ಕೆರೆಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಗುಡಗುಂಟಿ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ 17: ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ 103 ಎಕ್ಕೆರೆ ಕೆರೆಗೆ ಗುಡಗುಂಟಿ ಪರಿವಾರದಿಂದ 22 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಶಾಸಕ ಜಗದೀಶ ಗುಡಗುಂಟಿ ಚಾಲನೆ ನೀಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು.ಗಲಗಲಿ ಬ್ಯಾರೇಜನ ಜಾಕವೇಲ್ ದಿಂದ ಸುಮಾರು 22 ಕಿಮೀ ದೂರದಿಂದ ಪೈಪಲಾಯನ್ ಅಳಡಿಸಲು 22 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ. ಕೆರೆಗೆ ನೀರು ತುಂಬಿಸುವ ಪ್ರಯತ್ನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿ. ಗಲಗಲಿ ಬ್ಯಾರೇಜನಿಂದ ನೀರು ಹರಿಸಲು ಗುಡಗುಂಟಿ ಪರಿವಾರದ ಒಂದು ಪರಿಶ್ರಮದಿಂದ ಸುಮಾರು 6 ರಿಂದ 7 ಗ್ರಾಮಗಳಿಗೆ ನೀರಿನ ಅನುಕೂಲವಾಗುತ್ತದೆ ಎಂದರು.
ಸುತ್ತಮುತ್ತಲಿನ ಗ್ರಾಮಗಳಿಗೆ ಅಂತರಜಲ ಹೆಚ್ಚಾಗಿ ನೀರಿನ ಅಭಾವ ಕಡಿಮೆ ಆಗುತ್ತದೆ. ಈ ಭಾರಿ ಮಳೆ ಬಾರದ ಹಿನ್ನಲೆಯಲ್ಲಿ ರೈತರು ನೀರಿಗಾಗಿ ಆಹಾಕಾರ ಹೆಚ್ಚಾಗಿದ್ದು. ಸಿದ್ದಾಪುರ ಕೆರೆಗೆ ನೀರು ತುಂಬಿದರಿಂದ ಹೊಲ - ಗದ್ದೆಗಳಿಗೆ ಅನುಕೂಲಕರವಾಗಿ ಸಮೃದ್ಧಿಯಿಂದ ಕಬ್ಬು. ಮೆಕ್ಕೆಜೋಳ. ಜೋಳ ಹೀಗೆ ಹಲವಾರು ಬೆಳೆಗಳನ್ನು ಬೆಳೆಯಲು ರೈತರ ಮುಖದಲ್ಲಿ ಸಂತಸ ತಂದಿದೆ. ಇದ್ದಕೆ ಗುಡಗುಂಟಿ ಪರಿವಾರ ಮತ್ತು ಸುತ್ತಲಿನ ಗ್ರಾಮಸ್ಥರ ಸಹಕಾರದಿಂದ ಕೆರೆಗೆ ನೀರು ತುಂಬಿಸಲು ಸಾಧ್ಯವಾಗಿದೆ. ಸುಮಾರು 22 ಕೋಟಿ ರೂ.ಗಳನ್ನು ಸ್ವಂತ ಖರ್ಚಿನಲ್ಲಿ ಗುಡಗುಂಟಿ ಪರಿವಾರ ಮಾಡಿದ್ದು. ಈ ಭಾಗದ ರೈತರಿಗೆ ಜನ ಸೇವೆಯನ್ನು ಮಾಡಿದೆ. ನನ್ನ ಸಹೋದರಿಯನ್ನು ಸಿದ್ದಾಪುರ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿದ್ದು. ಹೀಗಾಗಿ ಸಿದ್ದಾಪುರ ಗ್ರಾಮಕ್ಕೆ ಅವಿನಾಭಾವ ಸಂಬಂಧ ಹೊಂದಿದೆ. ಸರಕಾರದಿಂದ ಯಾವುದೇ ಪರಿಹಾರ ಪಡೆಯದೆ ಒಂದು ಒಳ್ಳೆಯ ಯೋಜನೆಯನ್ನು ನೀಡಿದ್ದು. ಸಂತೃಪ್ತ ತಂದಿದೆ ಎಂದರು.
ನಾಗಪ್ಪ ಸನದಿ, ಹಾಜಿ ಇಲಾಹಿ ಕಂಗನೊಳ್ಳಿ, ಅಜೇಯ ಕಡಪಟ್ಟಿ, ಈಶ್ವರ ಆದೇಪ್ಪನ್ನವರ, ಆದರ್ಶ ರೂಗಿಮಠ, ರಾಜು ಕಲಕಂಬ, ಎಲ್,ಬಿ,ನಿಂಗಸಾನಿ, ಪಿ,ಎಮ್,ಜುಲ್ಪಿ, ಪ್ರಭುಜೀ ಹೂಗಾರ, ಮಂಜು ಗಲಗಲಿ, ಚಂದು ಸಕ್ಕರೇಪ್ಪಗೋಳ, ರಾಜು ತೆಗ್ಗಿ, ಉಮೇಶ ಭೂಮಾರ, ಹನುಮಂತ ಜಕ್ಕನೂರ, ಪುಂಡಲೀಕ ಗಸ್ತಿ, ಅಡಿವೆಪ್ಪ ಕೊಂಕಣಿ, ನಾಗಪ್ಪ ಪೂಜಾರಿ, ಮುತ್ತಪ್ಪ ದಳವಾಯಿ, ಲಕ್ಷ್ಮಣ ಹುಲ್ಯಾಳ, ಕರೆಪ್ಪ ಜೀರಗಾಳ, ಸಿದ್ದಪ್ಪ ಮೇಲಿಮನಿ ಸೇರಿದಂತೆ ಜಿ,ಪಂ,ಇಂಜಿನಿಯರ್ ರಾಮಪ್ಪ ರಾಠೋಡ ಹಾಗೂ ಸಿಬ್ಬಂದಿಗಳು.ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.