ಜೋಡೋ ಐಕ್ಯತಾ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ: ಶಂಭುಲಿಂಗಪ್ಪ
ಲೋಕದರ್ಶನ ವರದಿ
ಶಿಗ್ಗಾವಿ 30: ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಭಾರತ ಜೋಡೋ ಐಕ್ಯತಾ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ತಾಲೂಕ ಬ್ಲಾಕ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಕಾಂಗ್ರೆಸ್ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮರಾಷ್ಟ್ರೀಯ ಅಧ್ಯಕ್ಷ ರಾಜೀವಗಾಂಧಿಯವರು ನೇತೃತ್ವದಲ್ಲಿ ನಡೆದ ಭಾರತ ಜೋಡೋ ಯಾತ್ರೆಯು ಈಗಾಗಲೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದು ಕರ್ನಾಟಕಕ್ಕೆ ಸೆಪ್ಟೆಂಬರ್ 30ರಂದು ಆಗಮಿಸುತ್ತಿದ್ದು ಆ. 16 ರಂದು ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಯುತ್ತಿದ್ದು ಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಸವಣೂರ ಬ್ಲಾಕ್ ಅಧ್ಯಕ್ಷ ಎಂ.ಜೆ.ಮುಲ್ಲಾ ಮಾತನಾಡಿ ಶಿಗ್ಗಾವಿ ಸವಣೂರ ವಿಧಾನಸಭಾಕ್ಷೇತ್ರದ ಎಲ್ಲ ನಾಯಕರು ಮುಖಂಡರ ನೇತೃತ್ವದಲ್ಲಿ ಪಾದಯಾತ್ರೆಗೆ ಪಾಲ್ಲೋಳ್ಳುತ್ತಿದ್ದೇವೆ ಅಲ್ಲದೇ ನಮ್ಮ ಕೆಲವು ನಾಯಕರುಗಳಿಗೆ ಬೇರೆ ಬೇರೆ ಜವಾಬ್ದಾರಿ ನೀಡಿರುವುದರಿಂದ ನಾಯಕರು ಮುಖಂಡರು ಬಂದಿಲ್ಲ ಎಂದು ಹೇಳಿದರು.
ಜಿಲ್ಲಾಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ ಮಾತನಾಡಿ ಸಾರ್ವಜನಿಕರಿಗೆ ನಿರುದ್ಯೋಗ ಸಮಸ್ಯೆ, ದಿನನಿತ್ಯದ ಜೀವನಕ್ಕಾಗಿ ಬಳಸುವ ಬೆಲೆಗಳು ಗಗನಕ್ಕೆ ಏರಿದ್ದು, ರೈತ ವಿರೋಧಿ ಕಾನೂನುಗಳನ್ನು ರದ್ದು ಪಡಿಸುವುದು ಹಾಗೂ ದೇಶಾದ್ಯಂತ ಸಂಘಟನೆ ಮಾಡಿ ಬರುವಚುನಾವಣೆಯಲ್ಲಿಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮುಖ್ಯ ಉದ್ದೇಶವೇ ಪಾದಯಾತ್ರೆಎಂದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಾಬರ ಬಾವೋಜಿ, ಎಸ್.ಸಿ.ಘಟಕ ಅಧ್ಯಕ್ಷ ಅಶೋಕ ಓಲೇಕಾರ, ಶಿಗ್ಗಾವಿ-ಸವಣೂರ ಯುಥ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಇತರರು ಉಪಸ್ಥಿತರಿದ್ದರು