ಬಳ್ಳಾರಿ

ಶಾಲೆಗಳಲ್ಲಿ ಶಿಕ್ಷಕರು ಮೊಬೈಲ್ ಬಳಸಿದ್ರೆ ಕ್ರಮ: ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

ಶಾಲೆಗಳಲ್ಲಿ ಶಿಕ್ಷಕರು ಮೊಬೈಲ್ ಬಳಸಿದ್ರೆ ಕ್ರಮ: ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

ಶ್ರೀರಾಂಪುರ ಕಾಲೋನಿಯ ಸರಕಾರಿ ಶಾಲೆಗೆ ಡಿಸಿ,ಎಸ್ಪಿ ಭೇಟಿ

ಬಳ್ಳಾರಿ 13: ಬಳ್ಳಾರಿಯ ಶ್ರೀರಾಂಪುರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸರಕಾರಿ ಉದರ್ು ಶಾಲೆಗೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಶಾಲಾ ಆವರಣದಲ್ಲಿನ ಅನೈರ್ಮಲ್ಯ,ಎಲ್ಲೆಂದರಲ್ಲಿ ಬಿದ್ದಿದ್ದ ಕಸದ ರಾಶಿ, ಮದ್ಯದ ಬಾಟಲಿಗಳ ಗ್ಲಾಸ್ ತುಣುಕುಗಳು, ಅನೈರ್ಮಲ್ಯತೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸದರಿ ಶಾಲೆಗಳ ಮುಖ್ಯಗುರುಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಡಿಡಿಪಿಐ ಅಂದಾನಪ್ಪ ಅವರಿಗೆ ನಿದರ್ೇಶನ ನೀಡಿದರು.

ಇನ್ಮುಂದೆ ಇಡೀ ಶಾಲಾ ಆವರಣ ಹಾಗೂ ಶಾಲಾ ಕೊಣೆಗಳು ಸಂಪೂರ್ಣ ಸ್ವಚ್ಛವಾಗಿರತಕ್ಕದ್ದು,ನಿಷ್ಕಾಳಜಿ ವಹಿಸಿದ್ದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಡಿಸಿ ಮಾಲಪಾಟಿ ಅವರು ತಮಗೆನಾದರೂ ಸೌಲಭ್ಯಗಳು ಬೇಕಿದ್ದಲ್ಲಿ ಒದಗಿಸಿಕೊಡಲಾಗುವುದು ಎಂದರು.

ಶಾಲೆಗಳ ಮುಖ್ಯಗುರುಗಳು ಇಲ್ಲಿನ ಸ್ಥಳೀಯರು ಸಂಜೆಯಾದರೇ ಸಾಕು ಶಾಲಾ ಆವರಣದ ಗೆಟ್ ದಾಟಿಕೊಂಡು,ಒಳಗಡೆ ಹಾಕಿರುವ ಕಬ್ಬಿಣದ ಗೇಟ್ಗಳು ಮುರಿದು ಶಾಲೆಯೊಳಗೆ ನುಗ್ಗಿ ಅಸ್ವಚ್ಛತೆ ಮಾಡುತ್ತಿದ್ದಾರೆ;ಅನೇಕ ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯವೂ ಸ್ವಚ್ಛಗೊಳಿಸಿದರೂ ಇದೇ ಸ್ಥಿತಿ ಎನ್ನುವಂತಾಗಿದೆ ಎಂದು ಡಿಸಿ,ಎಸ್ಪಿ ಎದುರು ಅಳಲು ತೋಡಿಕೊಂಡರು.

ಕೂಡಲೇ ಇತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಶಾಲಾ ಆವರಣ ಮತ್ತು ಶಾಲಾ ಕೊಠಡಿಯೊಳಗೆ ಅನೈರ್ಮಲ್ಯ ಮಾಡುತ್ತಿರುವವರ ವಿರುದ್ಧ ನಿಧರ್ಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಡಿಸಿ,ಎಸ್ಪಿ ಅವರು ಬ್ರೂಸ್ಪೇಟೆ ಇನ್ಸ್ಪೆಕ್ಟರ್ ಹಾಗೂ ಬಳ್ಳಾರಿ ನಗರ ಡಿವೈಎಸ್ಪಿ ಅವರಿಗೆ ಸೂಚನೆ ನೀಡಿದರು.

ನಂತರ ಶಾಲಾ ಕೊಠಡಿಗಳನ್ನು ಪರಿಶೀಲಿಸಿ,ಅಲ್ಲಿನ ಮಕ್ಕಳನ್ನು ಮಾತನಾಡಿಸಿ ಶಿಕ್ಷಕರಿಗೂ ಅನೇಕ ಸಲಹೆ ಸೂಚನೆಗಳನ್ನು ಡಿಸಿ ಮಾಲಪಾಟಿ ಅವರು ನೀಡಿದರು.

ಶಾಲಾಕೊಠಡಿಯೊಂದರಲ್ಲಿ ಶಿಕ್ಷಕರೊಬ್ಬರು ಮೊಬೈಲ್ ಬಳಸುತ್ತಿರುವುದನ್ನು ಗಮನಿಸಿದ ಡಿಸಿ ಮಾಲಪಾಟಿ ಅವರು ಗರಂ ಆದರು. ಶಾಲಾ ಕೊಠಡಿಯೊಳಗೆ ಶಿಕ್ಷಕರು ಯಾವುದೇ ಕಾರಣಕ್ಕೂ ಮೊಬೈಲ್ ಬಳಸಕೂಡದು;ಒಂದು ವೇಳೆ ಆ ರೀತಿ ಬಳಸಿದ್ದೂ ಕಂಡುಬಂದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಾಲಾ ಶಿಕ್ಷಕರು ಕೊಠಡಿಯೊಳಗೆ  ಬರುವ ಮುಂಚೆ ತಮ್ಮ ಮೊಬೈಲ್ಗಳನ್ನು ಮುಖ್ಯಗುರುಗಳ ಕೊಠಡಿಯೊಳಗೆ ಇಟ್ಟುಬರುವಂತೆ ಸುತ್ತೋಲೆ ಹೊರಡಿಸಲು ಡಿಡಿಪಿಐ ಅಂದಾನಪ್ಪ ವಡಿಗೇರ್ ಅವರಿಗೆ ಸೂಚನೆ ನೀಡಿದರು.

ನಂತರ ಅವರು ಕಾಲೋನಿಯಲ್ಲಿ ಅತಿಕ್ರಮವಾಗಿ ರಸ್ತೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿದರ್ೇಶನ ನೀಡಿದರು 

ಸುದ್ದಿ ಓದಿ