ಶಕ್ತಿ ಯೋಜನೆಗೆ ಶಾಸಕ ಜಗದೀಶ ಗುಡಗುಂಟಿ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ 12: ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗದಿಂದ ಸರ್ಕಾರದ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯನ್ನು ಶಾಸಕ ಜಗದೀಶ ಗುಡಗುಂಟಿ ಚಾಲನೆ ನೀಡಿ, ಕರ್ನಾಟಕದ ಎಲ್ಲಿ ಬೇಕಾದರೂ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಬಹುದು, ನೀವು ರಾಜ್ಯದ ನಾಗರೀಕರು ಎಂಬುದಕ್ಕೆ ಗುರುತಿನ ಕಾರ್ಡ ನಿಮ್ಮ ಜೊತೆ ತೆಗೆದುಕೊಂಡು ಹೋಗುವುದು ಮಾತ್ರ ಕಡ್ಡಾಯವಾಗಿದೆಂದು ಶಾಸಕ ಜಗದೀಶ ಗಹುಡಗುಂಟಿ ಹೇಳಿದರು.
ಸಕರ್ಾರದ ಜನೋಪಯೋಗಿ ಕೆಲಸಗಳು ಕಾರ್ಯರೂಪಕ್ಕೆ ಬಂದಿದೆ, ಎಲ್ಲ ವಿದ್ಯಾರ್ಥಿನಿಯರು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಲಿ, ಸರ್ಕಾರದ ಎಲ್ಲ ಯೋಜನೆ, ಗ್ಯಾರಂಟಿಗಳು ಯಾವುದೇ ಷರತ್ತಿಲ್ಲದೆ ನಿರ್ಭಂಧಗಳಿಲ್ಲದೆ ಬರಲಿ ಎಂದು ಸಕರ್ಾರಕ್ಕೆ ಮನವಿ ಮಾಡಿದ ಅವರು, ಕಾರ್ಯಕ್ರಮದಲ್ಲಿ ಗಂಡಸರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇನ್ನು ಮುಂದೆ ಹೆಣ್ಣು ಮಕ್ಕಳೂ ಮನೆಯಿಂದ ಹೊರಗೆ ಬರುವುದು ಹೆಚ್ಚಾಗುತ್ತದೆ. ಊರಿಗೆ ಹೋದವರನ್ನು ಕರೆ ತರಲು ಗಂಡು ಮಕ್ಕಳು ಅದೇ ಬಸ್ನಲ್ಲಿ ಸಂಚರಿ ಶೇ.4 ರಷ್ಟು ಹಣ ವ್ಯಯ ಮಾಡಿ ಅವರನ್ನು ಕರೆತರುವಂತಾಗಿತು. ಒಂದು ಕಡೆ ಉಳಿಸಲು ಹೋಗಿ ಮತ್ತೋಂದೆಡೆ ಹಣ ಪೋಲು ಮಾಡಿಕೊಳ್ಳಬೇಡಿ ಎಂದು ವ್ಯಂಗವಾಡಿದರು.
ಮಾಜಿ ಶಾಸಕ ಆನಂದ ನ್ಯಾಮಗೈಡ ಮಾತನಾಡಿ, ಹಿಂದೆ ಚುನಾವಣೆಯಲ್ಲಿ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರಗಳು ಕೇಳಿಬರುತ್ತಿದ್ದವು, ಇಂದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ಅದಕ್ಕೆ ಕಡಿವಾಣ ಹಾಕಲಾಗಿದೆ. ಎಲ್ಲ ವರ್ಗದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗಿದೆ. ಆರ್ಥಿಕ ಶಕ್ತಿ ತುಂಬಲು ಶಕ್ತಿ ಯೋಜನೆ ಅನುಷ್ಠಾನಗೊಳಿಸಿದೆ. ನುಡಿದಣತೆ ನಡೆದುಕೊಂಡಿದೆ ಸಿದ್ದರಾಮಯ್ಯ ಸರ್ಕಾರ ಎಂದರು.
ಸಾರಿಗೆ ಘಟಕದ ವ್ಯವಸ್ಥಾಪಕ ಸಂಗಮೇಶ ಮಟೋಳ್ಳಿ ಮಾತನಾಡಿ, ಜಮಖಂಡಿ ಘಟಕದಲ್ಲಿ ಪ್ರತಿದಿನ 50 ಸಾವಿರ ಜನ ಓಡಾಡುತ್ತಿದ್ದು, ಅದರಲ್ಲಿ 10 ಸಾವಿರ ಜನರು ಮಹಿಳೆಯರೆ ಆಗಿದ್ದಾರೆ. ಅವರೆಲ್ಲರಿಗೂ ಇಂದಿನಿಂದ ಉಚಿತವಾಗಿ ಸಂಚರಿಸಲಿ, ಪ್ರತಿ ಹಳ್ಳಿ ಹಳಿಯಲ್ಲಿನ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಲಿ ಎಂದರು. ಇದೇ ಸಂದರ್ಭದಲ್ಲಿ ತಹಸೀಲ್ದಾರ ಸದಾಶಿವ ಮಕ್ಕೋಜಿ ಉಪಸ್ಥಿತರಿದ್ದರು.