ತಾಳಿಕೋಟಿ

ರಾಜಕಾರಣ ಚುನಾವಣೆಗೆ ಸೀಮಿತವಾಗಲಿ

ರಾಜಕಾರಣ ಚುನಾವಣೆಗೆ ಸೀಮಿತವಾಗಲಿ

ಪಡೇಕನೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕ ನಡಹಳ್ಳಿ ಚಾಲನೆ

ತಾಳಿಕೋಟಿ :ರಾಜಕಾರಣವೆಂಬುದು ಚುನಾವಣೆಗೆ ಸೀಮಿತವಾದ ವಿಷಯ ಆಗಬೇಕು ಚುನಾವಣೆ ಮುಗಿದ ಮೇಲೆ ಮತ್ತೇ ಎಲ್ಲರೂ ಖುದ್ದಾಗಿ ಕೆಲಸ ಮಾಡಬೇಕು ಆಗ ಮತಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ಕ.ರಾ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಶಾಸಕ ಮುದ್ದೇಬಿಹಾಳ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.

ಭಾನುವಾರ ಮತಕ್ಷೇತ್ರದ ಪಡೇಕನೂರ ಗ್ರಾಮದಲ್ಲಿ ಕೆಬಿಜೆಎನ್ಎಲ್ ವತಿಯಿಂದ ಹಮ್ಮಿಕೊಂಡ ರೂ. 1.50 ಕೋಟಿ ಸಿ.ಸಿ. ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ  ನಂತರ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿರುವ 20 ಕೆರೆಗಳನ್ನು ಅದರಲ್ಲೂ ವಿಶೇಷವಾಗಿ ಪಡೇಕನೂರ ಕೆರೆಯನ್ನು ತುಂಬಿಸಿರುವದರಿಂದ ಇಂದು ಇಲ್ಲಿಯ ರೈತರ ಅತಿ ಹೆಚ್ಚು ಕಬ್ಬು ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಬ್ಯಾನಲ್ ನೆಟ್ವರ್ಕ ರೂ. 4.70 ಕೋಟಿ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಮುಖ್ಯವಾಗಿ ರೈತರಿಗೆ ಅತ್ಯಗತ್ಯವಾಗಿರುವ ವಿದ್ಯುತ್ 3 ಫೇಸದಲ್ಲಿ 12 ತಾಸು ಸಿಗುವಂತಾಗಲು ರೂ. 1350 ಕೋಟಿ ಮಂಜೂರಾತಿ ಸಿಕ್ಕಿದೆ. ಜೊತೆಗೆ ಎಂಟು 110 ಕೆ.ವಿ. ಸ್ಟೇಷನ್ ಹಾಗೂ 220 ಕೆ.ವಿ. 2 ಸ್ಟೇಷನ್ ಮುಕ್ತಾಯದ ಹಂತದಲ್ಲಿವೆ. ಈ ಎರಡೂ ಕೆಲಸಗಳಾದರೆ ಮುಂದಿನ 2047 ಇಸ್ವಿಯವರೆಗೂ ವಿದ್ಯುತ್ ಲಭ್ಯವಾಗುವುದು.

ಇದರ ಜೊತೆಗೆ ಕ್ಷೇತ್ರದ 3 ಪ್ರಮುಖ ಪಟ್ಟಣಗಳಾದ ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡ ಅಭಿವೃದ್ಧಿಗೆ ತಲಾ 40 ಕೋಟಿ ಅನುದಾನ ಕೊಟ್ಟಿದ್ದೇನೆ. ಕಳೆದ ಒಂದು ವರ್ಷದಲ್ಲಿ ಕೆಲವು ವಿರೋಧಿಗಳಿಂದಾಗಿ ಅಭಿವೃದ್ಧಿಯಲ್ಲಿ ಅಡೆತಡೆಯಾಗಿದೆ. ಈಗ ಅದು ಕೂಡ ದೂರವಾಗಿದೆ. ಉಳಿದ ಅವಧಿಯಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಲಿದ್ದೇನೆ ಎಂದರು.

ಈ ಸಮಯದಲ್ಲಿ ಗ್ರಾ.ಪಂ. ಅಧ್ಯಕ್ಷ ಶಂಕರಗೌಡ ಲಿಂಗದಳ್ಳಿ, ಜಿ.ಪಂ. ಮಾಜಿ ಸದಸ್ಯ ನಿಂಗಪ್ಪ ಬಪ್ಪರಗಿ, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಅಶೋಕ ಮುತ್ಯಾ ಹಿರೇಮಠ, ಶಿವನಗೌಡ ಬಿರಾದಾರ, ಗುತ್ತಿಗೆದಾರ ಸಂತೋಷ ಚೆನ್ನೂರ, ಬಸನಗೌಡ ಪಾಟೀಲ (ವಣಿಕ್ಯಾಳ), ಎಇಇ ಗಳಾದ ಹುಂಡೇಕಾರ, ಮಸೂತಿ ಇದ್ದರು 

ಸುದ್ದಿ ಓದಿ