ಮನರಂಜನೆ

‘ಮುಂದುವರೆದ ಅಧ್ಯಾಯ’ ಡೈಲಾಗ್ ಟೀಸರ್ ರಿಲೀಸ್

‘ಮುಂದುವರೆದ ಅಧ್ಯಾಯ’ ಡೈಲಾಗ್ ಟೀಸರ್ ರಿಲೀಸ್

ಬೆಂಗಳೂರು, ಫೆ 24:ಮುಂದುವರೆದ ಅಧ್ಯಾಯ ಚಿತ್ರದ ಡೈಲಾಗ್ ರಿಲೀಸ್ ಆದ ಕೇಲವೆ ಘಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಆರ್ಗ್ಯಾನಿಕ್ ವೀವ್ಸ್ ಪಡೆದುಕೊಂಡಿದೆ. ಬಾಲು ಚಂದ್ರಶೇಖರ್ ಚೊಚ್ಚಲ ನಿರ್ದೇಶನದ ,‌ಕಣಜ‌ ಎಂಟರ್ ಪ್ರೈಸಸ್ ನಿರ್ಮಾಣದ ಆದಿತ್ಯ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ, ಚಿತ್ರದ ಟೀಸರ್ ನಲ್ಲಿರುವ ಈ ಡೈಲಾಗ್ ಗಳು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. 

ಅನೂಪ್ ಸೀಳಿನ್ ಹಿನ್ನೆಲೆ‌ ಸಂಗೀತ ಹಾಗೂ, ಜಾನಿ ನಿತಿನ್ ಸಂಗೀತ ಸಂಯೋಜನೆಯಿದೆ. ದಿಲೀಪ್ ಛಾಯಾಗ್ರಹಣ. ಉಗ್ರಂ ಶ್ರೀಕಾಂತ್ ಸಂಕಲನವಿದೆ.  ಮಾರ್ಚ್ 18 ಚಿತ್ರ ಬಿಡುಗಡೆಯಾಗಲಿದ್ದು, ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್, ಸಂದೀಪ್ ಕುಮಾರ್, ಅಜಯ್ ರಾಜ್ ,ಚಂದನ ಗೌಡ, ಆಶೀಕಾ ಸೋಮಶೇಖರ್ , ವಿನಯ್ ಕೃಷ್ಣಸ್ವಾಮಿ, ವಿನೋದ್ , ಶೋಭನ್ ಮುಖ್ಯಪಾತ್ರದಲ್ಲಿ‌ ನಟಿಸಿದ್ದಾರೆ 

“ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನ ಬೈತೀವಿ,  ನಮ್ಮನ್ನ ಕಾಯೋ ಪೊಲೀಸ್ ರನ್ನ ಬೈತೀವಿ, ಸುದ್ದಿ ಮುಟ್ಟಿಸೋ ವಾಹಿನಿಗಳನ್ನ ಬೈತೀವಿ, ಕಷ್ಟ ನಿವಾರಿಸೋ ಡಾಕ್ಟರ್ ಗಳನ್ನ ಬೈತೀವಿ, ಅನ್ನ ಹಾಕೋ ರೈತ,ಪಾಠ ಮಾಡೋ ಮೇಷ್ಟ್ರು , ಊಟ ಕೊಡೊ ಹೋಟ್ಲು, ಮನೆ ತಲುಪಿಸೋ ಡ್ರೈವರ್ ,  ನಮ್ಮನ್ನ ತಿದ್ದೋ ಕಲಾವಿದ ಹೀಗೆ ... ಎಲ್ಲರನ್ನೂ ಬೈತಿವಿ ! ಆದ್ರೆ ನಾವೂ ಇವ್ರಲ್ಲೇ ಒಬ್ಬರಾಗಿದಿವಿ ಅನ್ನೋದೇ ಮರೀತಿವಿ. . . .”  ಇತ್ಯಾದಿ ಡೈಲಾಗ್ ಗಳು ಗಮನ ಸೆಳೆಯುತ್ತಿವೆ. ಡೈಲಾಗ್ ಟೀಸರ್ ಗೆ ಎಲ್ಲೆಡೆಯಿಂದ ಮೆಚ್ವುಗೆ ವ್ಯಕ್ತವಾಗುತ್ತಿದೆ.  ಮುಂದುವರೆದ ಅಧ್ಯಾಯ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆಯಾಗಿದೆ. 


  

ಸುದ್ದಿ ಓದಿ