ಎಎಪಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಬಳ್ಳಾರಿ.ನ.01: ಹಲವಾರು ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿದ ಈ ದಿನ ಕನ್ನಡಿಗರು ಹೆಮ್ಮೆಪಡುವ ದಿನ, ಇದಕ್ಕಾಗಿ ಆಲೂರು ವೆಂಕಟರಾಯರು, ಗೋಕಾಕ್ ವರದಿಯ ನೇತಾರ ಡಾ.ರಾಜ್ಕುಮಾರ್, ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಪಿಂಜಾರ ರಂಜಾನ್ಸಾಬ್ ಸೇರಿದಂತೆ ಹಲವಾರು ನಾಯಕರ ಹೋರಾಟದ ಪ್ರತಿಫಲವಾಗಿದೆ. ಕರ್ನಾಟಕ, ಕನ್ನಡವನ್ನು ಉಳಿಸಿ ಬೆಳಸಿ, ಬಳಸಿಕೊಂಡು ಹೋಗುವ ಜವಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿ ಬಿ ಮಲ್ಲಪ್ಪ ಹೇಳಿದರು.
ಅವರು ಇಂದು ಪಕ್ಷದ ಕಛೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎಂ ರಾಜಣ್ಣ, ಕಿರಣ್ಕುಮಾರ್, ಖಲಂದರ್, ಖಾದ್ರಿ, ಸೌಭಾಗ್ಯ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರಿದ್ದರು.