ಮುಂದಗೋಡ

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಲ್ಲರೂ ಪ್ರೀತಿಸಬೇಕು ಮತ್ತು ಗೌರವಿಸಬೇಕು; ಪ್ರಸನ್ನ ಸಿಂಗ್

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಲ್ಲರೂ ಪ್ರೀತಿಸಬೇಕು ಮತ್ತು ಗೌರವಿಸಬೇಕು; ಪ್ರಸನ್ನ ಸಿಂಗ್

ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಲ್ಲರೂ ಪ್ರೀತಿಸಬೇಕು ಮತ್ತು ಗೌರವಿಸಬೇಕು; ಪ್ರಸನ್ನ ಸಿಂಗ್     

ಮುಂಡಗೋಡ 11:  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ  ಮುಂಡಗೋಡ  ಹಾಗೂ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಾಲೇಜು ಮುಂಡಗೋಡ ಸಹಯೋಗದಲ್ಲಿ ಕನ್ನಡ ಕಾರ್ತಿಕ ಅನು ಸ್ಪಂದನ ಕಾರ್ಯಕ್ರಮ ಅಂಗವಾಗಿ “ಕನ್ನಡಎನೇ ಕುಣಿದಾಡುವುದೆನ್ನೆದೆ” ಎಂಬ ಉಪನ್ಯಾಸ ಕಾರ್ಯಕ್ರಮವನ್ನು  ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಾಲೇಜಿನ  ಪ್ರಾಂಶುಪಾಲರಾದ ಪ್ರಸನ್ನ ಸಿಂಗ್ ಕಾರ್ಯಕ್ರಮವನ್ನು  ಉದ್ಘಾಟಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತ್ತು.   ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಸಿಂಗ್ ಅವರು ಮಾತನಾಡುತ್ತ ಕನ್ನಡ ಭಾಷೆ ಪ್ರತಿಯೊಬ್ಬರಿಗೂ ಆಶ್ರಯ ನೀಡಿದ ಒಂದು ಸುಂದರವಾದ ಭಾಷೆ  ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಲ್ಲರೂ ಪ್ರೀತಿಸಬೇಕು ಮತ್ತು ಗೌರವಿಸಬೇಕು ಅಲ್ಲದೆ ಪ್ರತಿ ಮನೆಗಳಲ್ಲಿ ಕನ್ನಡದ ಬಳಕೆ ಮಾಡಿ ಕನ್ನಡ ಉಳಿಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಸಿಂಗ್ ಹೆಳಿದ್ದರು.  

ಮಳಗಿ ಕೆ. ಪಿ. ಎಸ್ ಶಾಲೆಯ ಕನ್ನಡ ಅಧ್ಯಾಪಕ ಗಂಗಾಧರ ನಾಯ್ಕ ಪುರದಮಠ ಅವರು,ಮಾತನಾಡುತ್ತ ಕನ್ನಡ ಎಂದರೆ ಕೇವಲ ಭಾಷೆಗಷ್ಟೆ ಸೀಮಿತವಲ್ಲ, ಇಲ್ಲಿನ ನೆಲ ಜಲ ಗಡಿ ಸಾಹಿತ್ಯ ಸಂಸ್ಕೃತಿ ಕಲೆ ಎಲ್ಲವನ್ನು ಒಳಗೊಂಡಿದೆ ಕರ್ನಾಟಕ ಏಕೀಕರಣ ಕಾಲದಿಂದ ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ ನಡೆದು ಬಂದ ಹಾದಿಯನ್ನು ವಿವರಿಸಿದರು.  ಕ ಸಾ ಪ ಅಧ್ಯಕ್ಷರು  ವಸಂತ ಕೋಣಸಾಲಿ ಮಾತನಾಡುತ್ತ “ಕನ್ನಡವೇ ಸತ್ಯ ಕನ್ನಡವೇ ನಿತ್ಯ”ಎಂಬ ಕನ್ನಡ ಭಾಷೆ ಉಳಿಯಬೇಕಾದರೆ ಅದನ್ನು ನಾವು ಕನ್ನಡವನ್ನು ಬಳಸಿ ಬೆಳೆಸಬೇಕು, ನಾವು ಕನ್ನಡದಲ್ಲಿಯೇ ಮಾತಾಡಬೇಕು ಆಗ ಮಾತ್ರ ಕನ್ನಡದ ಅಸ್ಥಿತೆ ಉಳಿಯುತ್ತದೆ.  

ಕ ಸಾ ಪಾ ಅಧ್ಯಕ್ಷರು ಹೇಳಿದರು.   ಈ ಸಂದರ್ಭದಲ್ಲಿ ಕೆ ಪಿ ಎಸ್ ಶಾಲೆ ಅಧ್ಯಾಪಕರು ಗಂಗಾಧರ ನಾಯ್ಕ ಪುರದಮಠ ಕಸಾಪ ಅಧ್ಯಕ್ಷರು ವಸಂತ ಕೊಣಸಾಲಿ  ಕಸಾಪ ಗೌರವ ಕಾರ್ಯದರ್ಶಿ ಎಸ್ ಡಿ ಮುಡೆಣ್ಣವರ ಕಸಾಪ ಗೌರವ ಕೋಶಾಧ್ಯಕ್ಷರಾದ ನಾಗರಾಜ ಅರ್ಕಸಾಲಿ, ಸಂಗಪ್ಪ, ಕೋಳೂರು, ಎಸ್ ಬಿ. ಹೂಗಾರ, ಚಿದಾನಂದ ಪಾಟೀಲ, ಗೌರಮ್ಮ ಕೊಳ್ಳಾನವರ ಹಾಗೂ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಹರಿಜನ್ ಸೇರಿದಂತೆ  ಕಾಲೇಜಿನ  ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು. 


ಸುದ್ದಿ ಓದಿ