ಶಾಸಕ ಸೋಮನಗೌಡ ಸಜ್ಜನ ರಾಜಕಾರಣಿ: ಗುಂಡಕನಾಳ ಶ್ರೀ
ತಾಳಿಕೋಟಿ: ದೇ.ಹಿಪ್ಪರಗಿ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ಅವರ ತಂದೆಯವರಂತೆಯೇ ಸರಳ ಸಜ್ಜನ ರಾಜಕಾರಣಿ ಆಗಿದ್ದಾರೆ ಎಂದು ಗುಂಡಕನಾಳದ ಶ್ರೀಗುರು ಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಇತ್ತೀಚೆಗೆ ಶಾಸಕ ಸೋಮನಗೌಡರು ಭೂಮಿ ಪೂಜಾ ಸಮಾರಂಭದಲ್ಲಿ ಭಾಗವಹಿಸಲು ಗುಂಡಕನಾಳಕ್ಕೆ ಆಗಮಿಸಿ ಶ್ರೀಗಳ ದರ್ಶನ ಹಾಗೂ ಆಶೀವರ್ಾದ ಪಡೆಯಲು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಆಶೀರ್ವಾದ ನೀಡಿ ಅವರು ಮಾತನಾಡಿದರು.
ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾನು ಮುಂದುವರೆಯುತ್ತೇನೆ ಅವರ ಆಶೀರ್ವಾದ ಸದಾ ನನಗೆ ಬೇಕು ಎಂದರು.
ಈ ಸಮಯದಲ್ಲಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ಜಿ.ಪಂ. ಸದಸ್ಯ ಸಾಹೇಬಣ್ಣ ಆಲ್ಯಾಳ, ಸಾಹೇಬಗೌಡ ರಾರಡ್ಡಿ, ಗುರುಗೌಡ ಗುರಡ್ಡಿ, ಮುತ್ತುಗೌಡ ಮಾಳಿ, ರಾಜುಗೌಡ ಇಬ್ರಾಹಿಂಪೂರ, ಗ್ರಾ.ಪಂ. ಅಧ್ಯಕ್ಷ ಮಲ್ಲನಗೌಡ ಗುಂಡಕನಾಳ, ಸುಭಾಸ (ಗುಂಡಕನಾಳ) ಇದ್ದರು