ಬಳ್ಳಾರಿ

"ಅಪ್ಪು ಅಜರಾಮರ"ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

"ಅಪ್ಪು ಅಜರಾಮರ"ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬಳ್ಳಾರಿ, ನ.2: ಕರ್ನಾಟಕ  ಜನಸೈನ್ಯದ ವತಿಯಿಂದ 67ನೇ  ಕಾರ್ಯಕ್ರಮವನ್ನು ನಗರದ ರಾಜ್ಕುಮಾರ್ ರಸ್ತೆಯಲ್ಲಿರುವ ಸೆಂಟನರಿ ಹಾಲ್ನಲ್ಲಿ "ಅಪ್ಪು ಅಜರಾಮರ" ಎಂಬ ಶೀಷರ್ಿಕೆಯಡಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಕಲ್ಯಾಣ ಸ್ವಾಮಿಗಳು ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ ಮಾತನಾಡುತ್ತಾ, ಕನರ್ಾಟಕ ರಾಜ್ಯದ ಕನ್ನಡ ರಾಜ್ಯೋತ್ಸವದ ಇತಿಹಾಸ ಗಂಗರು ಕದಂಬರು ರಾಷ್ಟ್ರಕೂಟರು ಚಾಲುಕ್ಯರು ಹೊಯ್ಸಳರು ವಿಜಯನಗರ ಸಾಮ್ರಾಜ್ಯದ ಒಳಗೆ ಕನ್ನಡ ಪರ ರಾಜ್ಯೋತ್ಸವಗಳು ಯಾವ ತರ ಬಗ್ಗೆ ಬಹಳಷ್ಟು ಮಾರ್ಮಿಕವಾಗಿ ನುಡಿದರು. ಬಳ್ಳಾರಿ ಜಿಲ್ಲೆ ಅಷ್ಟೇ ಅಲ್ಲದೆ ಕನರ್ಾಟಕ ರಾಜ್ಯದಲ್ಲಿ ಕರ್ನಾಟಕ  ಜನಸೈನ್ಯ ವಿನೂತನವಾಗಿರತಕ್ಕಂತಹ ಹೋರಾಟಗಳು ನಾಡು ನುಡಿ ಜಲ ಕನ್ನಡ ಸಂಸ್ಕೃತಿ ಆಚಾರ ವಿಚಾರಗಳಿಗೆ ಒತ್ತನ್ನು ಕೊಟ್ಟು ಒಳ್ಳೆಯ ದಿಕ್ಕಿನಲ್ಲಿ ನಡಿತಾ ಇರೋದು ಬಹಳಷ್ಟು ಒಳ್ಳೆಯ ಸಂಗತಿ. ಜೊತೆಗೆ ಕನ್ನಡಪರ ಕಾಳಜಿ ಕೇವಲ ಸಂಘಟನೆಗೆ ಮಾತ್ರ ಸಾಲದು, ಅದು ಎಲ್ಲರ ಮನ ಮನದಲ್ಲಿ ಮನೆ ಮನೆಯಲ್ಲೂ ಇರಬೇಕು ಎಂಬ ಆಸೆ ನುಡಿಗಳನ್ನು ನುಡಿದರು. 

ಮತ್ತೋರ್ವ ಅತಿಥಿ ಸಾಮಾಜಿಕ ನಿರ್ದೇಶನಾಲಯದ ರಾಜಕಾರಣ ಸಂಯೋಜಕ ಕೇಶವಮೂರ್ತಿ  ಮಾತನಾಡುತ್ತಾ, ಕನ್ನಡ ನಾಡು ನುಡಿ ಕೇವಲ ಕೇವಲ ಆಚರಣೆಯಲ್ಲಿ ಇರಬಾರದು. ಅದು ಮುಂದಿನ ಪೀಳಿಗೆಯ ಸಂಸ್ಕೃತಿಗೆ ಬುನಾದಿ ಆಗಬೇಕು ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿಷ್ಟಿ ರುದ್ರಪ್ಪನವರು ಮಾತನಾಡುತ್ತಾ, ಕನ್ನಡ ಭಾಷೆ ಕನ್ನಡ ನುಡಿ ಕನ್ನಡ ಆಚಾರ ವಿಚಾರಗಳನ್ನು ಹೊರತುಪಡಿಸಿ ಕನ್ನಡ ಜನತೆಗೆ ಪೆಟ್ಟು ಬಿದ್ದಾಗ ಕುಟುಂಬಕ್ಕೆ ಬಿದ್ದಾಗ ಅದು ವ್ಯಕ್ತಿಗೆ ಎಂದು ಪರಿಗಣಿಸಿ ಇಂಥ ಸಂಘಟನೆ ಇದ್ದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು. 

ವಿಶೇಷವಾಗಿ ಬಳ್ಳಾರಿ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಂಪತ್ ಕುಮಾರ್ ಪೂಜಾರ್ ಮಾತನಾಡಿ, ಕನ್ನಡ ಕನ್ನಡ ಭಾಷೆ ಮಾತೃಭಾಷೆಯಾಗದೇ, ಅದು ಮನದಾಳದ ಮಾತು ಹೃದಯದ ಮಿಡಿತವಾಗಬೇಕು. ಕನ್ನಡಕ್ಕೆ ಜಾತಿ ಭೇದವಿಲ್ಲ ಕನ್ನಡ ಎನ್ನುವುದು ವಿಶಾಲವಾದದ್ದು, ಅಂತಹ ಕನ್ನಡವನ್ನು ಮಹಾನ್ ಮಹಾನ್ ನಾಯಕರ ಹೋರಾಟದ ಫಲದಿಂದ ಇವತ್ತು ಅಖಂಡ ಕರ್ನಾಟಕ ಏಕೀಕರಣಗೊಂಡ ನಂತರ ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇವೆ. ಜೊತೆಗೆ ಮುಂಚಿತವಾಗಿ ಈ ಕಾರ್ಯಕ್ರಮ, ಏನು ವಿಶೇಷ ಕೇಳಿ ಬಹಳಷ್ಟು ಅರ್ಥಗಭರ್ಿತವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗಳಿಸಿದ ನಾಯಕರನ್ನು ಗುರುತಿಸಿ, ಅವರಿಗೆ ಮತ್ತೊಂದು ಕೆಲಸ ಮಾಡಲು ಪ್ರೇರಣೆ ನೀಡಿದಂತೆ ಪ್ರಶಸ್ತಿಗಳು ಆಗಿವೆ. ಅಂತ ಹೇಳಿ ತಮ್ಮ ಅತಿಥಿ ಭಾಷಣ ತಿಳಿಸಿದರು. 

ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಕಲ್ಯಾಣ ಸ್ವಾಮಿಗಳು ಮಾತನಾಡಿ, ಕನ್ನಡನಾಡು ಎಂತಹ ಶ್ರೀಮಂತಿಕೆ ಸಂಸ್ಕೃತಿಯ ನಾಡು ಎಂಬುವುದನ್ನು ಹೀಗಿರುವಂತಹ ಪೀಳಿಗೆ ಡಾ. ಪುನೀತ್ ರಾಜಕುಮಾರ್ ಸೇವಾರತ್ನ ಪ್ರಶಸ್ತಿ ಪುರಸ್ಕೃತ ನರೇಂದ್ರಬಾಬು, ಶ್ರೀನಿವಾಸ್, ಸುನಿಲ್ ಕುಮಾರ್, ಮಂಜುನಾಥ, ಮಮತಾ ಸೋನಿ ಇವರು ಬಳ್ಳಾರಿ ಜಿಲ್ಲೆಯಲ್ಲಿ ತಾವು ಮಾಡಿರುವ ಜನಪರ ಜನಪದ ಕಾಳಜಿಯನ್ನು ಗುರುತಿಸಿ ಅಂಥವರಿಗೆ ಡಾ. ಪುನೀತ್ ರಾಜಕುಮಾರ್ ಸೇವಾ ಪ್ರಶಸ್ತಿ ನೀಡುವುದರ ಜೊತೆಗೆ ಅವರ ಜವಾಬ್ದಾರಿ ಹಾಗೂ ಅವರಿಗೆ ಪ್ರೋತ್ಸಾಹಿಸಿದಂತೆ ಕನರ್ಾಟಕ ಜನ ಸೇನೆ ಮಾಡಿತು. ಗೌರವ ಸನ್ಮಾನವನ್ನು ರಮೇಶ್ಗೌಡ ಪಾಟೀಲ್, ಮಂಜುನಾಥ ಗೋವಿಂದವಾಡ, ಕಾಳಿದಾಸ ಇವರಿಗೆ ಮಾಡಲಾಯಿತು. 

ಕಾರ್ಯಕ್ರಮದ ಪೂರ್ವದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಜನಸೇವೆಗಳನ್ನು ಮಾಡತಕ್ಕಂತಹ ಎಲ್ಲಾ ಮಹನೀಯರನ್ನು ನೆನೆದು ಜೊತೆಗೆ ಕಾರ್ಯಕ್ರಮದ ಮೊದಲಿಗೆ ಎಲ್ಲಾ ಗಣ್ಯರೊಂದಿಗೆ ನಾರಾಯಣರಾವ್ ಉದ್ಯಾನವನದಲ್ಲಿರುವ ಭುವನೇಶ್ವರಿ ತಾಯಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು 

ಸುದ್ದಿ ಓದಿ