ಸೇವಂತಿಗೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ
ಸೇವಂತಿಗೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ
ಮುಂಡರಗಿ 13 : ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ದತ್ತು ಗ್ರಾಮವಾದ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿಯಲ್ಲಿ 13-11-2024 ರಂದು ಸೇವಂತಿಗೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ನವೀನಗೌಡ ಪಾಟೀಲ ಹೊಲದಲ್ಲಿ ಏರಿ್ಡಸಲಾಗಿತ್ತು. ಐ.ಸಿ.ಎ.ಆರ್- ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ, ಬೆಂಗಳೂರು ಹಾಗೂ ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ಸಹಯೋಗದಲ್ಲಿ ಮುಂಗಾರು ಹಂಗಾಮಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿಯಲ್ಲಿ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಶ್ರೀ ಎನ್. ಎಚ್. ಭಂಡಿ ಇವರು ಮಾತನಾಡಿ, ಸೇವಂತಿಗೆ ಬೆಳೆಯಲ್ಲಿ ಅಧಿಕ ಹಾಗೂ ಗುಣಮಟ್ಟದ ಹೂವಿನ ಉತ್ಪಾದಕತೆಗಾಗಿ ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆಯ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆ ಕೈಗೊಂಡ ತಾಕುಗಳಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕೆವಿಕೆಯ ತೋಟಗಾರಿಕೆ ತಜ್ಞರಾದ ಹೇಮಾವತಿ ಹಿರೇಗೌಡರ ಇವರು ಸೇವಂತಿಗೆ ಬೆಳೆ ಉತ್ಪಾದಕತೆ ತಂತ್ರಜ್ಞಾನಗಳು ಮತ್ತು ರಸ ಹೀರುವ ಕೀಟಗಳ ನಿರ್ವಹಣೆಗಾಗಿ ಜೈವಿಕ ಕೀಟನಾಶಕಗಳಾದ ಲೆಕಾನಿಸಿಲಿಯಮ್ ಲೆಕಾನಿ ಮತ್ತು ಬಿವೇರಿಯಾ ಬಾಸ್ಸಿಯಾನಾಗಳನ್ನು ಸಿಂಪಡಿಸಲಾಗಿದೆ ಹಾಗೂ ಮೊಗ್ಗು ಮತ್ತು ಹೂವು ಕೊರೆಯುವ ಕೀಟಗಳ ನಿರ್ವಹಣೆಗಾಗಿ ಬೇವಿನ ಹಿಂಡಿಯೊಂದಿಗೆ ಮೆಟಾರೈಜಿಯಮ್ ಅನಿಸೊಪ್ಲಿಯೆಯನ್ನು ಬೆರಸಿ ಸಸಿ ನಾಟಿ ಸಮಯದಲ್ಲಿ ಗಿಡಗಳಿಗೆ ಹಾಕಲಾಗಿದೆ. ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ಸ್ಯೂಡೋಮೊನಾಸ್ ಫ್ಲೋರೋಸೆನ್ಸ್ನ್ನು ಸಿಂಪಡಿಸಲಾಗಿದೆ ಮತ್ತು ಸಿಡಿ ರೋಗದ ನಿರ್ವಹಣೆಗಾಗಿ ಟ್ರೈಕೋಡರ್ಮಾ ವಿರಿಡೆಯನ್ನು ಗಿಡದ ಬೇರು ತೊಯ್ಯುವಂತೆ ಹಾಕಲಾಗಿದೆ. ಇವುಗಳಿಂದ ಕೀಟ ಮತ್ತು ರೋಗಗಳ ಬಾಧೆ ಗಣನೀಯವಾಗಿ ಕಡಿಮೆಯಾಗಿದೆ. ಅಧಿಕ ಹೂವಿನ ಇಳುವರಿಯೊಂದಿಗೆ ಗುಣಮಟ್ಟದ ಹೂವು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು. ಶ್ರೀ ನವೀನಗೌಡ ಪಾಟೀಲ ಇವರು ತಮ್ಮ ಹೊಲದಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆಯ ಪರಿಣಾಮವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೇ ಉತ್ತಮ ಹೂವಿನ ಇಳುವರಿಯೊಂದಿಗೆ ಪೂರ್ತಿ ಅರಳಿದ ಹಾಗೂ ಗಾಢ ಬಣ್ಣದ ಹೂವುಗಳನ್ನು ಪಡೆದಿದ್ದೆವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಕ್ಷೇತ್ರೋತ್ಸವದಲ್ಲಿ ಗ್ರಾಮದ ಪ್ರಗತಿಪರ ರೈತರಾದ ಯೋಗೇಶ ಹಿರೇಗೌಡ್ರ, ರಂಗನಗೌಡ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. ಸಮಾರಂಭದ ಪೂರ್ವದಲ್ಲಿ ಸೇವಂತಿಗೆ ಬೆಳೆಯ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ರೈತರ ಭೆಟ್ಟಿಯನ್ನು ಏರಿ್ಡಸಲಾಗಿತ್ತು.