ಮನರಂಜನೆ

ಅತ್ಯಾಚಾರ ಪ್ರಕರಣ; ʼನಾಗಿಣಿ 3ʼ ನಟ ಬಂಧನ

ಅತ್ಯಾಚಾರ   ಪ್ರಕರಣ;  ʼನಾಗಿಣಿ 3ʼ   ನಟ ಬಂಧನ

ಮುಂಬೈ, ಜೂನ್‌ 5:   ಅತ್ಯಾಚಾರ ಹಾಗೂ   ಲೈಂಗಿಕ  ಕಿರುಕುಳ   ಪ್ರಕರಣದಲ್ಲಿ ಹಿಂದಿಯ  ಕಿರು ತೆರೆ  ನಟ, ನಾಗಿಣಿ ‘3’ ಧಾರಾವಾಹಿ ಖ್ಯಾತಿಯ ಪರಲ್‌  ವಿ  ಪುರಿ  ಅವರನ್ನು  ಬಂಧಿಸಲಾಗಿದೆ.  ತಮ್ಮನ್ನು  ಅಪಹರಿಸಿ   ಸ್ನೇಹಿತರೊಂದಿಗೆ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾನೆ.   ಅಷ್ಟು ಮಾತ್ರವಲ್ಲದೆ   ತಮಗೆ  ಬೆದರಿಸಿ  ಪದೇ ಪದೇ ಲೈಂಗಿಕ ಕಿರುಕುಳ  ನೀಡಿದ್ದಾನೆ   ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.  ಈ ಸಂಬಂಧ    ಅತ್ಯಾಚಾರ ಸಂತ್ರಸ್ಥೆ,  ಕುಟುಂಬ ಸದಸ್ಯರ ಜತೆ  ಮಾಲ್ವಾನಿ   ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಈ  ಕ್ರಮವಾಗಿ  16 ವರ್ಷದ ಬಾಲಕಿಯ ಮೇಲೆ  ಹಲ್ಲೆ ನಡೆಸಿದ ಆರೋಪದ  ಮೇಲೆ  ಪರಲ್‌  ವಿ ಪುರಿ   ಹಾಗೂ  ಆತನ ಆರು ಸ್ನೇಹಿತರ ವಿರುದ್ಧ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು,  ಸದ್ಯ   ಅವರೆಲ್ಲಾ   ಬಂಧನದಲ್ಲಿದ್ದು,   ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕೃತ   ಮೂಲಗಳು ಹೇಳಿವೆ. ಸಂತ್ರಸ್ತೆ  ತನ್ನ ಕುಟುಂಬ ಸದಸ್ಯರ  ಜತೆ   ಶುಕ್ರವಾರ  ಸಂಜೆ ಎಫ್‌ಐಆರ್ ದಾಖಲಿಸಿದ  ಹಿನ್ನಲೆಯಲ್ಲಿ   ಆದೇ  ದಿನ ( ಜೂನ್‌ 4)  ರಾತ್ರಿ   ನಟ  ಪರಲ್‌  ವಿ ಪುರಿ   ಹಾಗೂ ಆತನ  ನಾಲ್ವರು  ಸ್ನೇಹಿತರನ್ನು   ಬಂಧಿಸಿಲಾಗಿದೆ ಎಂದು   ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಮಧ್ಯಪ್ರದೇಶದ ಪರಲ್‌ವಿ ಪುರಿ 'ಬ್ರಹ್ಮ ರಾಕ್ಷಸಿ 2' ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. 2013 ರ 'ದಿಲ್ ಕಿ ನಜರ್ ಸೆ ಕೂಬ್ಸುರತ್' ಚಿತ್ರದ ಮೂಲಕ  ಬಾಲಿವುಡ್‌ ಪಾದಾರ್ಪಣೆ ಮಾಡಿದ ಪರಲ್‌ ವಿ  ನಂತರ ಏಕ್ತಾ ಕಪೂರ್‌ ನಿರ್ಮಿಸಿದ 'ನಾಗಿಣಿ 3'  ಹಾಗೂ 'ಬೆಪ್ನಾ ಪ್ಯಾರ್' ಧಾರಾವಾಹಿಗಳ  ಮೂಲಕ   ಜನ ಮನ್ನಣೆ ಗಳಿಸಿದ್ದರು. 




ಸುದ್ದಿ ಓದಿ