅವರಿಗೆ ಕೆಲವು ಪ್ರಮುಖವಾದ ಆರೋಗ್ಯ ಲಾಭಗಳಾಗುತ್ತವೆ. ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ಗಳನ್ನು ಕೇಳಿದಾಗ ಬೇಸರದಲ್ಲಿದ್ದಾಗಲೂ ಮನಸ್ಸಿಗೆ ಸಮಾಧಾನ ಅನ್ನಿಸುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಗುರುಪುಟ್ಟರಾಜ ಕವಿ ಗವಾಯಿಗಳ 12ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರೋಗ್ಯವಂತರಲ್ಲಿ ಮತ್ತು ಯಾವುದಾದರೂ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಗಳಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಿ ರಿಲ್ಯಾಕ್ಸ್ ಆಗುವುದಕ್ಕಾಗಿ ಮ್ಯೂಸಿಕ್ ಕೇಳುವುದು ಒಳ್ಳೆಯ ಅಭ್ಯಾಸ ಹಾಗೂ ಇಂದಿನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಆಚರಣೆ ಮಾಡುವುದನ್ನು ನೋಡಿ ನನ್ನ ಬಾಲ್ಯದ ನೆನಪು ಮರಕಳಿಸಿತು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಂಪ್ಲಿಯ ಕಲಾವಿದರಾದ ಸುಗೂರು ತಿಮ್ಮಣ್ಣ ಅವರು ಟ್ರಂಪೇಟ್ (ತುತ್ತೂರಿ) ವಾದನದ ಮೂಲಕ ಮಧುಕೌಂಸ್ ರಾಗವನ್ನು ನುಡಿಸಿದರು, ನಂತರ ಹುಬ್ಬಳ್ಳಿಯ ಕಲಾವಿದರಾದ ಪಂಡಿತ್ ಕಾಶೀನಾಥ್ ಗವಾಯಿ ಅವರು ಮಧುವಂತಿ ರಾಗವನ್ನು ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಸಚಿವರಾದ ಡಾ. ಎ. ವೆಂಕಟೇಶ್, ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ಗೋವಿಂದ, ಅಧ್ಯಾಪಕರಾದ ಡಾ. ತೇಜಸ್ವಿ ಆರ್ ಹೆಗಡೆ, ಡಾ.ತಿಮ್ಮಣ್ಣ ಭೀಮರಾಯ, ಜ್ಯೋತಿ, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು