ಬಳ್ಳಾರಿ

ಎಂ.ಎಂ.ಪ್ರಭುಸ್ವಾಮಿಗೆ " ಗುರುಕುಲ ಶಿಕ್ಷಕ ರತ್ನ" ಪ್ರಶಸ್ತಿ ಪ್ರದಾನ

ಎಂ.ಎಂ.ಪ್ರಭುಸ್ವಾಮಿಗೆ " ಗುರುಕುಲ ಶಿಕ್ಷಕ ರತ್ನ" ಪ್ರಶಸ್ತಿ ಪ್ರದಾನ

ಎಂ.ಎಂ.ಪ್ರಭುಸ್ವಾಮಿಗೆ " ಗುರುಕುಲ ಶಿಕ್ಷಕ ರತ್ನ" ಪ್ರಶಸ್ತಿ ಪ್ರದಾನ  

ಹೊಸಪೇಟೆ 16 :  ನಗರದ ಪಂಗಕ್ಷನ್ ಹಾಲ್ ನಲ್ಲಿ ಈಚೆಗೆ ಗುರುಕುಲ ಕೇಂದ್ರ ಸಮಿತಿ ತುಮಕೂರು ಇವರ ಸಹಯೋಗ ದಲ್ಲಿ ಭಾನುವಾರ ಏರಿ​‍್ಡಸಿದ್ದ ಹೊಸಪೇಟೆ ತಾಲೂಕು ಘಟಕ ಉದ್ಘಾಟನೆ ಮತ್ತು ಕವಿ ಗೋಷ್ಠಿ ಸಮಾರಂಭದಲ್ಲಿ  ಹೊಸಪೇಟೆ ತಾಲೂಕಿನ  ಪಾಪಿನಾಯಕನಹಳ್ಳಿ ಅಕ್ಷಯ ಸ್ಮಾರಕ ಅನುದಾನಿತ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕ ರಾದ ಎಂ.ಎಂ.ಪ್ರಭುಸ್ವಾಮಿ ಅವರ ಸೇವೆಗೆ " ಗುರುಕುಲ. ಶಿಕ್ಷಕ ರತ್ನ " ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗಣಿತ ವಿಷಯ ಶಿಕ್ಷಕರಾಗಿ, ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿ "ಶಿಕ್ಷಣವೇ ಶಕ್ತಿ"  ಜತೆಗೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.   ಗಣಿತ ಶಿಕ್ಷಕರಾದ ಪ್ರಭುಸ್ವಾಮಿ ಅವರು   ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ನಾಡು ನುಡಿ. ಕಲೆ, ಭಾಷೆ, ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ, ಸಂಗೀತ, ಇನ್ನೂ ಮುಂತಾದ ಕ್ಷೇತ್ರಗಳನ್ನು ಪ್ರೋತ್ಸಾಹಿಸುವ ಮತ್ತು ಬೆಳೆಸುವ ಕಾಯಕದಲ್ಲಿ ಕೈಜೋಡಿಸುವ ಮೇರು ವ್ಯಕ್ತಿತ್ವವನ್ನು ಹೊಂದಿದ್ದಾರೆ.  ಸಾಧನೆ ಮಾಡಿದ ಪ್ರಭುಸ್ವಾಮಿ ಅವರನ್ನು ಪ್ರೌಢಶಾಲೆ ಮುಖ್ಯಗುರುಗಳು.ಶಿಕ್ಷಕ ವೃಂದ.ಹೊಳಗುಂದಿ ಸಹೋದರ ನಿವೃತ್ತ ಪ್ರಾಚಾರ್ಯರಾದ ಎಂಎಂ.ಗುರುಬಸವರಾಜ.ಪತ್ರಕರ್ತ ಎಂ.ಅಶೋಕ ಅಭಿನಂದಿಸಿದ್ದಾರೆ. 


ಸುದ್ದಿ ಓದಿ