ಮುಂಡರಗಿ

ಅದ್ದೂರಿಯಾಗಿ ಮುಂಡರಗಿ ಉತ್ಸವ ಆಚರಣೆ

ಅದ್ದೂರಿಯಾಗಿ ಮುಂಡರಗಿ ಉತ್ಸವ ಆಚರಣೆ

ಲೋಕದರ್ಶನ ವರದಿ

ಮುಂಡರಗಿ 11: ದೇಶದ ಸ್ವಾತಂತ್ರ್ಯದ ಸಂಭ್ರಮದೊಂದಿಗೆ ತಾಲೂಕಿನ ಇತಿಹಾಸವನ್ನು ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಕಳೆದ 11ವರ್ಷಗಳ ಹಿಂದೆ ಮುಂಡರಗಿ ಉತ್ಸವ ಪ್ರಾಂಭಿಸಿ ಅದ್ದೂರಿಯಾಗಿ ಆಚರಣೆ ಮಾಡಿದ್ದೆವು. ಆದರೆ ಕಾರಣಾಂತರದಿಂದ ಮುಂದೆ ಮುಂಡರಗಿ ಉತ್ಸವನ್ನು ಮಾಡುವದಕ್ಕೆ ಸಾಧ್ಯವಾಗಲಿಲಾ,್ಲ ಆದರೂ ಸಹ ಮುಂಡರಗಿ ಉತ್ಸವನ್ನು ಕೈಬಿಡಬಾರದೆಂದು ಪ್ರತಿ ವರ್ಷವು ಜೂನ್ 10ರಂದು ಸಾಂಕೇತಿಕವಾಗಿ ಉತ್ಸವ ಮಾಡುತ್ತಾ ಬರಲಾಗುತ್ತಿದೆ ಎಂದು ಮುಂಡರಗಿ ಉತ್ಸವ ಸಮಿತಿಯ ಅಧ್ಯಕ್ಷ ವೈ.ಎನ್.ಗೌಡರ ಹೇಳಿದರು.

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಸಾಂಕೇತಿಕವಾಗಿ ಆಚರಿಸಲಾದ 11ನೇ ಮುಂಡರಗಿ ಉತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.

ಭಾರತ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ಬ್ರೀಟಿಷರ ವಿರುದ್ಧ ಪ್ರಾರಂಭ ಮಾಡಿದ್ದು ಮುಂಡರಗಿಯ ಇತಿಹಾಸವಿದೆ, ಆ ಇತಿಹಾಸವನ್ನು ಮುಂಡರಗಿ ತಾಲೂಕಿನ ನಮ್ಮ ಯುವ ಪೀಳಿಗೆಗಳಿಗೆ ತಿಳಿಸಿಕೊಡುವದರ ಮೂಲಕ ಯುವ ಜನಾಂಗಕ್ಕೆ ತಾಲೂಕಿನ ಇತಿಹಾಸದ ಜಾಗೃತಿ ಮೂಡಿಸುವದಕ್ಕಾಗಿ ತಾಲೂಕಿನ ಅನೇಕ ಹಿರಿಯರು ಕಳೆದ 11 ವರ್ಷಗಳ ಹಿಂದೆ 2 ದಿನಗಳ ಕಾಲ ಅದ್ದೂರಿಯಾಗಿ ಮುಂಡರಗಿ ಉತ್ಸವನ್ನು ಮಾಡಲಾಗಿತ್ತು. 

ಆದರೆ ಹಲವಾರು ಕಾರಣಾಂತರಗಳಿಂದ ಉತ್ಸವನ್ನು ಮಾಡಲು ಸಾಧ್ಯವಾಗಲಿಲ್ಲ. ಕಳೆದ 3 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಕಾರವು ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೆ ತಂದಿದ್ದರಿಂದ ಆವಾಗಲು ಉತ್ಸವ ಮುಂದೂಡಲಾಗಿತ್ತು. ಆದರೆ ಈ ವರ್ಷವು ಚುನಾವಣೆ ಇರುವದರಿಂದ ಉತ್ಸವವನ್ನು ಅದ್ದೂರಿಯಾಗಿ ಮಾಡಲು ಸಾಧ್ಯವಾಗದಿರುವದರಿಂದ ಇಂದು ಸಾಂಕೇತಿಕವಾಗಿ ಸರಳವಾಗಿ ಆಚರಣೆ ಮಾಡಲಾಗುವದು. ಮುಂದೆ ಅಂದರೆ ಅಕ್ಟೋಬರ್ ಅಥವಾ ನವ್ಹಂಬರ್ ತಿಂಗಳಲ್ಲಿ ಮುಂಡರಗಿ ಉತ್ಸವವನ್ನು ಮಾಡುವದಕ್ಕೆ ತಾಲೂಕಿನ ಹಿರಿಯರು ಸಹಕಾರ ನೀಡುವದಕ್ಕೆ ಮುಂದೆ ಬಂದಿದ್ದು ಅಂದು ಮಾಡಲಾಗುವದು ಎಂದು ವೈ.ಎನ್. ಗೌಡರ ಹೇಳಿದರು.

ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಸಾಂಕೇತಿಕ ಮುಂಡರಗಿ ಉತ್ಸವದ ಧ್ವಜಾರೋಹಣ ಮಾಡುವದರೊಂದಿಗೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯರಾದ ವ್ಹಿ.ಎಲ್.ನಾಡಗೌಡರ, ಕರಬಸಪ್ಪ ಹಂಚಿನಾಳ, ಕಾಂತರಾಜ ಹಿರೇಮಠ, ಅಂದಪ್ಪ ಬೆಲ್ಲದ, ಎಸ್.ಡಿ. ಮಕಾಂದಾರ, ಪಾಲಾಕ್ಷಿ ಗಣದಿನ್ನಿ, ಬಾಬಣ್ಣ ಘಟ್ಟಿ, ನಾಗೇಶ ಹುಬ್ಬಳ್ಳಿ, ಕೊಟ್ರೇಶ ಅಂಗಡಿ, ಪವನ ಮೇಟಿ, ವೆಂಕಟೇಶ ಗುಗ್ಗರಿ, ಮಂಜುನಾಥ ಇಟಗಿ, ಶೇಖಣ್ಣ ಜುಟ್ಲಾಣ್ಣನವರ, ಡಿ.ಎಂ. ನಾಗರಹಳ್ಳಿ, ಗೋವಿಂದರಾಜ ಕನರ್ೂಲ್, ಸೋಮನಗೌಡ ಗೌಡರ, ಪ್ರದೀಪ ಗುಡದಪ್ಪನವರ, ಫಕ್ಕೀರಪ್ಪ ರ್ಯಾವಣಕಿ, ಮುತ್ತು ಹಾಳಕೇರಿ, ಮುಂತ್ತಾದವರು ಪಾಲ್ಗೊಂಡಿದ್ದರು.

ಸರ್ವರನ್ನು ಬಸವರಾಜ ರಾಮೇನಹಳ್ಳಿ ಸ್ವಾಗತಿಸಿದರೆ, ಮಂಜುನಾಥ ಮುಧೋಳ ನಿರೂಪಿಸಿ ಕೊನೆಗೆ ವಂದಿಸಿದರು 

ಸುದ್ದಿ ಓದಿ