ಕಥೆ ಮತ್ತು ವಿಶೇಷ ಲೇಖನಗಳು

ಬದುಕೊಂದು ಭಾವಗೀತೆ

ಬದುಕೊಂದು ಭಾವಗೀತೆ

- ಪ್ರಭಾ .ಅ. ಪಾಟೀಲ

ಬದುಕೊಂದು ಭಾವಗೀತೆ 

ಆ ದೇವ ಬರೆದಾ ಚರಿತೆ/ಪ/ 

ಅರಳುವುದು. ಅದು ತಾಯಿಯಾ ಮಡಿಲಲ್ಲಿ 

ಮಗುವಾಗಿ ಬಾಲ್ಯವ ಕಳೆಯುವೆವು ಹರುಷದಾ ಹೊನಲಾಗಿ ಬೆಳೆಯುತಾ ಎಲ್ಲರ ಕಣ್ಮಿಣೀಯಾಗಿ ಅರಳುವುದು ಮೊಗ್ಗಿಂದ ಹೂವಾಗಿ ಸೌಂದರ್ಯದ ಖನಿಯಾಗಿ/1/ 

ಆ ಬಾಲ್ಯ ಕಳೆಯಿತು ಯೌವ್ವನ ಬಂದಿತು  

ಏನು ಚೆಂದ ಏನು ಅಂದ ಏನೀ ವಯ್ಯಾರ  

ಇ ಯೌವ್ವನ ದಾ ಹುರುಪಿನಾ ಒಡಲಲ್ಲಿ 

ಕನಸುಗಳ ಕಡಲಲ್ಲಿ ಎಲ್ಲವಾ  

ಗೆಲ್ಲುವಾ ಹಮ್ಮೀನಲಿ ನನಗ್ಯಾರು ಸಾಟಿ ಎಂಬ 

ಹುಮ್ಮಸ್ಸೀನಲಿ ಸಾಗುವುದಿದು  

ಓಡುವುದು ಇದು ಜಾರೀ 

ಹೋಗುವುದು ಒಂದು ದಿನ ಒಂದು ದಿನ/2/ 

ಕನಸುಗಳ ಲೋಕದಿಂದ ನಡೆಯುವೆವು ವಿವಾಹ ಬಂಧನ ದೆಡೆಗೆ ಜಗವೆಲ್ಲ ಸುಂದರ ಸಂಗಾತಿಯ ಜೊತೆಗೆ ಪ್ರೀತಿಯ ಫಲವಾಗಿ ಅರಳುವ ಮಕ್ಕಳು ಅವರ ಆಟ-ಪಾಠದಲ್ಲಿ ನೋಡುತ ನೋಡುತ ಪಾಡುತ ಬೀಳುವುದು ಸಂಸಾರದ ಸುಳಿಗೆ ಜವಾಬ್ದಾರಿ ಎಡೆಗೆ/3/ 

ಕಾಲಚಕ್ರ ಉರುಳುತ ಉರುಳುತ್ತಾ ನಡೆದೆವು ನಾವಿಂದು ವೃದ್ಧಾಪ್ಯ ದೆಡೆಗೆ 

ಒಂಥರಾ ಇದು ಚಂದ ಮಕ್ಕಳಾ ಮೊಮ್ಮಕ್ಕಳಾ ಪ್ರೀತಿಯ ಹಂದರ ಇದು ಒಂಥರಾ ಮೋಹದ ಹಂದರ ಸಾಗುವುದು ಜೀವನ ಅವರ ಏಳಿಗೆ ನೋಡುತ ನೋಡುತ ನಾವೆಲ್ಲ ಹೋಗುವೆವು, ಸಾಗುವೆವು 

ಆ ದೇವನ ಕಡೆಗೆ ಆ ದೇವನ ಕಡೆಗೆ/4/ 

ಆ ದೇವ ನೀಡಿದ ಈ ಬದುಕ ನಗು ನಗುತ್ತಾ ಕಳೆಯೋಣ ಸಮಾಜದ ಒಳಿತಿಗಾಗಿ ದುಡಿಯೋಣ ಏನಾದರೂ ನೀಡೋಣ ಬದುಕೊಂದು ಭಾವಗೀತೆ ಆ ದೇವ ಬರೆದಾ ಚರಿತೆ ಆ ದೇವ ಬರೆದಾ ಚರಿತೆ 


ಸುದ್ದಿ ಓದಿ