ಬಳ್ಳಾರಿ

ತಾಯಂದಿರು ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಲು ಮುಂದಾಗಿ: ಶಾಸಕ ಗಣೇಶ್

ತಾಯಂದಿರು ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಲು ಮುಂದಾಗಿ: ಶಾಸಕ ಗಣೇಶ್

ಲೋಕದರ್ಶನ ವರದಿ 

ಕಂಪ್ಲಿ 02:  ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಜೊತೆಗೆ ಶಿಕ್ಷಣವಂತರಾಗಿ ಮಾಡಲು ಮುಂದಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು.  

ಸ್ಥಳೀಯಎಸ್‌.ಎನ್‌.ಪೇಟೆಯಲ್ಲಿರುವ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಹೊಸಪೇಟೆ ವಿಭಾಗ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಬೆಳ್ತಂಗಡಿಯ ಜಿಲ್ಲಾ ಜನಜಾಗೃತಿ ವೇದಿಕೆ, ಹೊಸಪೇಟೆಯ ಕರ್ನಾಟಕ  ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು  ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಂಪ್ಲಿ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ, ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರ ಹಾಗೂ ಮಾತಶ್ರೀ ಹೇಮಾವತಿ ಅಮ್ಮನವರಕೃಪಾಶ್ರೀರ್ವಾದಗಳೊಂದಿಗೆ 153ನೇ ಗಾಂಧಿಜಯಂತಿ ಪ್ರಯುಕ್ತ, ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯ(ಮದ್ಯವ್ಯಸನಮುಕ್ತ)ರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಯೊಂದು ಹಳ್ಳಿಯಲ್ಲಿ ಸಂರ​‍್ೂಣ ಮದ್ಯ ಮುಕ್ತವಾಗಬೇಕು. ಮದ್ಯ ಸೇವನೆಯಿಂದ ಕುಟುಂಬಗಳು ಬೀದಿಗೆ ಬಂದಿವೆ.ಇದರಿಂದ ಮಕ್ಕಳು ಶಿಕ್ಷಣದಿಂದ ಹಿಂದುಳಿಯುವ ಸಾಧ್ಯತೆಯಿದೆ ಪ್ರತಿಯೊಂದು ಕುಟುಂಬಗಳು ಶಪತ ಮಾಡಲು ಮುಂದಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಬಡ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿದ್ದಾರೆ ತಾಯಂದಿರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೂಡಿಸಲು ಮುಂದಾಗಿ ಈಸಂಸ್ಥೆಗಳು ಮದ್ಯ ಮುಕ್ತ ಕುಟುಂಬ ಮಾಡಿದ್ದಿಕ್ಕಾಗಿ ಅಭಿನಂದನೆ ಸರ್ಕಾರ ಇಂತ ಸಂಸ್ಥೆಗಳ ಜೊತೆಗೆ ಕೈಜೊಡಿಸಬೇಕು ತಾಯಂದಿರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೂಡಿಸಲು ಮುಂದಾಗಿ ಎಂದು ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಪ್ರಾದೇಶಿಕ ನಿರ್ದೇಶಕ ಪಿ.ಕೆ.ಪುರುಷೋತ್ತಮ ಮಾತನಾಡಿ, ವ್ಯಸನಮುಕ್ತ ಹಾಗೂ ಸ್ವಾಸ್ಥ್ಯ ಜೀವನಕ್ಕಾಗಿ ದುಶ್ಚಟಗಳಿಂದ ವಿಮುಕ್ತಗೊಳ್ಳುವ ಸಂಕಲ್ಪ ಕೈಗೊಂಡು ಸ್ವಯಂ ಪರಿವರ್ತನೆಗೊಳ್ಳಬೇಕು ಎಂದರು. ತಾಲೂಕಿನ ಐವತ್ತು ಜನ ಮದ್ಯವ್ಯಸನಮುಕ್ತರನ್ನು ಗೌರವಿಸಲಾಯಿತು. ಕಮಲಾಪುರದ ತುಂಗ್ರಭದ್ರ ಸಂಘದ ಸದಸ್ಯರಾಗಿದ್ದ ಎ.ತಂಗಮನಿ ನಿಧನರಾಗಿದ್ದು ಎಲ್‌.ಐ.ಸಿ ಮೆಕ್ರೋ ಬಚತ್ ವಿಮೇಯಿಂದ 2ಲಕ್ಷರೂಪಾಯಿಯನ್ನುದಿ.ಎ.ತಂಗಮನಿಯವರ ನಾಮೀನಿಯ ಮಗನಾದ  ಸುರೇಶರವರಿಗೆ 2ಲಕ್ಷರೂ ಚೆಕ್ ನೀಡಲಾಯಿತು ಹೊಸಪೇಟೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನಟರಾಜ ಬದಾಮಿ ಅಧ್ಯಕ್ಷತೆವಹಿಸಿದ್ದರು. ತಹಸೀಲ್ದಾರ್ ಗೌಸಿಯಾಬೇಗಂ, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಪ್ರಮುಖರಾದ ಎಂ.ಸುಧೀರ್, ಕೆ.ಎಂ.ಹೇಮಯ್ಯಸ್ವಾಮಿ, ಚಲಗುರು ಷಣ್ಮುಖ, ಕೆ.ಎಸ್‌.ಚಾಂದ್‌ಬಾಷ, ಸಿದ್ದೇಶ್, ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಕೆ.ಚಿದಾನಂದ, ತಾಲೂಕು ಯೋಜನಾಧಿಕಾರಿ ಹಾಲಪ್ಪ ಇತರರಿದ್ದರು. 


ಸುದ್ದಿ ಓದಿ