ತಾಳಿಕೋಟಿ

ಶಾಸಕ ನಡಹಳ್ಳಿ ಅಭಿವೃದ್ಧಿಯ ಹರಿಕಾರ: ಲಿಂಗದಳ್ಳಿ

ಶಾಸಕ ನಡಹಳ್ಳಿ ಅಭಿವೃದ್ಧಿಯ ಹರಿಕಾರ: ಲಿಂಗದಳ್ಳಿ

ತಾಳಿಕೋಟಿ: 25 ವರ್ಷಗಳಿಂದ ಅಭಿವೃದ್ಧಿ ಕಾಣದ ಮುದ್ದೇಬಿಹಾಳ ಮತಕ್ಷೇತ್ರವನ್ನು ಇಂದು ಜಿಲ್ಲೆಯ ಒಂದು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರ ಕಾರ್ಯ ಶ್ಲಾಘನೀಯ, ಅವರೊಬ್ಬ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಕೊಣ್ಣೂರ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರಗೌಡ ಲಿಂಗದಳ್ಳಿ ಹೇಳಿದರು.

ಇತ್ತೀಚೆಗೆ ತಾಲೂಕಿನ ಪಡೇಕನೂರ ಗ್ರಾಮದಲ್ಲಿ ಕೆಬಿಜೆಎನ್ಎಲ್ ಇಲಾಖೆಯ ವ್ಯಾಪ್ತಿಯ ರೂ. 1.50 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ವತಿಯಿಂದ ಏರ್ಪಡಿಸಿದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಶಾಸಕ ನಡಹಳ್ಳಿ ಇವರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ಈ ಋಣ ತೀರಿಸುವ ರೀತಿಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಪಡೇಕನೂರ ಗ್ರಾಮ ಲೋಕಾಯುಕ್ತರಾದ ಬಿ.ಎಸ್. ಪಾಟೀಲರ ಹುಟ್ಟೂರು, ತಮ್ಮ ಗ್ರಾಮದ ಅಭಿವೃದ್ಧಿ ಕುರಿತು ನನಗೆ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅದನ್ನು ಪ್ರಾಮಾಣಿಕತೆಯಿಂದ ಪಾಲಿಸುತ್ತೇನೆ. ಮುಂದಿನ ಹಂತದಲ್ಲಿ ಮತ್ತೇ ಅನುದಾನ ಕೊಡಲಿದ್ದೇನೆ. ನಿಮ್ಮೆಲ್ಲರ ಆಶೀವರ್ಾದ ನನಗೆ ಬೇಕು ಎಂದರು.

ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಬಿ.ಎಸ್. ಪಾಟೀಲ, ಶಿವನಗೌಡ ಬಿರಾದಾರ, ಗ್ರಾಪಂ ಸದಸ್ಯ ಬಸನಗೌಡ ಪಾಟೀಲ, ಮಲ್ಲಿಕಾಜರ್ುನ ಅಂಗಡಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಬಪ್ಪರಗಿ, ಪುರಸಭೆ ಸದಸ್ಯ ಮುತ್ತಪ್ಪ ಚಮಲಾಪೂರ, ಗುತ್ತಿಗೆದಾರ ಸಂತೋಷ ಬೆನ್ನೂರ, ಬಸನಗೌಡ ಪಾಟೀಲ (ವಣಿಕ್ಯಾಳ), ಸಂಗನಗೌಡ ಪಡೇಕನೂರ, ಅಶೋಕ ಮುತ್ಯಾ ಹಿರೇಮಠ, ಎಇಇಗಳಾದ ಹುಂಡೇಕಾರ ಹಾಗೂ ಮಸೂತಿ ಇದ್ದರು.

ಸುದ್ದಿ ಓದಿ